
ಹೆಪ್ಪಿಟ್ಟ ಕೆನೆ ಮೊಸರು ಹುಳಿಯಾಗುವ ಮುನ್ನ ನಿರಂತರ ಕಡೆಯಬೇಕು! ಉಕ್ಕಲಿ ನೊರೆನೊರೆಯ ಹಾಲಾಹಲ! ಏಕೆ ಕೋಲಾಹಲ? ಮೇಲೆಲ್ಲವೂ ಕಾರ್ಕೋಟಕ ವಿಷವೇ ಆಳಕ್ಕಿಳಿದಷ್ಟೂ ಅಮರತ್ವದ ಅಮೃತವೇ! ಎಷ್ಟು ಮಹಾ ಉಕ್ಕೀತು ವಿಷ? ಆಪೋಶಿಸಿದರೊಂದೇ ಗುಟುಕು ಕಣ್ತೆರೆಯಲು...
ಕಪ್ಪಡರಿದ ಕಂದೀಲು ನಾನಿನ್ನೂ ಉಜ್ಜಿ ಹೊಳಪೇರಿಸೇ ಇಲ್ಲ! ದೇವರ ಮುಂದಲ ನಂದಾದೀಪ ಯಾವಾಗಲೋ ಆರಿ ಬತ್ತಿ ಸುಟ್ಟು ಕರಕಾಗಿತ್ತಲ್ಲ! ಹೀಗೆ ಇದ್ದಕ್ಕಿದ್ದಂತೆ ಮೋಡ ಮುಸುಕಿ ಕತ್ತಲಾವರಿಸುತ್ತದೆಂದು ಯಾರಿಗೆ ಗೊತ್ತಿತ್ತು? ಗುಟ್ಟಾಗಿ ಬಸಿರಾದ ಮೋಡ ಯಾವ ಕ...
ಬದುಕಿನುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಕನ್ನಡಿಗಳು ಬೇಕು! ಎಲ್ಲ ಎಲ್ಲವುಗಳ ಪ್ರತಿಬಿಂಬಿಸಲು ಎತ್ತರಗಳ ಅಳೆಯಲು ಬದಲಾದ ಕನಸುಗಳ ಗುರುತಿಸಲು ಕೈಗೆಟುಕುವುದೇ ಮುಗಿಲು? ತಿಳಿಯಲು ದಾರಿಗೆ ಹಿಡಿದಿದೆಯೇ ಗೆದ್ದಲು? ಇಲ್ಲವೇ ಗುರಿಯೆಂಬ ಪೂರ್ಣವಿರಾಮಕ್ಕೆ ...
ಕಳೆದು ಹೋಗಿಹ ಸಣ್ಣ ಕಣ್ಣಿನ ಸೂಜಿ ಹುಡುಕುತ್ತಿದ್ದಾಳೆ ಅರೆಗುರುಡಿನ ಅಜ್ಜಿ ಮೂಲೆ ಮೂಲೆ, ಸಂದಿ ಗೊಂದಿ ತಡವುತ್ತಾ, ಎಡವುತ್ತಾ ಅಸಂಬದ್ಧ ಗೊಣಗುತ್ತಾ ಅಪ್ರಚಲಿತ ಜಾನಪದ ಗೀತೆ ಗುನುಗುತ್ತಾ ಹರಿದ ಸೀರೆ ತುಂಡು ತೇಪೆಗೊಂದಿಷ್ಟು ಅರಿವೆ ಹಿಡಿದು ಮಸುಕ...
ಹೇ ತಾಯಿ, ನೀ ಬರಿಯ ನೀರಲ್ಲ ನೀರೆಂಬ ಮಾಯೆ! ಹನಿಹನಿಯ ಬೊಗಸೆ ಬೊಗಸೆ ಹೀರಿದರೂ ಹಿಂಗಿತೇ ದಾಹ? ಮತ್ತೆ ಮತ್ತೆ ಬೇಕೆನಿಸುವ ತೀರದಾ ಮೋಹ! ಬರಿಯ ನೀರೆಂದು ಬೋಗುಣಿಯಲಿ ತುಂಬಿಸಿಡುವಾಗ ಥಟ್ಟನೆ ಘನೀಬವಿಸಿ ಮಂಜುಗಡ್ಡಯಾಗಿಬಿಡುವ ಮಾಯೆಯ ಚಮತ್ಕಾರ! ವಿವಿ...







