Day: February 3, 2021

#ಕವಿತೆ

ಯಾವಾಗಲೂ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಯಾ ಯಾ ಯಾ ಯಾವಾಗಲೂ ಯಾವುದನ್ನೂ ಬಯಸದಂತೆ ಯಾರನ್ನೂ ನೋಯಿಸದಂತೆ ಯಾಕಾಗೂ ಕೊರಗದಂತೆ ಯಾರ ಮೇಲೂ ಒರಗದಂತೆ ಯಾ ಯಾ ಯಾ ಅಯ್ಯಾ ನಮ್ಮ ನಡೆಸೋ ಯಾವಾಗಲೂ ವಾದಕೆಂದೆ ವಾದಿಸದಂತೆ ವಾಲಗ ಸುಮ್ಮನೆ ಊದದಂತೆ ವಾರಗೆಯವರ ಮರೆಯದಂತೆ ವಾರೆ ನೋಟಕೆ ಸೋಲದಂತೆ ವಾ ವಾ ವಾ ಅಯ್ಯಾ ನಮ್ಮ ನಡೆಸೋ ಯಾವಾಗಲೂ ಗಲ್ಲಕೆ ಕೈಯಿಟ್ಟು ಕೂರದಂತೆ […]

#ಸಾಹಿತ್ಯ

ಅನುವಾದದ ಕ್ರಿಯಾಶೀಲತೆ

0

ಕನ್ನಡದ ಆಧುನಿಕ ಸಾಹಿತ್ಯ ಅನುವಾದ ಕಾರ್ಯದಿಂದಲೇ ಆರಂಭಗೊಂಡು ಮುಂದೆ ಸ್ವತಂತ್ರ ಸಾಹಿತ್ಯ ಬೆಳೆಯಲು ಕಾರಣವಾಗಿದೆ. ಸಂಸ್ಕೃತ ಮತ್ತು ಆಂಗ್ಲ ಸಾಹಿತ್ಯ ಕನ್ನಡದಲ್ಲಿ ಅನುವಾದ ಕ್ರಿಯೆಯನ್ನು ವಿಶೇಷವಾಗಿ ಆಕರ್ಷಿಸಿದ್ದನ್ನು ನಾವು ಸಾಹಿತ್ಯ ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆ. ಬಸವಪ್ಪ ಶಾಸ್ತ್ರಿಗಳು ಶೇಕ್ಸ್‌ಪಿಯರ್ ಮತ್ತು ಕಾಳಿದಾಸನ ನಾಟಕಗಳನ್ನು ಒಡೆಯರ ಕಾಲದ ರಂಗಪ್ರಯೋಗದ ಅಗತ್ಯಕ್ಕಾಗಿ ಅನುವಾದಿಸಿದ್ದಾರೆ. ಅವರ ಸಂಸ್ಕೃತ ನಾಟಕಗಳ ಅನುವಾದದಷ್ಟು […]

#ನಗೆ ಹನಿ

ತಾಯತದ ಪ್ರಭಾವ

0
ತೈರೊಳ್ಳಿ ಮಂಜುನಾಥ ಉಡುಪ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)

ಗುಂಡ : “ನೀವು ಕೊಟ್ಟ ತಾಯತದ ಪ್ರಭಾವ ಚೆನ್ನಾಗಿದೆ ಸ್ವಾಮಿ.” ಶಾಶ್ತ್ರಿಗಳು : “ತಾಯತ ಕಟ್ಟಿದ ಮೇಲೆ ನಿಮ್ಮ ಹೆಂಡತಿಗೆ ಹಿಡಿದ ಭೂತ ಓಡಿ ಹೋಯಿತು ತಾನೆ” ಗುಂಡ : “ಇಲ್ಲ ಸ್ವಾಮಿಗಳೇ ನನ್ನ ಹೆಂಡತಿಯೇ ಓಡಿ ಹೋದಳು.” *****