
ಎಲ್ಲ ಕೇಂದ್ರಗಳ ಕೇಂದ್ರ, ಎಲ್ಲ ಮೊಳಕೆಯ ಬೀಜ, ತನ್ನೊಳಗೆ ತಾನೆ ಮಾಗಿ ಸಿಹಿಯಾದ ಹಣ್ಣು ಈ ನೆಲದಲ್ಲಿ ಬೇರು ಬಿಟ್ಟು ನಕ್ಷತ್ರದಾಚಿನವರೆಗೂ ತುಂಬಿಕೊಂಡ ಸವಿ ತಿರುಳು. ನಿನಗಿದೋ ವಂದನೆ. ನಿನ್ನ ಹೊಣೆ ಯಾರೂ ಹೊರದ, ಯಾರ ಹೊಣೆ ನೀನೂ ಹೊರದ ಮುಕ್ತ-ಫಲದ...
ಅನೇಕ ಬಾರಿ ಇಂಥ ಕನಸು ಬಿದ್ದಿದೆ. ನನ್ನ ಎಡಗಡೆಗೆ ದೊಡ್ಡದೊಂದು ಬೆಟ್ಟ. ಅದರ ತುಂಬ ದೊಡ್ಡ ಕಲ್ಲು ಬಂಡೆಗಳು. ನುಣ್ಣನೆಯ, ಕಪ್ಪನೆಯ ಬಂಡೆಗಳು. ಅಲ್ಲಲ್ಲಿ ಬಂಡೆಯ ಮೇಲೆ ಮಳೆಯ ನೀರು ಇಳಿದು, ಹರಿದ ಆಗಿರುವ ಗುರುತುಗಳು. ಬೆಟ್ಟದ ಬುಡಕ್ಕೆ ಹೋಗಲು ಮಣ...
ಕೋಣೆಯಲ್ಲಿ ಸಮೃದ್ಧ ಕತ್ತಲೆ ನದಿಯಂತೆ ತುಂಬಿತ್ತು. ಹುಡುಗ ತನ್ನೊಳಗೆ ತಾನು ಅಡಗಿದಂತೆ ಕುಳಿತಿದ್ದ. ಅಮ್ಮ ಬಂದಳು, ಕನಸಿನೊಳಗೆ ಬಂದ ಇನ್ನೊಂದು ಕನಸಿನಂತೆ. ನಿಶ್ಶಬ್ದವಾಗಿದ್ದ ಕಪಾಟಿನಲ್ಲಿ ಗಾಜಿನ ಲೋಟ ಇಷ್ಟೆ ಕಂಪಿಸಿತು. ಗುಟ್ಟು ಬಿಟ್ಟುಕೊಟ್ಟಿ...
ಜಗತಿನಲ್ಲಿ ಈಗ ಎಲ್ಲಿ ಯಾರೇ ಅಳುತ್ತಿರಲಿ, ಕಾರಣವಿಲ್ಲದೆ ಅಳುತ್ತಿದ್ದರೆ, ನನಗಾಗಿ ಅಳುತಿದ್ದಾರೆ. ಜಗತ್ತಿನಲ್ಲಿ ಈಗ ಎಲ್ಲಿ ಯಾರೇ ನಗುತ್ತಿರಲಿ, ಕಾರಣವಿಲ್ಲದೆ ನಗುತ್ತಿದ್ದರೆ, ನನ್ನ ಕಂಡು ನಗುತ್ತಿದ್ದಾರೆ. ಜಗತಿನಲ್ಲಿ ಈಗ ಎಲ್ಲಿ ಯಾರೇ ಹೋಗುತ...









