ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ನನ್ನೊಳಗೆ ನಿನ್ನ ಕಾಪಿಟ್ಟುಕೊಳ್ಳುದಕ್ಕೆ ಪಕ್ಕಾಗಿದ್ದೇನೆ. ಅನ್ಯಥಾ ನೀರಿನಲೆಗಳ ನಡುವೆ ಸುಳಿಯ ನರ್ತನಕೆ ಕುಣಿವ ತರಗಲೆಯಲ್ಲ ನಾನು ಗೋಣು ಅಲ್ಲಾಡಿಸುವುದ ಮರೆತುಬಿಟ್ಟವಳು. ಸೊಕ್ಕಿನವಳೆಂದು ಜರಿದು ಅನೇಕ ಮೂಗುತಿಗಳು ನನ್ನೊಂದಿಗೆ ಮಾತುಬಿಟ್ಟವು. ಆದರೂ ಬಯಲ ಗಾಳಿಗೆ ಬೇಲಿ...
ಸಾವನ್ನು ವೈಭವೀಕರಿಸಿದ ಎಮಿಲಿ ಡಿಕಿನ್ಸನ್

ಸಾವನ್ನು ವೈಭವೀಕರಿಸಿದ ಎಮಿಲಿ ಡಿಕಿನ್ಸನ್

ಭಾಗ-೧ ಆಕೆಯ ಜೀವನದ ಬಂಡಿಯಲ್ಲಿ ಸದಾ ಸಾವು ಸಂಚರಿಸುತ್ತಿತ್ತು. ಆಕೆಯ ದಾರಿ ಸಾವಿನ ದಾರಿಯಾಗಿತ್ತು. ಆದಕ್ಕೆಂದೆ ಆಕೆಯ ಕವನಗಳಲ್ಲಿ ‘ಡೆತ್ ಇನ್ ಲೈಫ್, ಲೈಫ್ ಇನ್ ಡೆತ್’ ವೇದಾಂತವಿದೆ. ಆಕೆ ಎಮಿಲಿ ಡಿಕನ್ಸನ್. ಸಾವಿನ...

ಹೇಂಟೆಯ ಕವಿತೆ

ಕವನಗಳ ಕಟ್ಟಿ ನವ್ಯ ನವೋದಯ ಪ್ರಗತಿಶೀಲದ ಅಂಗಿ ತೊಟ್ಟವರು ಸ್ತ್ರೀ ವಾದಿಯೆಂದೋ, ಬಂಡಾಯ ಎಂದೋ ದಲಿತನೆಂದೋ ಹಣೆಪಟ್ಟಿ ಹಚ್ಚಿಕೊಂಡು ಮೇಲೊಂದು ಜಾಕೀಟು ತೊಟ್ಟು ಮೈಕು ಹಿಡಿದು ಮೆರೆಯುತ್ತ ಅರೇ! ನಾನೇನು ಹೇಳುತ್ತಿದ್ದೇನೆ ಕವಿತೆ ಕಟ್ಟುವ...

ರಾತ್ರಿಯಲ್ಲಿ ಹಗಲಿನ ಪಾಳಿ

ಉರಿವ ಕೊಳ್ಳಿಯ ಭಾರಕ್ಕೆ ಸ್ನಾಯುಗಳು ಸಡಿಲವಾಗಿಲ್ಲ. ದೀಪದ ಮಾದಕ ಮತ್ತು ಆಫೀಮು ತುಂಬಿದ ಸೀಸೆ ಅಮೃತ ಶಿಲೆಯ ಕಣ್ಣುಗಳಲ್ಲೂ ಕಡುಕಪ್ಪು ಗೋಲ ನಿದ್ದೆ ಭರಿಸದ ಯಾವುದೋ ಮಾಯೆ. ರಾತ್ರಿ ಜಾಗರಣೆ ತೇಪೆ ಹಾಕಿದ ಸೀರೆಯ...

ಅವಳು ನಡೆಯುತ್ತಿದ್ದಾಳೆ

ಅವಳು ನಡೆಯುತ್ತಿದ್ದಾಳೆ. ತನ್ನ ದಾರಿಯ ಪಥ ಸಂಚಲನ ಸರಳೀಕರಿಸಿಕೊಳ್ಳುತ್ತ ಗೊತ್ತು ಅವಳಿಗೆ, ಆಸ್ಟ್ರೇಲಿಯಾದ ಏಕಾಂತ ಬೀದಿಗಳು ಬೆಂಗಳೂರಿನ ಕಾಂಕ್ರೀಟು ಕಾಡುಗಳ ಕಾಲುದಾರಿಗಳು ನಮ್ಮ ನಿಮ್ಮೂರಿನ ಕಾಡಿನ ಕವಲು ಹಾದಿಗಳು ಚೂರು ಬದಲಾಗಿಲ್ಲ. ನಾಯಿಗಳ ಆಕ್ರಮಣ...

ಜೋಲಿಯಾಟದ ಜಗತ್ತು

ಆಗೊಮ್ಮೆ ಈಗೊಮ್ಮೆ ಜಗದ ನಿಯಮಗಳು ಬದಲಾಗುತ್ತವೆ. ಬಿಸಿನೀರಿನಲ್ಲೂ ಜೀವಜಗತ್ತು ತೆರೆದು ಕೊಳ್ಳುತ್ತದೆ. ಸಾಗರದ ಬುಡವೂ ನಿಗಿನಿಗಿ ಉರಿಯುತ್ತದೆ. ಎದೆಯ ಕಡಲಿಗೂ ಬೆಂಕಿ ಇಳಿಯುತ್ತದೆ, ಅನ್ವೇಷಣೆಯ ಆಲಂಬನ ವ್ಯತ್ಯಾಸಗೊಂಡಿದ್ದು ವ್ಯಸನದಿಂದಲೇ ದೃಷ್ಟಾರರು ನೆಪಮಾತ್ರ ಆಗಿ ಬಿಡುತ್ತಾರೆ...

ಢಂಬ ಬದುಕಿನ ತುಂಬಾ

ಚಿತ್ರಗಳೆಲ್ಲಾ ಒಂದೇ ಚೌಕಟ್ಟಿಗೆ ಹೊಂದಿಕೊಳ್ಳುವಂತಿದ್ದರೆ ಈಟಿ ಬಿಲ್ಲುಗಳು ಸೆಟೆದುಕೊಳ್ಳದಿದ್ದರೆ ಮಲ್ಲಿಗೆಯ ಮಂಪರೇ ನೆಲಮುಗಿಲ ಹಬ್ಬಿನಿಂತಿದ್ದರೆ, ಹೀಗೆಲ್ಲ ಆಗುವಂತಿದ್ದರೆ, ಕನಸುಗಳ ಜೀವ ಚಿಗುತುಕೊಳ್ಳುವುದೇ ಹಾಗೆ ಗಾಜು ಗುಜ್ಜಿನ ಬೆಳಕಿಗಿಂತ ಹನಿ ಬಿಂದು ಮಣ್ಣಿನೆಲದ ಕಣಕಣ ವ್ಯಾಮೋಹಿಸಿಬಿಡುತ್ತದೆ....

ಸಮಾಧಿ ಯೋಗ

ಎಲರು ತೀಡಿದಷ್ಟು ಕುಣಿವ ಎಲೆಗಳ ಭಂಗಿ ಪಟಪಟನೇ ಆಡುವ ಮಾತು ಗಾಳಿಹಾದಿಯ ತುಂಬೆಲ್ಲಾ ಸಿಗುವ ಹೂಗಳು ಬದುಕೆಂಬ ಚೈತ್ರಕ್ಕೆ ಎಂತಹ ಸೊಗಸು. ಅವನ ಕಣ್ಣುಗಳು ಸಿಡಿಯುವಾಗ ಹನಿಗೂಡಿದ ನದಿ ಶಾಂತವಾಗುತ್ತದೆ. ಆ ಗುಡ್ಡದಾಚೆಗಿನ ಸರಹದ್ದು...

ಕೈಯಲ್ಲಿ ಕಡೆದಂತೆ ಜೀವನ

ಆಗಸದ ಮುಡಿಯಲ್ಲಿ ಒಡೆದ ಚಿಗುರು ಸೌರಭವ ಮೈತುಂಬಾ ಹೊದೆದು ನಳಿನವಿರು ತನುತಳೆದು ಬಾಗುತಿದೆ ನೆಲದೆಡೆಗೆ ತುಳುಕಿ ಹಸಿರು ನಂಬಿಕೆಯ ಹುತ್ತಕ್ಕೆ ಎರೆದ ಹಾಲು ಹುತ್ತದ ನಡುವೆ ಮಲ್ಲಿಗೆ ಗಿಡ ಚಿಗುರಿಸುತ್ತ ಈದೀಗ ಹೂ ಅರಳಿ...

ಬದುಕು ಚಿಗುರುವುದೆಂದರೆ

ನನ್ನ ನಾ ನಿನ್ನ ನೀ ತಿಳಿದುಕೊಳ್ಳುವುದು. ನನ್ನೊಳಗೆ ನೀ ನಿನ್ನೊಳಗೆ ನಾ ಬೆಳಕಾಗುವುದು ಒಳಮೈ ಹೊರಮೈ ಕಾಯಿಸಿಕೊಳ್ಳುವುದು ಕಿರಣಕ್ಕೊಡ್ಡಿ ಮನಸ್ಸನ್ನು ದುಡಿಸಿಕೊಳ್ಳುವುದು ಹಸಿರ ಮತ್ತೆ ಮತ್ತೆ ಮೆದ್ದು ಮುದಗೊಳ್ಳುವುದು ಬೆಳಕ ಆಸರೆಗಾಗಿ ಕನಸ ಕಟ್ಟುವುದು...