ಕಳೆ

ಅವರು ಜಗಿದುಗಿದ ತ್ಯಾಜ್ಯ ಈ ಬೀಜ! ಅಂದು ಎಲ್ಲಿಂದಲೋ ಹಾರಿ ಬಂದು ನಮ್ಮವರಂತೆಯೇ ಮುಖವಾಡ ತೊಟ್ಟು ನಮ್ಮವರೊಂದಿಗೇ ಮನೆ ಹೊಕ್ಕು ನಮ್ಮಲ್ಲೇ ತಳವೂರಿ ನಮ್ಮದೇ ಆಗಿ ನಮ್ಮವರ ಜೊತೆಗೂಡಿ ತಾನೂ ನಮ್ಮದೇ ಹಿತ್ತಲಲಿ ಬೇರೂರಿ...

ಏನು ಪೋಸು

ಮನೇಲಿ ಹೆಂಡ್ತಿ ಮೇಲೆ ಇಲ್ದೇ ಇದ್ದ ಬಾಸು ವೇದಿಕೆ ಮೇಲೆ ಭಾಷಣ ಮಾಡಿದ್ದು ನೋಡಿದರೆ ಏನು ಪೋಸು ಬಾಯಲ್ಲಿ ಬೆಟ್ಟಿಟ್ಟರೆ ಕಚ್ಚಲಿಕ್ಕೆ ಬರದ ಕೂಸು, ಹೊತ್ತಿಗ್ಹತ್ತು ಲೀಟರ್ ಹಾಲು ಹಿಂಡುವ ಹಾಲೆಂಡ ಹಸು. *****