Day: February 19, 2021

#ಹನಿಗವನ

ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦

0
ಮೂಲತಃ ಹಾಸನದವರು. ಓದಿದ್ದು ಹಾಸನದ ಮಲೆನಾಡು ಎಂಜಿನಿಯರಂಗ್ ಕಾಲೇಜಿನಲ್ಲಿ ಬಿ.ಇ. ಹಾಗು ಎಂ.ಟೆಕ್. ಈಗ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕಾರ್‍ಯನಿರ್‍ವಹಣೆ. ‘ಮೊದಲ ತೊದಲು’, ‘ಬೆಳಕಿನ ಬೇಲಿ’, ‘ಗೋಡೆಗಳ ನಡುವೆ...’ ಮತ್ತು ‘ಕುಶಲೋಪರಿ’ ಪ್ರಕಟಿತ ಕೃತಿಗಳು.

ಅಲೆ ಬೋಧಿಸುತ್ತಿದೆ… ದಂಡೆ ಆಲಿಸುತ್ತಿದೆ… *****

#ವ್ಯಕ್ತಿ

ಇನ್ನೊಮ್ಮೆ ಅಡಿಗರು

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಕವಿ ಗೋಪಾಲ ಕೃಷ್ಣ ಅಡಿಗರ ಕಾವ್ಯದ ಕುರಿತಾಗಿ ಹೊಸತಾದ ವಿಮರ್ಶಾಲೇಖನಗಳ ಸಂಗ್ರಹವೊಂದನ್ನು ತರುವ ದೃಷ್ಪಿಯಿಂದ ಯುವ ವಿಮರ್ಶಕ ಎಸ್. ಆರ್. ವಿಜಯಶಂಕರ ಅವರು ನನ್ನಿಂದ ಲೇಖನವೊಂದನ್ನು ಅಪೇಕ್ಷಿಸಿದ್ದಾರೆ. ನಾನಾದರೆ ೧೯೭೪ರಷ್ಟು ಹಿಂದೆಯೇ ಕನ್ನಡ ಕಾವ್ಯಕ್ಕೆ ಅಡಿಗರ ಕೊಡುಗೆ ಎಂಬ ವಿಷಯವಾಗಿ ಇಂಗ್ಲಿಷ್ನಲ್ಲಿ ಲೇಖನ ಬರೆದಿದ್ದು, ಅದರ ಕನ್ನಡ ಭಾಷಾಂತರ (ಜಿ. ಎನ್. ರಂಗನಾಥ ರಾವ್) ಹಲವೆಡೆ […]

#ಅನುವಾದ

ದೂರು

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ದೂರು ಯಾರಿಗೆ ಹೇಳುತ್ತೀಯೆ ಹೃದಯವೇ? ನೀನು ನಡೆಯುವ ಯಾರೂ ಸುಳಿಯದ ಹಾದಿಯಲ್ಲಿ ಅರ್ಥವಾಗದ ಮನುಷ್ಯ ಕುಲವನ್ನು ಆಗಾಗ ಅಡ್ಡ ಹಾಯುವೆ. ಭವಿಷ್ಯಕ್ಕೆ ಗತಿ ಇರದ ಭವಿಷ್ಯಕ್ಕೆ, ಕಳೆದ ನಾಳೆಗೆ ಸಾಗುವ ಮಾರ್ಗಕ್ಕೆ ವಶವಾದದ್ದು ಮತ್ತಷ್ಟು ವ್ಯರ್ಥ. ಮೊದಲು ದೂರಿದ್ದೆಯಾ? ಏನದು? ಮಾಗದೆ ನೆಲಕ್ಕೆ ಕಳಚಿ ಬಿದ್ದ ಸಂತೋಷದ ಹಣ್ಣು. ಈಗ ನನ್ನ ಆನಂದದ ಮರವೇ ಮುರಿದು […]