Home / ಕವನ / ಭಾವಗೀತೆ

ಭಾವಗೀತೆ

ತುಂಬಿ ಬಂದ ಕಡಲಿಗೆ ಎಲ್ಲಿ ಅಂಕುಶ ಕಟ್ಟೆಯೊಡೆದ ಭಾವಕೆ ಇಹುದೆ ಕಲ್ಮಶ? || ಕಣ್ಣ ಕಣ್ಣ ಸೆಳೆತ ಅದಕೆ ಹೃದಯ ಮಿಡಿತ ತಡೆವರಾರು ಇಲ್ಲಿ? ಜೀವ ಸಹಜ ತುಡಿತ ಭಾವ ಸಹಜ ಯಾನ ಅದಕೆ ಯಾವ ನಿಯಮ? ಅದರ ದಿಕ್ಕು ಅದಕೆ ನಮ್ಮ ದಿಕ್ಕು ನಮಗೆ ತುಟಿಯ ಮೇಲೆ ನವಿಲು...

ಕಾಣುವ ಕಣ್ಣಿಗೆ ಇರುವಳು ರುಕ್ಮಿಣಿ ಕೃಷ್ಣನ ಬದಿಯಲ್ಲಿ; ರಾಧೆಯು ಎದೆಯಲ್ಲಿ. ಬಲ್ಲವರಾರು ಇರುವವರೆಂದು ರುಕ್ಮಿಣಿ ಎದೆಯಲ್ಲಿ; ಕೃಷ್ಣನ ಗಾಳಿಯಲಿ! || ತುಟಿಯಲಿ ರಾಮ ಮನದಲಿ ಕೃಷ್ಣ ಇದು ಗಂಡಿಗೆ ಪ್ರೀತಿ; ನಾವೊಪ್ಪಿದ ರೀತಿ. ನುಡಿಯದೆ ಹೋದ ಮಾತುಗಳ...

ಕಳೆದುಕೊಂಡ ಅಮ್ಮ ನಿನ್ನ ಎಲ್ಲಿ ಹುಡುಕಲಿ ಮತ್ತೆ ಪಡೆವ ಭಾಗ್ಯ ಉಂಟೆ ನನ್ನ ಹಣೆಯಲಿ || ಧರೆಗೆ ತಂದೆ ನೀನೆ ಧರಣಿ ನೀನೆ ಮೊದಲ ಅಕ್ಷರ ಮತ್ತೆ ಬೇರೆ ಬೇಕೆ ಹೇಳು ಇಟ್ಟಿಗೆಗಳ ಮಂದಿರ! ಜಗವ ತೋರಿ ಜಗವೆ ಆದೆ ಇದು ನಿನ್ನ ವಿಲಾಸ ಕಡೆಗೆ ಕರುಣೆ ತೋರದಾದೆ...

ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ ಪವಡಿಸಿಹ ಮಸೀದಿಯಲ್ಲಿ ಕ್ರಿಸ್ತನಾ ಕೋಣೆಯಲ್ಲ...

ತಳದಲ್ಲಿದ್ದವರು; ನಾವು ಬೂದಿಯಲೆದ್ದವರು ಕತ್ತಲೆ ಚರಿತೆಯ ಬೆತ್ತಲೆ ಮಾಡುವ ಕನಸನು ಹೊತ್ತವರು | ನಾವು ಕನಸನು ಹೊತ್ತವರು || ನೋವನು ಉಂಡವರು, ಉಂಡು ಮೌನವ ಹೊದ್ದವರು ಅಕ್ಷರ ದೂರದ ಕತ್ತಲೆ ಗವಿಯಲಿ ಬದುಕನು ಕಳೆದವರು | ಬೆಳಕ ಕಾಣದೆ ಹೋದವರು ಬದುಕನ...

ಎತ್ತ ಸಾಗಿದೆಯೊ ಕನ್ನಡ ರಥವು ತಿಳಿಯುತಿಲ್ಲವಲ್ಲ ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ ಅಯೋಮಯವು ಎಲ್ಲ || ಪ || ಕನ್ನಡಕ್ಕೇಳು ಜ್ಞಾನಪೀಠಗಳು ಬೀಗುತಿರುವೆವಲ್ಲಾ ಕುಸಿಯುತಲಿರುವ ನೆಲವು ಕಣ್ಣಿಗೆ ಕಾಣುತಿಲ್ಲವಲ್ಲ ಕವಿಗಳು ದಾಸರು ಶರಣರು ಸಂತರು ಕನ್...

ಗೂಡು ಕಟ್ಟಿದ ಹಕ್ಕಿ ತೊರೆದು ಹೋಯಿತಲ್ಲೊ ಹಾಡು ಮಾಡಿದ ಕೊಳಲ ಮುರಿದು ಹೋಯಿತಲ್ಲೊ || ಪ || ಬಿರುಬಿಸಿಲಿನ ಬನಕೆ ಹಸಿರಾಗುವೆನೆಂದು ಬಿರಿದು ನಿಂತ ನೆಲಕೆ ಮಳೆಯಾಗಿ ಬರುವೆನೆಂದು ನುಡಿದು ಹೋದ ಮಾತು ಅದರೊಡನೆ ಹೋಯಿತಲ್ಲೊ ಬಳಲಿ ಬೆಂದ ಬದುಕು ಮುಂಗಾ...

ಗನ್ನು ನಿಮ್ಮದು ಪೆನ್ನು ನಮ್ಮದು ನಡೆದಿದೆ ಹೋರಾಟ ಮುಖವಿರುವವರ ಮುಖವಿರದವರ ನಡುವಿನ ಹೋರಾಟ //ಪ// ಬುಲೆಟ್ಟು ನಿಮ್ಮದು ಬ್ಯಾಲೆಟ್ಟು ನಮ್ಮದು ನಡೆದಿದೆ ಹೋರಾಟ ಕತ್ತಲೆ ಮುಖಗಳ ಬೆಳಕಿನ ಕುಡಿಗಳ ನಡುವಿನ ಹೋರಾಟ ಭ್ರಾಂತಿ ನಿಮ್ಮದು ಕ್ರಾಂತಿ ನಮ್ಮದ...

ಪ್ರೀತಿ ಮತ್ತು ಕ್ರಾಂತಿ ಬಂಡಿಯ ಎರಡು ಚಕ್ರ ಅಗಲಿ ಮುಂದೆ ಸಾಗಲಿ ಸೇರಲಿ ನಿಜದ ತೀರ || ಬುದ್ಧ ಕಂಡ ಕನಸನು ಹೊತ್ತು ಬಸವನು ಬಳಸಿದ ಸರಕನು ಹೊತ್ತು ಅಂಬೇಡ್ಕರರ ಹೆದ್ದಾರಿಯಲಿ ಸಾಗಲಿ ಬಂಡಿ ಸಾಗಲಿ; ಸಾಗಲಿ ಬಂಡಿ ಸಾಗಲಿ ನಿಜದ ತೀರ ಸೇರಲಿ ||೧|| ಸಮ...

ಭಾರತ ದೇಶದ ತೊಂಡು ದನಗಳಿಗೆ ಕರ್ನಾಟಕವೇ ಪ್ರೀತಿಯು ಇಲ್ಲಿಯ ಹುಲ್ಲು ನೀರು ಕಂಡರೆ ಎಲ್ಲಿಲ್ಲದ ಸಂಪ್ರೀತಿಯು ಆದರೆ ಏಕೊ ಕನ್ನಡ ಎಂದರೆ ಅವುಗಳಿಗಿನ್ನು ಅಪಥ್ಯವು ಇಂತಹ ರೋಗಕೆ ಮದ್ದು ಯಾವುದು? ತಿಳಿಯಬೇಕು ಇಂದು ನಾವು ಕರ್ನಾಟಕಕೆ ಗೋಡೆಗಳಿಲ್ಲ ಇರು...

1234...10

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...