ಬ್ರೇಕ್ಟನ The Caucasian Chalk Circle

ಬ್ರೇಕ್ಟನ The Caucasian Chalk Circle

ಭಾಗ ೨

ಭಾವನಾತ್ಮಕ ಹಾಗೂ ಸಾಮಾಜಿಕ ಸಂಗತಿಗಳ ಹೂರಣ

ಬ್ರೇಕ್ಟನ ಎಪಿಕ್ ಥೇಟರ ಲಕ್ಷಣಗಳ ಹೊಂದಿದ ಆತನ ನಾಟಕ The Caucasian Chalk Circle. ನಾಟಕ ನಾಂದಿ ಮತ್ತು ಐದು ಅಂಕಗಳಲ್ಲಿ ಹಣೆಯಲ್ಪಟ್ಟ ನಾಟಕ. ನಾಂದಿಯೊಂದಿಗೆ ಪ್ರಾರಂಭವಾಗುವ ನಾಟಕ. ನಾಂದಿಯಲ್ಲಿ ಎರಡು ಭಿನ್ನ ಗುಂಪುಗಳ ನಡುವೆ ಉಂಟಾದ ಜಗಳದ ಉಲ್ಲೇಖದೊಂದಿಗೆ ಪ್ರಾರಂಭವಾಗುತ್ತದೆ. ಸಾಂಪ್ರದಾಯಿಕ ಕುರಿಗಾಯಿಗಳಾದ Rosa Luxemburg ಮತ್ತು ಹಣ್ಣು ಬೆಳೆಗಾರರಾದ Galinsk ೧೯೪೫ರಲ್ಲಿ ಪರಸ್ಪರ ಭೇಟಿಯಾಗುತ್ತಾರೆ. ಕಣಿವೆ ಪ್ರದೇಶದ ಪ್ರಾಂತಕ್ಕಾಗಿ ಅಲ್ಲಿ ಗೊಂದಲ ಉಂಟಾಗಿದೆ. ಫ್ಯಾಸಿಸ್ಟರ ಆಕ್ರಮಣದ ಕಾರಣದಿಂದ ಮೂಲ ಕುರಿಗಾಹಿಗಳು ಆ ನೆಲವನ್ನು ಬಿಟ್ಟು ಹೊರಟಿದ್ದರು ಆದರೆ ಈಗ ಪುನಃ ಯುದ್ಧ ನಿಂತಿದೆ. ಹಾಗಾಗಿ ತಮ್ಮ ಕುರಿಗಳ ಮೇವಿಗೆ ನೆಲೆಯಾದ ಆ ಕಣಿವೆಯ ಪುನಃ ಬಯಸುತ್ತಿದ್ದಾರೆ. ಆದರೆ ಈ ಮದ್ಯೇ ಹಣ್ಣು ಬೆಳೆಗಾರರ ಗುಂಪುಹಣ್ಣು ಬೆಳೆದು ಅದರಿಂದ ವೈನ ತಯಾರಿಕೆಯ ಉದ್ದೇಶದಿಂದ ಆ ಕಣಿವೆಯನ್ನು ತನ್ನದಾಗಿಸಿಕೊಂಡಿದೆ. ಎರಡು ಕಡೆಯ ಈ ಸಮಸ್ಯೆಯನ್ನು ಬಗೆಹರಿಸಲು ಸೋವಿಯತ ಸರಕಾರದ ಅಧಿಕಾರಿಗಳು ಅಲ್ಲಿಗೆ ಬಂದಿದ್ದಾರೆ. ಅಲ್ಲಿಯ ಬಹುಮುಖ್ಯ ಪ್ರಶ್ನೆ ಈ ನೆಲ ಮೂಲ ಕುರಿಗಾಹಿಗಳಿಗೋ ಸೇರುವುದೋ ಇಲ್ಲ ಪ್ರಗತಿಪರ ಎಡ ವಿಚಾರದ ಹಣ್ಣು ಬೆಳೆಗಾರರ ಪರವಾಗುವುದೋ? ಎಂಬುದು. ಆದರೆ ಈ ಮಧ್ಯೆ ಜನರೆಲ್ಲ ಸೇರಿ ಈ ಅಧಿಕಾರಿಗಳ ಖುಷಿಪಡಿಸಲು ಮನೋರಂಜನೆಯನ್ನು ಆಯೋಜಿಸಿರುವರು. ಅದಕ್ಕಾಗಿ ಬಂದ Arkadi ಗುಂಪಿನ ಕಲಾವಿದರು ಚೈನಿಸ್ ಕಥೆ “Chalk Circle” ನ್ನು ಪ್ರಸ್ತುತಪಡಿಸುತ್ತಾರೆ. ಇದೇ ಮುಂದಿನ ಕಥೆ “The Caucasian Chalk Circle”. ಇಲ್ಲಿ ನಾಟಕದೊಳಗೊಂದು ನಾಟಕ ಹೆಣೆದಿದೆ.

ಅದು ರಷ್ಯಾದ ಒಂದು ಪ್ರಾಂತ Feudel Georgia ಎಂಬುದೊಂದು ಸ್ಥಳ. ಜಾರ್ಝಿಯನ್ ನಗರದ ಗವರ್ನರ ತನ್ನ ರಾಜತಾಂತ್ರಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ ಹೊರತಳ್ಳಲ್ಪಡುತ್ತಾನೆ. ಅವರೆಲ್ಲ ಆತನ ವಿರುದ್ಧ ದಂಗೆ ಎದ್ದಿರುವರು. ಗವರ್ನರನ ಪತ್ನಿ ತನ್ನ ಜೀವ ಉಳಿಸಿಕೊಳ್ಳುವ ಭರದಲ್ಲಿ ಹೆತ್ತ ಮಗುವನ್ನು ಬಿಟ್ಟು ಓಡಿಹೋಗುತ್ತಾಳೆ. ಆದರೆ ಮನೆಯ ಕೆಲಸದಾಳು Grusha, ಆ ಮಗುವನ್ನು ತನ್ನ ಜೀವದ ಹಂಗು ತೊರೆದು ಮಗುವನ್ನು ಕಾಯುತ್ತಾಳೆ. ಕೊರೆವ ತಂಪು ವಾತಾವರಣದಲ್ಲೂ ಉಪವಾಸದ ನಡುವೆಯೂ ಸ್ಟಾಲಿನ್‌ನ ಸೈನಿಕರ ಬೆದರಿಕೆಯ ನಡುವೆಯೂ ಮಗುವನ್ನು ಬಿಡದೇ ಕಾಯುತ್ತ ಆಳಕಣಿವೆಯ ಆ ಸೇತುವೆಯನ್ನು ತನ್ನ ಜೀವವನ್ನು ಒತ್ತೆ ಇಟ್ಟು ದಾಟುತ್ತಾಳೆ.ಸೈನಿಕರಿಂದ ತೊಂದರೆಗೆ ಒಳಗಾದರೂ ಶಿಥಿಲಗೊಂಡ ಸೇತುವೆ ಇನ್ನೇನು ಉದುರಿಬೀಳುವ ಹಂತದಲ್ಲಿರುವ ಸೇತುವೆಯ ಮೇಲೆ ಅವರಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದರೂ ಅಲ್ಲೊಬ್ಬಳು ವ್ಯಾಪಾರಸ್ಥ ಹೆಣ್ಣು ಮಗುವನ್ನು ತನ್ನ ಕೈಲಿಟ್ಟುಹೋಗೆಂದು ಹೇಳಿದರೂ ಕೇಳದೇ ಮಗುವಿನೊಂದಿಗೆ ಆ ಸೇತುವೆಯ ಮೇಲೆ ನಡೆಯುತ್ತಾಳೆ.ಯಾವ ಕಾರಣಕ್ಕೂ ಮಗುವಿನಿಂದ ಬೇರ್ಪಡಲು ಬಯಸದ ಆಕೆಯ ಈ ನುಡಿ ಆಕೆ ತಾನು ಆಡಿಸಿದ ಆ ಮಗುವನ್ನು ಅತಿಯಾಗಿ ಪ್ರೀತಿಸುವುದಕ್ಕೆ ಅದರೊಳಗೆ ಇಟ್ಟ ವ್ಯಾಮೋಹಕ್ಕೆ ಸಾಕ್ಷಿಯಾಗುತ್ತಾಳೆ. ಸಾವಿನ ಹಾದಿಯಲ್ಲೂ ಹೆತ್ತ ತಾಯಿ ಮಗುವನ್ನು ತಿರಸ್ಕರಿಸಿದರೂ ಈಕೆ ಅದಕ್ಕಾಗಿ ಜೀವ ಪಣಕ್ಕಿಡುವುದು ಆಕೆಯ ಮಾನವೀಯತೆಯ ಬಗ್ಗೆ ಹೆಮ್ಮೆ ಮೂಡಿಸುತ್ತದೆ.

“She who had borne him demanded the child, She who had raised him faced trial” ಎಂದು ಉದ್ಘರಿಸುವಲ್ಲಿ ಘೃಶಾಳ ತ್ಯಾಗ ವೈಭವೀಕರಿಸಿದೆ. ಪರ್ವತದ ಪ್ರದೇಶದಲ್ಲಿ ತನ್ನಣ್ಣನ ಮನೆಗೆ ಮರಳುವ ಆಕೆ ಅಲ್ಲಿ ಒತ್ತಾಯದಿಂದ ಮುದುಕ ರೈತನೊಬ್ಬನ ಮದುವೆಯಾಗುವ ಪರಿಸ್ಥಿತಿ ಎದುರಾಗುತ್ತದೆ. ತನ್ನ ಒಡತಿಯ ಮಗುವನ್ನು ತನ್ನದೆಂಬಂತೆ ಭ್ರಮಿಸುವ ಆಕೆ ಆ ಮಗುವಿಗಾಗಿ ಎನೆಲ್ಲ ತ್ಯಾಗಮಾಡುತ್ತಾಳೆ. ಮಗುವಿಗೆ ಒಬ್ಬ ತಂದೆಯ ಹಾಗೂ ಸಾಮಾಜಿಕ ಸ್ಥಾನಮಾನದ ಅಗತ್ಯತೆ ಇರುವುದನ್ನು ಮನಗಂಡ ಆಕೆ ಆ ಮುದುಕನ ವಿವಾಹವಾಗುತ್ತಾಳೆ.

ಆಕೆ ಬದುಕಿನ ಅತಿ ದೊಡ್ಡ ದುರಂತವೆಂದರೆ ಆಕೆ ತೊರೆಯಲ್ಲಿ ಬಟ್ಟೆ ತೊಳೆಯುತ್ತಿರುವಾಗ ಅಲ್ಲಿಗೆ ಬರುವ ಆಕೆಯ ಪ್ರೇಮಿ Simon ಕಂಡು ಆಕೆ ಖುಷಿಗೊಳ್ಳುತ್ತಾಳೆ. ಅಲ್ಲಿ ಇರುವ ಮಗುವಿನ ಟೋಪಿ ನೋಡಿ ಅದು ಯಾರದ್ದೆಂದು ಕೇಳಿದಾಗ ಆಕೆ ಆ ಮಗು ತನ್ನದಲ್ಲವೆಂದು ಹೇಳುತ್ತಿರುವಾಗಲೇ ಆಲ್ಲಿಗೆ ಬರುವ ಸೈನಿಕರು ಮಗು Micheal ನನ್ನು ಹಿಡಿದೊಯ್ಯುತ್ತಿರುವಾಗ ಅವನನ್ನು ಉಳಿಸಿಕೊಳ್ಳಲು Simonನ ಮುಂದೆಯೇ ಆ ಸೈನಿಕರಲ್ಲಿ ಆ ಮಗು ತನ್ನದೆಂದು ನಿವೇದಿಸಿಕೊಳ್ಳುತ್ತಾಳೆ. ಇದು ತಿಳಿಯುತ್ತಲೇ ಸಿಮೋನ್ ಅಲ್ಲಿಂದ ಹೊರಟುಹೋಗುತ್ತಾನೆ. ಮಗುವಿಗಾಗಿ ಆಕೆ ತನ್ನ ಪ್ರಿಯಕರನನ್ನು ಕಳೆದುಕೊಳ್ಳುತ್ತಾಳೆ.

ಎಪಿಕ್ ನಾಟಕದ ಒಂದು ಪ್ರಮುಖ ಲಕ್ಷಣ ಕೋರಸ್. ಆಕೆಯ ಈ ದುರಂತ ಚಿತ್ರಣವನ್ನು ಮನಮುಟ್ಟುವಂತೆ ಹಾಡಿ ವರ್ಣಿಸುತ್ತದೆ. ಜಗತ್ತಿನ ರೀತಿ ನೀತಿಗಳೇ ವಿಚಿತ್ರ. ಮುಂದಿನ ಅಂಕದಲ್ಲಿ Azdak ಪ್ರಮುಖ ಪಾತ್ರವಾಗಿ ಬರುತ್ತಾನೆ. ಆತನೊಬ್ಬ ನ್ಯಾಯವಾದಿ. ನಗರವೆಲ್ಲಾ ಕ್ರಾಂತಿಯ ಜ್ವಾಲೆಯಲ್ಲಿ ಉರಿಯುತ್ತಿದೆ. ಗೃಶಾಳ ತ್ಯಾಗ ಮತ್ತು ಪ್ರೇಮಕ್ಕೆ ಬೆಲೆ ಸಿಗುವುದಿಲ್ಲ. ಆದರೆ ಮಾತ್ರ ಆಕೆಯ ಬಗ್ಗೆ ಅನುಕಂಪ ತೋರಿಸುತ್ತಾನೆ. ಆತನೊಬ್ಬ ಸಿನಿಕ, ನೈತಿಕತೆ ಇಲ್ಲದವ, ಸಮಯಸಾಧಕ ಆದಾಗ್ಯೂ ತನ್ನ ಮಾನವೀಯ ಗುಣದಿಂದ ಶ್ರೇಷ್ಟನಾಗುತ್ತಾನೆ. ಯಾವಾಗ ಆತನಿಗೆ ತನ್ನ ಮನೆಯಲ್ಲಿ ಆಶ್ರಯ ಪಡೆದಾತ ಹಿಂದಿನ ಡ್ಯೂಕ್ ಎಂದು ತಿಳಿದರೂ ಆತನನ್ನು ಕ್ರಾಂತಿಕಾರಿ ಸೈನಿಕರಿಗೆ ಒಪ್ಪಿಸುವುದಿಲ್ಲ. ಬದಲಾಗಿ ಆತನ ಪಾರಾಗುವಿಕೆಗೆ ಸಹಾಯ ಮಾಡಿದ್ದಕ್ಕಾಗಿ ಸಿಕ್ಕಿಬೀಳುತ್ತಾನೆ. ಮುಂದೆ ಗವರ್ನರನ ಪತ್ನಿ ಗಂಡನ ಆಸ್ತಿಯನ್ನು ಪಡೆಯಲು ತನ್ನ ಮಗುವನ್ನು ಗೃಶಾಳಿಂದ ವಾಪಸ್ಸು ಪಡೆಯಲು ಲಂಚ ನೀಡಿ ತನ್ನ ಪರವಾಗಿ ನ್ಯಾಯ ನೀಡುವಂತೆ ಕೇಳುತ್ತಾಳೆ. ಅವಳಿಂದ ಹಣ ಪಡೆದರೂ ಆಕೆಯ ದೂರಾಲೋಚನೆಯ ಅರಿವಿದ್ದು ಗೃಶಾಳ ಪರವಾಗಿಯೇ ತೀರ್ಪು ನೀಡುತ್ತಾನೆ. ದೃಶ್ಯದಲ್ಲಿ ಮಗುವಿನ ನಿಜ ತಾಯಿಯಾಗಿದ್ದರೂ ಆಕೆ ಮಗುವನ್ನು ಕರುಣೆ ಇಲ್ಲದೇ ಎಳೆದಾಡುವ ಗವರ್ನರನ ಪತ್ನಿಗೂ ಮಗುವಿಗೆ ನೋವಾಗುವುದೆಂಬ ಕಾರಣಕ್ಕೆ ಮಗುವನ್ನು ಎಳೆಯದ ಗೃಶಾಳ ವರ್ತನೆಯ ಘಟನೆಯಿಂದ ಮಗು ನಿಜಕ್ಕೂ ಗೃಶಾಳಿಗೆ ಸೇರತಕ್ಕದೆಂಬ Azdakನ ನಿರ್ಧಾರ ಸಾರ್ವಕಾಲಿಕವಾಗುತ್ತದೆ, ಎಲ್ಲರೂ ಒಪ್ಪತಕ್ಕದ್ದೆಂದು ತಿಳಿಯುತ್ತದೆ. Azdak ನ್ಯಾಯ ನಿರ್ಣಯ ಕೂಡಾ ಆದರ್ಶಪ್ರಾಯವಾದದ್ದೆಂದು ಪ್ರತಿಪಾದಿಸುವುದಲ್ಲಿ ಕಣಿವೆ ನೆಲ ಮೂಲತಃ ಅಲ್ಲಿಯ ಮೂಲ ರೈತ ಕುರುಬರ ಪಾಲಾಗುವುದೇ ಸರಿಯಾದ ತಿರ್ಮಾನ ಎಂಬ ನಿರ್ಣಯವನ್ನು ನೀಡುತ್ತದೆ. ನಾಟಕದ ತಿರುಳು ಸಾಮಾಜಿಕ ಸಮಸ್ಯೆಯ ಕುರಿತು ರಾಜಕೀಯ ದೊಂಬರಾಟದ ಕುರಿತು ಚಿಂತಿಸುತ್ತದೆ. ಕಣಿವೆ ಪ್ರದೇಶದ ಹಕ್ಕಿಗಾಗಿ ಹೋರಾಡುವ ಕುರುಬರು ಮತ್ತು ವ್ಯಾಪಾರೀಕರಣಕ್ಕಾಗಿ ಆ ನೆಲವನ್ನು ಪಡೆವ ಹಣ್ಣು ಬೆಳೆಗಾರರ ಸಮಸ್ಯೆಯ ಮೂಲಕ ನಾಟಕದ ಅಂಕಗಳಲ್ಲಿ ಒಂದೊಂದೆ ನಿರ್ಧಿಷ್ಟ ಸಮಸ್ಯೆಗಳು ತೆರೆದುಕೊಳ್ಳುತ್ತವೆ.

ಬ್ರೇಕ್ಟ ನಿರೀಕ್ಷೆಯಂತೆ ಪ್ರೇಕ್ಷಕ ನಾಟಕದ ಪಾತ್ರದೊಳಗೆ ಮಗ್ನನಾಗದೇ ಹೊರಗೆ ನಿಂತು ಅನುಭವಿಸುವುದು ಇಲ್ಲಿ ಸ್ವಲ್ಪ ಮಟ್ಟಿಗೆ ಸಾಧ್ಯವಾಗಿಲ್ಲ ಕಾರಣ Grusha ಮಗುವನ್ನು ಕಾಪಾಡುವಲ್ಲಿ ಆಕೆ ಅನುಭವಿಸುವ ಸಂಕಟಗಳು, ಅಪಾಯಗಳು ಆಕೆಯ ಬಗ್ಗೆ ಸಹಜವಾಗೇ ಪ್ರೇಕ್ಷಕ ಅಭಿಮಾನಿಯಾಗುತ್ತಾನೆ. ಪಾತ್ರದಲ್ಲಿ ಸೇರಿಹೋಗುತ್ತಾನೆ. ನಾಟಕದ ಮೊದಲರ್ಧ ಭಾಗ ಪ್ರಜ್ಞಾಪೂರ್ವಕ ನಾಟಕೀಯತೆಗೆ ಸಾಕ್ಷಿಯಾಗುತ್ತದೆ. ಗ್ರುಶಾಳ ಪಾರಾಗುವಿಕೆ ಆಕೆಯ ಸಾಹಸ ಮದುವೆ ಆಕೆ ತನ್ನ ಪ್ರಿಯತಮನಿಂದ ತಿರಸ್ಕೃತಳಾಗುವುದು ಇವೆಲ್ಲವೂ ಮೊದಲ ಮೂರು ದೃಶ್ಯಗಳಲ್ಲಿ ಬಣ್ಣಿಸಲ್ಪಟ್ಟಿದೆ. ಬ್ರೆಕ್ಟ ಪ್ರತಿಯೊಂದು ದೃಶ್ಯವೂ ಒಂದೊಂದು ಸ್ವತಂತ್ರ ತಂತ್ರದಿಂದ ಸ್ವತಂತ್ರ ಸಣ್ಣ ನಾಟಕ ಸಂಗತಿಯಾಗಬೇಕೆಂದುಕೊಳ್ಳುತ್ತಾನೆ. ಕೊನೆಯ ಎರಡು ದೃಶ್ಯಗಳು Azdak ನ ನ್ಯಾಯ ನಿರ್ಣಯ ಅದಕ್ಕಾಗಿ ಚಾಕ್ ಸರ್ಕಲ್ ಪ್ರಯೋಗ ಮೂಡಿಬಂದಿದ್ದು ಯಶಸ್ವಿ ನಾಟಕವಾಗುತ್ತದೆ. ಬ್ರೆಕ್ಟ ತನ್ನ ನಾಟಕರಂಗವನ್ನು ಸಾಮಾಜಿಕ ಸಮಸ್ಯೆಗಳ ಮಥಿಸುವ ಪ್ರಯೋಗಾಲಯದಂತೆ ಬಳಸುತ್ತಾನೆ. ಮೂಲತಃ ಬೆಳೆದು ಬಂದ ಸಾಂಪ್ರದಾಯಿಕ ನಾಟಕ ರೂಪುರೇಖೆಗಳ ಬದಲಾಗಿ ಆ ಭ್ರಮೆಗಳ ಹೊರತಾದ ಸ್ವಪ್ರಜ್ಞೆಯ ಸಾಮಾಜಿಕ ಸಂಬಂಧಿಕರಣದ ಸತ್ವವನ್ನು ಪ್ರಸ್ತುತಪಡಿಸುವಲ್ಲಿ ಆತ ಒತ್ತು ಕೊಡುತ್ತಾನೆ. ಮೇಲಾಗಿ ಪ್ರೇಕ್ಷಕ ಇಲ್ಲಿ ಪಾತ್ರಧಾರಿಯೊಂದಿಗೆ ಆತನ ಅಭಿವ್ಯಕ್ತಿಯನ್ನೆ ಮರು ಬಿಂಬಿಸುವ ಪಾತ್ರವಾಗದೇ ಸಂಪೂರ್ಣ ಭಿನ್ನ ಸಂವೇದನೆಯ ಅಭಿವ್ಯಕ್ತಿಸುವ ವೀಕ್ಷಕನಾಗುತ್ತಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಯೋ ತಂದೆ
Next post ಭಸ್ಮಾಸುರ

ಸಣ್ಣ ಕತೆ

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಬಸವನ ನಾಡಿನಲಿ

  ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys