ಕರ್ತವ್ಯದ ನೆಪದಲ್ಲಿ ಅತ್ಯಾಚಾರ ಮಾಡುವ ಹೆತ್ತವರು ಕತ್ತೆಯೊಂದಕ್ಕೆ ಗಂಟು ಹಾಕಿದರೂ ಏನು ಮಾಡುವುದು ಹಣೆ ಬರಹವೆಂಬ ತಲೆ ಬುಡವೇ ಇಲ್ಲದ ಬುದ್ಧಿಗೇಡಿ ತತ್ವಕ್ಕೆ ಶರಣಾಗದೆ ನಿಷ್ಠೆ, ಒಳ್ಳೆತನದ ಸೋಗು ಹಾಕಿ ಬೆಂಕಿ ಬಿದ್ದ ಹತ್ತಿಯಂತೆ ಹಾಳಾಗಲೊಲ್ಲದೆ ...

ಕಾಣೆಯಾಗಿದೆ ನನ್ನ ಬಾಲ್ಯ ಹುಡುಕಿ ಕೊಡಮ್ಮ ನಿನ್ನ ಎದುರೆ ಹೀಗಾದರೆ ಹೇಗೆ ಹೇಳಮ್ಮ? //ಪ// ಸಕ್ಕರೆ ಸವಿ ನಿದ್ದೆಯಲಿ ಇರುವಾಗ ನಾನು ಶಾಲೆಗೆ ಹೊತ್ತಾಯಿತು ಎಂದರಚುವೆ ನೀನು ಸೂರ್ಯನನ್ನು ನೋಡಲಿಲ್ಲ ಮಣ್ಣಲಿ ನಾ ಆಡಲಿಲ್ಲ ಪುಸ್ತಕದ ಮೂಟೆ ಹೊರುವ ಶಿಕ...

ಮೂಲ: ವಿ ಎಸ್ ಖಾಂಡೇಕರ ಆ ಎರಡು ಚಿತ್ರಗಳಲ್ಲಿ ಹೆಚ್ಚು ಆಕರ್ಷಕವಾದದ್ದು ಯಾವದು ಎಂಬುದನ್ನು ಹೇಳಲಿಕ್ಕೆ ಎಷ್ಟೋ ರಸಿಕರಿಗೆ ಕೂಡ ಆಗಲಿಲ್ಲ. ಅಂದ ಬಳಿಕ ಸಾಮಾನ್ಯ ಪ್ರೇಕ್ಷಕಗಣದ ಗತಿಯೇನು? ಒಬ್ಬ ರಸಿಕ ತರುಣನಂತೂ ಆ ಎರಡೂ ಚಿತ್ರಗಳನ್ನು ನೋಡಿ ಉದ್ಘಾ...

ಇನಿಯಾ ನೀ ಕೈ ಹಿಡಿದಾಗ ಕನಸುಗಳು ಅರಳಿ ಸಿಹಿನೆನಪಲಿ ಮಿಂದು ಬದುಕಿದ್ದೆ ಅಂದು ಇನಿಯಾ ನೀ ಕೈ ಕೊಟ್ಟಾಗ ಕನಸುಗಳು ಕಮರಿ ಕಹಿನೆನಪುಗಳ ಕೊಂದು ಬದುಕಿದ್ದೇನೆ ಇಂದು *****...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...