ಮಿಕ್ಕಿಲ್ಲವೇ ನನಗೆ ನಾನು?

ಬೊಗಸೆಯಲ್ಲಿನ ನೀರು ಸೋರಿ ಹೋದರೆ ಏನು? ತೇವವಿಲ್ಲವೇ ಒಂದಿಷ್ಟು ಮೊಳಕೆಯೊಡೆಯುವಷ್ಟು? ಎಷ್ಟೊಂದು ಮಾತುಗಳು ತುಟಿ ಮೀರಿ ಹೋದರೆ ಏನು? ಅವ್ಯಕ್ತ ಭಾವಗಳೇ ಎದೆ ತುಂಬದೇನು? ಅಲೆಗಳೊಂದೂ ದಡಕುಳಿಯದಿದ್ದರೇನು? ಅಪ್ಪಿಲ್ಲವೇ ಮರಳು ಶಂಖ, ಚಿಪ್ಪಿನೊಂದಿಗೇ ದಡವನು?...

ಚುಟುಕಗಳೆಂದರೆ – ೨

ಚುಟುಕಗಳೆಂದರೆ, ಕಾವ್ಯ ರಸಾನುಭವದ ಗುಟುಕುಗಳು, ಕಾವ್ಯಲಯದ ಸಣ್ಣ ಸಣ್ಣ ಕಿಟಿಕಿಗಳು, ಮುಳ್ಳುಬೇಲಿಯ ಮೇಲೆ ಹಬ್ಬಿರುವ ಕಾಡುಬಳ್ಳಿಗಳಲ್ಲಿ ಕ್ಷಣದಲ್ಲರಳಿ ಮರುಕ್ಷಣದಲ್ಲಿಲ್ಲವಾಗುವ ಬಣ್ಣ ಬಣ್ಣದ ಹೂವುಗಳು ಕಾವ್ಯರಾಶಿಯನ್ನಳೆವ ಸೇರು, ಪಾವು, ಚಟಾಕುಗಳು. *****