ನೀರ ಕಪ್ಪೆ, ಮರದ ಕಪ್ಪೆ
ತೋಡುಗಳಿಂದ ಹೊಳೆಗೆ ಹೊಳೆಯಿಂದ ನದಿಗೆ ಹೋಗುವೆನು. ಹಲವು ಭೂಖಂಡಗಳ ನದಿಗಳಲ್ಲಿ ಈಜಾಡುವೆನು. ಹಲವು ನದಿಗಳ ನೀರು ಕುಡಿಯುವೆನು. ಏಳು ಸಮುದ್ರಗಳನ್ನು ಹೊಗುವೆನು. ತಿಮಿಂಗಿಲಗಳನ್ನು ನುಂಗುವೆನು. ನನ್ನ ಮೈಕಾಂತಿಗೆ ನಕ್ಷತ್ರಗಳು ಅಸೂಯೆಗೊಳ್ಳುವುದಿದೆ. ಮುಳುಗಿದ ಹಡಗುಗಳಿಂದ ನಾನೊಂದು...