
ಸೂರ್ಯನೂ ಅಷ್ಟೆ ನಮ್ಮ ಐ.ಟಿ.ಬಿ.ಟಿ ಹುಡುಗರಂತೆ ಮೇಲಕ್ಕೇರಿದ ಮೇಲೆ ಜನ್ಮ ಸ್ಥಳ ಮರೆತು ಪಶ್ಚಿಮಕ್ಕೆ ವಲಸೆ ಹೋಗುತ್ತಾನೆ ಅಲ್ಲೇ ಕೆಲಸದಲ್ಲಿ ಮುಳುಗಿ ಹೋಗುತ್ತಾನೆ ಅಲ್ಲಿ ಏನು ಕಥೆಯೋ ಏನೋ ನಮಗಂತೂ ದೂರದಿಂದ ಬಣ್ಣ ಬಣ್ಣವಾಗಿ ದೊಡ್ಡದಾಗಿ ಕಾಣಿಸುತ್...
ಪಾಪ ಸೂರ್ಯ ಅನ್ನೋ ಪ್ರಾಣಿ ಎಲ್ಲರಂತೆ ನಿದ್ದೆ ಮಾಡ್ಲಿಕ್ಕೆ ಕತ್ತಲೆ ಹುಡುಕಿಕೊಂಡು ಒಂದೇ ಸಮನೆ ತಿರುಗುತ್ಲೇ ಇದೆ ಅವನು ಕಾಲಿಟ್ಟಲ್ಲೆಲ್ಲಾ ಕೈಗೆ ಸಿಗದಂತೆ ಕಣ್ ತಪ್ಪಿಸಿ ಕತ್ತಲೇನೂ ಸುಖಾಸುಮ್ನೆ ಹೆದರ್‍ಕೊಂಡು ಓಡುತ್ಲೇ ಹೋಗ್ತಿದೆ. *****...
ಚಂದ್ರನಿಲ್ಲದ ಅಮವಾಸ್ಯೆ ರಾತ್ರೆ ತಾರೆಗಳು ಆಕಾಶದುದ್ದಗಲ ರಂಗೋಲೆ ಶೃಂಗರಿಸಿ ರಾತ್ರಿ ಇಡೀ ಒಂದು ಕ್ಷಣವೂ ಕಣ್ಮುಚ್ಚದೆ ಸೂರ್ಯ ಬಂದಾನೆಂದು ಎಷ್ಟು ಕಾದರು ಅವನು ಬರಲೇ ಇಲ್ಲ. ಬೆಳಗಾದ ಮೇಲೆ ಮಹರಾಯ ಬಂದಾಗ, ಕಣ್ಣು ಬಿಡಲಾಗದ ಗಾಡನಿದ್ದೆಯಲ್ಲಿದ್ದ ತ...
ಅರೇ ಇಲ್ಲಿದ್ದ ಕತ್ತಲೆಯನ್ನು ಕದ್ದವರಾರು ಸೂರ್ಯನೇ? ಚಂದ್ರನೇ? ಅಥವಾ ನಮ್ಮ ಮನೆಯ ಮೊಂಬತ್ತಿಯೇ? ವಿಚಾರಿಸೋಣ ಬಿಡಿ ಒಂದು ಕಂಪ್ಲೇಂಟ್ ಕೊಡಿ ಎಲ್ಲಿ ಹೋಗ್ತಾರೆ, ಸಿಕ್ಕಿ ಬೀಳ್ತಾರೆ *****...
ನೀನು ರಾತ್ರಿ ಇಡೀ ಆಳುದ್ದ ಸುರಿದರೂ ಬೆಳ್ಳಿ ಆಭರಣ ಅವಳು ಇಷ್ಟಪಡೋದು ಮುಂಜಾವಿನ ಬೆಚ್ಚಗಿನ ಬಂಗಾರದ ಕಿರಣ. *****...
ಕತ್ತಲೆ ಅಂದ್ರೆ ಕಂಡ್ರಾಗದ ಸೂರ್ಯ ಇನ್ನೇನು ಸಂಜೆ ಆಯ್ತು ಅನ್ನೋಷ್ಟರಲ್ಲೆ ಮಾಯವಾದವ್ನು ಮತ್ತೆ ಪ್ರತ್ಯಕ್ಷ ಆದದ್ದು ಬೆಳಗಾದ ಮೇಲೆ. *****...
ಎಲ್ಲರಿಗೂ ತಾರತಮ್ಯ ಮಾಡದೆ ಬೆಳಕು ಕೊಡ್ತೀನಿ ತಿಳಿತಲ್ಲ ಬೆಂಕಿ ಬೆಳದಿಂಗಳು ಏನಾದರೂ ಮಾಡ್ಕೊಳ್ಳಿ ಅದು ನನಗೆ ಸಂಬಂಧವಿಲ್ಲ *****...
ನೋಡಿ ನಾನು ಇದ್ದಲ್ಲೇ ಇರೋವ್ನು ನನಗೆ ಮೂಡಣವೂ ಇಲ್ಲ ಪಶ್ಚಿಮವೂ ಇಲ್ಲ. ಉದಯವೂ ಇಲ್ಲ. ಅಸ್ತವೂ ಇಲ್ಲ. ಕೆಂಪು ಇಲ್ಲ ಕಪ್ಪು ಇಲ್ಲ. ಹಗಲೂ ಇಲ್ಲ, ರಾತ್ರೇನೂ ಇಲ್ಲ. ನನಗಿಲ್ಲ ಇದ್ಯಾವುದರ ಸೋಂಕು ಅದೆಲ್ಲಾ ಅವರವರ ಕಣ್ಣಿನ ಮಂಕು. *****...
ಇವನು ಆಕಾಶದಾಗೆ ಇರೋ ಅಷ್ಟು ಹೊತ್ತು ಜನರೆಲ್ಲ ಇವನ ತೊತ್ತು ಬೆವರ್ ಸುರಿಸುತ್ತಲೇ ಇರ್‍ಬೇಕು ಎಷ್ಟು ಸುರಿಸಿದರೂ ಇನ್ನಷ್ಟು ಮತ್ತಷ್ಟು ಹಿಂಡಿ ಹೀರುವ ಇವನೊಬ್ಬ ಬೆಂಕಿ ನವಾಬ ಯಾವುದೋ ಗುಲಾಮಗಿರಿ ಕಾಲದ ಕೆಂಪು ಮೂತಿ ಸಾಹೇಬ *****...
ಈಗ ತಾನೆ ನೆತ್ತಿಯ ಮೇಲಿದ್ದ ಸೂರ್ಯ ಸಾಹೇಬರು ಬುತ್ತಿ ಬಿಚ್ಚುವಷ್ಟರಲ್ಲಿ ಎಲ್ಲಿ ಮಾಯವಾದರು? ಮರದ ನೆರಳಲ್ಲಿ ಕುಳಿತ ರೈತ ಯೋಚಿಸಿದ. ಸಾಹೇಬರು ಮೋಡದ ಮರೆಯ ಆಂಟಿ ರೂಂನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಈಗವರು ಸಿಗುವುದಿಲ್ಲ, ಅವರಿಗೀಗ ಲಂಚ್ ಬ...








