ರಂಗಪ್ರವೇಶ

ಹೊತ್ತು ಮೀರುತ್ತಿದೆ ಇನ್ನೇನು ಈಗಲೋ ಆಗಲೋ ತೆರೆ ಮೇಲೇಳುವ ಸಮಯ! ಗಿಜಿಗುಡುತಿದೆ ಸಭಾಂಗಣ ಸುತ್ತ ಹಬ್ಬಿದೆ ಮಬ್ಬು! ಸಾಕಿನ್ನು ಮೇಲೇಳು ಮುಗಿದಿಲ್ಲವೇ ಇನ್ನೂ ಪ್ರಸಾಧನ? ತುಟಿಬಣ್ಣ ಒಂದಿನಿತು ಢಾಳಾಯ್ತು ಕೆನ್ನೆಗಿನ್ನೊಂದಿಷ್ಟು ಕೆಂಪಿದ್ದರಾಗಿತ್ತು! ಸರಿಪಡಿಸು ಸುಕ್ಕಾದ...

ಕವಿತೆ

ಶಬ್ಧ, ಅರ್ಥ, ವ್ಯಾಕರಣ, ಛಂದಸ್ಸಿನ ಗೋಡೆಗಳ ಬೋನಿನಲ್ಲಿ ಹಿಡಿಯ ಹೊರಟಾಗ ಬೆದರಿ ಬಾಗಿಲಿಲ್ಲದ ಬಿಲಗಳಲ್ಲಿ ಬಾಲ ಮುದುರಿ ಅಡಗಿದ ಕವಿತೆಗಳು, ಶಾಂತವಾಗಿ ಶರಣಾದಾಗ ಮನದ ಆಗಸದಲ್ಲಿ ಹಕ್ಕಿಗಳಂತೆ ರೆಕ್ಕೆ ಬಡಿದು ಸ್ವಚ್ಚಂದವಾಗಿ ಹಾರಾಡುತ್ತಿವೆ. *****