ನಿನ್ನದು ಆ ತೀರ – ನನ್ನದು ಈ ತೀರ. ನಟ್ಟ ನಡುವಿನ೦ತರ- ತೊರೆಯ ಅಭ್ಯಂತರ, ಕಿರಿದಹುದು, ಕಿರಿದಲ್ಲ ; ಹಿರಿದಲ್ಲ, ಹಿರಿದಹುದು ; ಕಿರು ತೊರೆಯ ಅಂತರ ಕಡಲಿನಂತರ! ಹರಿಯುವಲೆಗಳಂತೆನ್ನ ಮನಸಿನಾತುರ ಹರಿಯುತಿದೆ, ಕೊರೆಯುತಿದೆ ಒಲವ ಕಾತರ. ಮೌನದ...

ಇರುಳಿನಾಗಸದಿಂದ ನಕ್ಷತ್ರ ನೆಲಕಿಳಿದು ತಾವರೆಯ ಎಲೆಮೇಲೆ ನಿಂತಿತ್ತು, ಉಷೆ ಬಂದು ನಕ್ಕಾಗ, ಹನಿಯೆದೆಗೆ ರಂಗಿಳಿದು ಬಣ್ಣ ಬಣ್ಣದ ಬಯಕೆ ಹೊಳೆದಿತ್ತು! ಉಷೆಯುಳಿವು ಮೂರೆ ಚಣ! ಮರು ನಿಮಿಷ ಜಗವನ್ನು ಹಗಲ ಹೊದಿಕೆಯ ಬಿಳುಪು ಪಸರಿಸಿತು. ತಾವರೆಯು ತಲೆ ...

ಇರುಳಿನಲಿ ಮೊಗ್ಗಾಗಿ ಮರೆಯಾದ ಮೋಡಗಳ ಚೆಂಗುಲಾಬಿಯ ದಳಗಳರಳುತಿವೆ, ರವಿಯುದಯ ಎರಚುತಿರೆ ಓಕುಳಿಯನೆಲ್ಲೆಲ್ಲು ! – ಹಕ್ಕಿಗಳ ರಾಗದುನ್ಮಾದದಲಿ, ಹಸುರು ನೆಲ ಜಗದೆದೆಯ ಒಲವ ಹರಕೆಯ ಹೊತ್ತು ತೋರುತಿದೆ ಹನಿಗಳಲಿ ! ತಂಗಾಳಿ ಬೀರುತಿದೆ ಹಿಂದೆಂದು...

ದೇವರಲ್ಲಿ ಹಸಿದನಂತೆ, ಎನಿತಿತ್ತರು ಸಾಲದಂತೆ, ಹಾಳುಹೊಟ್ಟೆ ಹಿಂಗದಂತೆ, ಅದಕೆ ಜೀವ ಬಲಿಗಳಂತೆ, ಹೋದಳುಷೆ – ಬಂತು ನಿಶೆ! ನಾವಿಬ್ಬರು ಕೂಡಿದಾಗ, ಎರಡು ಹೃದಯದೊಂದು ರಾಗ ಮೋಡಿಯಿಡಲು, ಕಾಲನಾಗ ಹರಿದು ಕಚ್ಚಿತವಳ ಬೇಗ. ಹೋದಳುಷೆ – ಬಂ...

ಇಂದು ನೀ ಬಂದಿರುವೆ. ನನ್ನ ಬಾಳಿನ ಹಗಲು- ಹರಿಗೋಲು. ಹುಚ್ಚು ಹೊಳೆ ಕರೆಗಿನ್ನು ಬೆಚ್ಚಿಲ್ಲ ! ಕಾರ್ಗತ್ತಲೆಯ ಕಂಡು, ಮೊಗ್ಗಾದ ಮನದರಳು ಉಷೆ ಬರಲು, ಕಮಲದೊಳು ಕಂಪಿನಿಂ ಸುಖಸೊಲ್ಲ ಹರಹುತಿದೆ, ಮೈಯರಿತು ! ಕೊನೆತನಕ ನೀನುಳಿದು ಜತೆಗಿರಲು, ಚಿಂತೆಯನ...

ಯಾವ ಹಾಡನು ನಾ ಹಾಡಲಿ, ಇನ್ನು- ಬಾಳಿನ ಉಷೆಯನು ಎಚ್ಚರಿಸಲಿ? ಬಂಗಾರ ಬಯಲಲಿ ಸಿಂಗಾರ ಬೆಳೆಯಲಿ ತಂದು ಇಕ್ಕಿದರೊಂದು ಕಿಡಿ ಬೆಂಕಿ ! ಬೆಳೆಯಲ್ಲಿ ಉರಿ ತಾಗಿ, ಬಯಲೆಲ್ಲ ಹೊಗೆಯಾಗಿ ಉಳಿದುದೆಲ್ಲವು ಇಲ್ಲಿ – ಎದೆ ಬೆಂಕಿ ! ನೋವನರಿಯದ ಬಾಳು ಬಾ...

ಕಾರಿರುಳ ಗವಿಯಲ್ಲಿ ಎಲ್ಲಿಂದಲೋ ಒಂದು ಕಿರಣ ಒಳಹೊಕ್ಕಂತೆ, ನನ್ನ ಜೀವನದಲ್ಲಿ ನಿನ್ನ ಎಳೆತನದ ನಗು ತುಂಬಿ ತೂರುತ ಬಂದು ಬೆಳಗಿತ್ತು ಎದೆಯನ್ನು, ಹೃದಯದುಮ್ಮಳದಲ್ಲಿ, ಆನಂದದೆಲರಿನಲಿ, ಕಳೆದ ಕಾಲದ ಕಳೆದ ದುಸ್ವಪ್ನಗಳನೆಲ್ಲ ಮರೆತು ನಾ ಕುಣಿದಿದ್ದೆ....

ಯುಗ ಯುಗಗಳೇಕಾಂತಗೀತ ಹಾಡುತನಂತ ನೋವಿನಲಿ ಕಾತರಿಸಿ ನನ್ನ ಉಷೆ ಬಂದೆ. ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರು ಹಣತೆ ಅರ್ಪಿಸಿದೆ; ನೀನೂಪ್ಪಿ ಒಲವ ಬಾಳಿಸಿದೆ. ನಾನು ಕವಿ, ನೀ ಕಾವ್ಯ ! – ನಾ ಬರೆದ ಗೀತಗಳು ನಿನ್ನ ಒಲವಿನ ನೂರು ಸೊಗಸು ನೆರ...

ಅರಳುತಿಹ ಮೊಗ್ಗೊಂದು ಅರಳದೆಯೆ ಉರುಳಿದುದು ಕಣ್ಣೀರನಿಡುತಿಹಳು ಹಡೆದ ತಾಯಿ ಕಾಲನಾಟವೊ ಇಲ್ಲ ಕರುಬು ಕೂರಸಿ ಕೃತಿಯೊ ಎಳೆಹೂವಿನಾತ್ಮವನು ಅಳಿಸಿದುದು ಇಂತು? ಸುತ್ತ ಮುತ್ತಿಹ ಕ್ರೌರ್ಯಕಾನನದ ದಟ್ಟದಲಿ ಶತ್ರುಗಳು ಮೆಟ್ಟುತಿರಲದನು ಕೆಳಗೆ ಎತ್ತಿಮೇಲಕ...

1...45678...10