ಮಾತು ಸುಣ್ಣಾ ಮೌನ ಮಲ್ಲಿಗೆ

ಒಡಕು ಮಸರಿನ ಸಿಡಿದ ಎಸರಿನ ಶಬ್ಬ ಡಂಗುರ ನಿಲ್ಲಲಿ|| ಉಲಿಯ ನುಲಿಯಲಿ ಬಲಿಯ ನೂಲದೆ ಶಬ್ದ ಗಂಟೆಯ ಮೀರುವೆ ತಮಟೆ ಜಾಗಟೆ ಕಾಳಿಭೇರಿಯ ಶಂಖವಾದ್ಯವ ದಾಟುವೆ ಮಾತು ಸುಣ್ಣಾ ಮೌನ ಮಲ್ಲಿಗೆ ಹೂವಿನೆದೆಯಲಿ ಮಲಗುವೆ...

ವಸ್ತುನಿಷ್ಠ ವಿಮರ್ಶೆ

ಸಂಜೆ, ತಿಂಡಿಯ ವೇಳೆ ಹೇಳಿ ಕಳಿಸಿದ ಹಾಗೆ ಗೆಳೆಯರಾಗಮನ. ಎಲ್ಲ ಬಲು ಖುಷಿಯಾಗಿ ಹರಟೆ ಕೊಚ್ಚುತ್ತ ಕಾದೆವು. ಬಂತು ತುಪ್ಪದಲಿ ಬೆಂದು ಘಮ ಘಮಿಸುತ್ತ ಬಿಸಿ ಬಿಸೀ ದೋಸೆ. ಇನ್ನೊಂದು ಮತ್ತೊಂದು ಎಂದು ನಿಸ್ಸಂಕೋಚ...