ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್

ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.

ಸೂಜಿಗಣ್ಣು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಸೂಜಿಗಣ್ಣಿಂದ ಹಾದು ಹೊರಬಂತು ಬದಿಯಲೆ ಮೊರೆಯುವ ಇಡೀ ತೊರೆ; ಹೀಗೆ ಬಂದ ಬರಲಿರುವ ಎಲ್ಲವೂ ಮುಂದೂ ಅದನ್ನೆ ಚೋದಿಸಿವೆ. *****

ಮಾನವನ ಬಾಳಿನ ನಾಲ್ಕು ಹಂತಗಳು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕಾದಾಟ ನಡೆಸಿದ ದೇಹದೊಡನೆ; ನೇರ ನಡೆದಿದೆ ದೇಹ, ಗೆದ್ದು ತಾನೇ. ಹೋರಾಟ ಹೂಡಿದ ಹೃದಯದೊಡನೆ; ಕಳೆದುಕೊಂಡ ಶಾಂತಿ ಮುಗ್ಧತೆಯನೆ. ಭಾರಿ ಕಾಳಗವಾಗಿ […]

ದೀರ್‍ಘಮೌನದ ಬಳಿಕ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ದೀರ್‍ಘಕಾಲದ ಮೌನ ಮುಗಿದು ಮಾತು; ಬೇರೆ ಪ್ರೇಮಿಗಳು ಸಂಬಂಧ ಕಡಿದೋ, ಮಡಿದೋ ಇಲ್ಲದಿರುವಾಗ, ನಿಷ್ಕರುಣಿ ದೀಪಕ್ಕೆ ಕವಿಸಿ ಮರೆಯನ್ನ ನಿಷ್ಕರುಣಿ ಇರುಳಿಗೆ […]

ಹುಚ್ಚಿ ಜೇನ್ ಪಾದರಿಯ ಜೊತೆ ಮಾತಾಡಿದ್ದು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ದಾರಿಯಲ್ಲಿ ಎದುರಾದರು ಪಾದ್ರಿ ಮಾತ ಮಧ್ಯೆ ಎಚ್ಚರಿಸಿದರು. ‘ಚಪ್ಪಟೆ ಮೊಲೆಗಳು ಜೋತಿವೆ ಕೆಳಗೆ, ಬತ್ತಿ ಹೋಗುತಿವೆ ನಾಳಗಳು; ವಾಸಿಸು ಹೆಣ್ಣೆ ದೇವಸೌಧದಲಿ, […]

ಬೈಜಾಂಟಿಯಮ್

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಸರಿಯುವ ಹಿಂದೆ, ಹಗಲಿನ ಅಶುದ್ಧ ಪ್ರತಿಮೆಗಳು; ನಿದ್ರಿಸಿದ್ದಾರೆ ಚಕ್ರವರ್‍ತಿಯ ಮತ್ತ ಸೈನಿಕರು; ಇರುಳ ದನಿಯನುರಣನ ಮೆಲ್ಲಮೆಲ್ಲಗೆ ಅಳಿದು ದೊಡ್ಡ ಚರ್‍ಚಿನ ಗಂಟೆ […]

ಆಯ್ಕೆ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಬಾಳಿನ ಸಫಲತೆಯನ್ನೋ ಕೃತಿಯ ಪರಿಪೂರ್‍ಣತೆಯನ್ನೋ ಆಯಬೇಕು ಒಂದನ್ನೇ ಮನುಷ್ಯಮತಿ ಇಲ್ಲಿ, ಆಯ್ದರೆ ಎರಡನೆಯದನ್ನು ಬಿಟ್ಟುಕೊಡಬೇಕು ದೇವಸೌಧವನ್ನು, ಕುದಿಯಬೇಕು ತಡಕಾಡುತ್ತ ಕತ್ತಲಲ್ಲಿ. ಎಲ್ಲ […]

ಸಾವು

ಸಾಯುತ್ತಿರುವ ಒಂದು ಪಶುವಿಗೆ ಆಸೆ ಭಯ ಯಾವುದೂ ಇಲ್ಲ; ಕೊನೆಯ ಕಾಯುತ್ತಿರುವ ಮಾನವನಿಗೇ ಆಸೆ ಭಯಗಳ ಕಾಟವೆಲ್ಲ; ಸಾಯುವನು ಎಷ್ಟೋಸಲ – ಸತ್ತು, ಹುಟ್ಟಿಬರುವನು ಮತ್ತು ಮತ್ತೂ […]

ಸ್ಕೂಲು ಮಕ್ಕಳ ನಡುವೆ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ೧ ಶಾಲಾಕೊಠಡಿಯೊಳಗೆ ನಡೆಯುತ್ತಲಿದ್ದೇನೆ ಪ್ರಶ್ನಿಸುತ್ತ; ಉತ್ತರಿಸುತ್ತಿದ್ದಾಳೆ ಬಿಳಿಯುಡಿಗೆಯಲ್ಲಿರುವ ಕ್ರೈಸ್ತ ಸನ್ಯಾಸಿನಿ ಜೊತೆ ಬರುತ್ತ; ಕಲಿಯುತ್ತಿವೆ ಮಕ್ಕಳು ಸೊನ್ನೆ ಸುತ್ತುವುದನ್ನು ಹಾಡು ಹೇಳುವುದನ್ನು […]