
ಸರಿದೀತೇ ಕಾರಿರುಳು ಈ ದೇಶದ ಬಾಳಿಂದ? ಸುರಿದೀತೇ ಹೂ ಬೆಳಕು ಈ ಭೂಮಿಗೆ ಬಾನಿಂದ? ಅಲುಗಾಡಿದ ಛಾವಣಿ ಮೇಲೆ ಬಿರುಕಾಗಿವೆ ಗೋಡೆಗಳು, ನಡುಗುತ್ತಿದೆ ಕಾಲಡಿ ನಲವೇ ಗುಡುಗುತ್ತಿವೆ ಕಾರ್ಮುಗಿಲು, ಕೆಳಸೋರಿದೆ ಮಳೆಧಾರೆಯು ಹರಕಲು ಸೂರಿಂದ, ಕೊನೆಯೆಂದಿಗೆ...
ಬಿಸಿಲು ಸುಟ್ಬು ಬಿರುಕು ಬಿಟ್ಟು ಮಳೆಯ ನೀರನೆ ಕುಡಿದು ಹಸಿರು ತೊಟ್ಟ ಕಲ್ಲುಬೆಟ್ಟ ನನ್ನಪ್ಪ ಒಡಲು ಮೆಟ್ಟಿ ಸುತ್ತುಗಟ್ಟಿ ಮೇಯುವ ದನ ಕರು ಕುರಿಗಳಿಗೆ ಹಸಿರು ಹುಲ್ಲು ಕೊಟ್ಟ ಕಲ್ಲುಬೆಟ್ಟ ನನ್ನಪ್ಪ ತೊಡೆಯ ಸಂದಿಯಲಿ ಕಳ್ಳು ಬಳ್ಳಿಯ ತೆರದಿ ಬೇರು ...














