ನೀಲಿ ನಭದ ತಳಿಗೆಯಲ್ಲಿ ಚೆಲ್ಲಿ ಹೊಳೆವ ತಾರೆಗಳು ಸುಧಾಕರನಲ್ಲಿ ಇಂದು ಸಂಭ್ರಮ ಮೂಡಿಸುತ್ತಿಲ್ಲ. ಶುಭ್ರ ಶ್ವೇತ ಚಂದಮಾಮ ಅವನಿಗಿಂದು ನಿಸ್ತೇಜ, ನೀರಸ ಹಾಗೂ ನಿಶ್ಯಕ್ತ. ಪ್ರತಿ ಇರುಳ ನೆರಳಿನಲ್ಲಿ ಮನತಣಿಸುತ್ತಿದ್ದ ನಸುಗಾಳಿ ಅವನಿಗೆ ಈ ದಿನ ಅಸಹನ...

ಬರಕೋ ಪದಾ ಬರಕೋ ಇದರನ್ವಯ ತಿಳಿಕೋ                      ||ಪ|| ಸದಮಲಜ್ಞಾನದ ಕುದಿಉಕ್ಕಿ ಬರುವಾಗ ನದರಿಟ್ಟು ನಿನ್ನೊಳು ಸದಮಲ ತತ್ವದಿ     ||ಅ.ಪ.|| ಅಡಿಗಣ ಪ್ರಾಸಕೆ ನಿಲುಕದ ಪದವು ನುಡಿಶಬ್ದಕೆ ನಿಲುಕದ ಪದವು ಎಡತೆರವಿಲ್ಲದೆ ನಡುವಿನಕ್ಷರದ...

ಏಕೆ ಇನ್ನೂ ನಮ್ಮ ನಡುವೆ ವಿರಸ ಕಲಹ ಹರಡಿದೆ, ಕುರುಡ ಹಮ್ಮು ಬಿಮ್ಮುಗಳಲಿ ಮಾನವತೆಯು ನರಳಿದೆ… ಭೂಮಿ ಬಾಯ ತೆರೆಯುವಂತೆ, ಬಾನು ಬೆಂಕಿಯುಗುಳುವಂತೆ, ಸಮರ ತಂತ್ರ ನಡೆದಿದೆ… ಶಾಂತವೀಣೆ ತಂತಿ ಹರಿದ ದೇಶ ದೇಹದಲಪ ಸ್ವರ, ದಯದ ತುಂಬುರ ನ...

ಪದವ ಬ್ಯಾಗನೆ ಕಲಿ ಶಿವ ಶರಣರ ಹೃದಯ ಕೀಲಿ ||ಪ|| ಅಡಿಗಣ ಪ್ರಾಸಕೆ ದೊರಕದ ಪದವು ನುಡಿಶಬ್ದಕೆ ನಿಜ ನಿಲುಕದ ಪದವು ಕುಡುಬಟ್ಟಿನ ಕೈತಾಳ ಮಾತ್ರೆಯ ಬಡಿವಾರಕೆ ಬೈಲಾಗದ ಬ್ರಹ್ಮನ ||೧|| ಗಣ ನೇಮದ ಗುಣಗೆಡಿಸುವ ಪದವು ತುಣಕುಶಾಸ್ತ್ರಕೆ ಮಣಿಯದ ಪದವು ಗು...

ಕುಂಬಾರಗ ಪದ ಬರಕೊಟ್ಟೆನು ಸದ್ಗುರು ಸಾಂಬಾ ವಿದುಧೃತ ಬಿಂಬಾ ||ಪ|| ಅಂಬರ ತಿರುಗಿಯಮೇಲೆ ಅರಲು ನೀರು ತುಂಬಿದ ಕೆಸರಿನ ಕುಂಭ ಕೊರೆಯುವಂಥಾ ||ಅ.ಪ.|| ಮಣ್ಣಿನೊಳು ಬೆನಕ ಹುಟ್ಟಿಸಿ ಮೆರೆವಾ ತನ್ನ ಹಸ್ತ ಮಧ್ಯದೊಳಿರುತಿರುವಾ ಸಣ್ಣ ಹಸಿಯ ತಿಳಿಯಿಂದಲಿ...

ದೊಡ್ಡ ಟ್ರಾನ್ಸ್‌ಪೋರ್ಟ್ ಕಂಪನಿಯ ಟ್ರಕ್ ಡ್ರೈವರನೊಬ್ಬ ಮನೆ ಕಟ್ಟಿಸಿದ. ಗೃಹ ಪ್ರವೇಶಕ್ಕೆ ಬಹಳಷ್ಟು ಜನ ಬಂದಿದ್ದರು. ಮಧ್ಯಾಹ್ನ ಬಂದವರಿಗೆಲ್ಲ ಸುಗ್ರಾಸ ಭೋಜನ. ಮತ್ತೆ ರಾತ್ರಿ ತನ್ನ ಖಾಸಾ ಜನರಿಗೆ ಭಾರೀ ಹೊಟೇಲಿನಲ್ಲಿ ಭರ್ಜರಿ ಪಾರ್ಟಿ ಏರ್ಪಡಿ...

ಹೊಸತದೆಲ್ಲಿ, ಹೊಸತದೆಲ್ಲಿ ಹೊಸಬರಾರೋ ಲೋಕದಿ… ಇಂದಿನ್ಹೊಸತಿನೊಸಗೆಯಲ್ಲಿ, ನಾಳೆ ನಿನ್ನೆಗೆ ಬೆಸುಗೆಯು ಬರುವ ಚಣದ ಹೆಗಲಿನಲ್ಲಿ ಇತಿಹಾಸದ ಯಾತ್ರೆಯು… ಇದ್ದುದಿಲ್ಲೇ ಇರುವುದೆಂತೊ ಛಿದ್ರ ಮನಸಿಜ ಛಾಯೆಯು… ಇರುವ ಹಮ್ಮಿನ ಹೆಮ್...

ಓ ಸಖೀ ಪ್ರಿಯ ಸಖಿ… ನೀನೆ ನನ್ನಯ ಶಿವ ಮುಖಿ, ನೀನಿರದಿರೆ ಆ ಪರಶಿವನೆಂತಾಗುವನೆ ಶಿಖಿ? ನನ್ನ-ನಿನ್ನಾ ಸಾಂಗತ್ಯಕೆ ಕೊನೆ-ಮೊದಲುಗಳೆಲ್ಲಿವೆ? ಬಾನು-ಬುವಿಯ ದಾಂಪತ್ಯಕೆ ತರ-ತಮಗಳು ತಾನೆಲ್ಲಿವೆ? ನಿನ್ನ ಬಸಿರಲಿ ದಿನವೂ ಜಗವು ಬಾಳಿದೆ, ನಿನ್ನ...

ಏನ ಕೊಡ ಏನ ಕೊಡವಾ ಹುಬ್ಬಳ್ಳಿಮಾಟ ಏನ ಚಂದುಳ್ಳ ಕೊಡವಾ ||ಪ|| ತಿಕ್ಕಿಲ್ಲ ಬೆಳಗಿಲ್ಲ ತಳತಳ ಹೊಳಿತದ ಕಂಚಿಂದಲ್ಲ ತಾಮ್ರದ್ದಲ್ಲ ಮಿರಿ ಮಿರಿ ಮಿಂಚುತದ ||೧|| ಆರು ಮಂದಿ ಅಕ್ಕ-ತಂಗ್ಯಾರು ಲೋಲಾಡಿದ ಕೊಡ ಮೂರಮಂದಿ ಮುತ್ತೈದಿಯಾರು ಲೋಲಾಡಿದ ಕೊಡ ||೨...

ದಿನವು ದಿನಪನ ಬರವು ಕೋರಿದೆ ಶುಭದ ಹಾರೈಕೆ, ಜೊನ್ನ ರಂಗನು ಸುಮಕೆ ಚಿತ್ರಿಸೊ ನಭದ ಓಲೈಕೆ, ಹಸಿರು ಬೆಟ್ಟದ ಬಟ್ಟಲದ ತುಂಬ ಅಮೃತಾ ಫಲದಾ ಪೇಯವು ತೆರೆ-ತೊರೆ, ನದ ನದಿಗಳ ರಸ ಪೀಯೂಷ ಪಾನೀಯವು, ಬೀಸೋ ಚಾಮರ ಹೊತ್ತ ಸಮೀರ ನಿನದದಿ, ಹಾಸು-ಹೊಕ್ಕಾಗಿ ಮಿ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...