
ತುಂಬಿದ ಕಪ್ಪನೆ ನೇರಿಳೆಯಂತೆ ಮಿರಿ ಮಿರಿ ಮಿಂಚುವ ಮಗುವೊಂದು ಚಿಂದಿಯನುಟ್ಟಿದೆ, ಚರಂಡಿ ಬದಿಗೆ ಮಣ್ಣಾಡುತ್ತಿದೆ ತಾನೊಂದೆ ದಾರಿಯ ಎರಡೂ ದಿಕ್ಕಿಗೆ ವಾಹನ ಓಡಿವೆ ಚೀರಿವೆ ಹಾರನ್ನು, ಮಗುವಿನ ಬದಿಗೇ ಭರ್ರನೆ ಸಾಗಿವೆ ನೋಡದಂತೆ ಆ ಮಗುವನ್ನು! ಅರೆ ಕ...
ಕೆಸರಲಿ ಕಾಯುವ ಕಮಲದ ಕೆನ್ನೆಗೆ ಬಾನಿನ ಹನಿಮುತ್ತು ಮಿಸುಕಲು ಬಾರದ ಬೆಟ್ಟದ ನೆತ್ತಿಗು ಹೂಬಿಸಿಲಿನ ಸುತ್ತು ಬಿರಿಯಲು ಕಾದಿಹ ಮೊಗ್ಗಿನ ಬದಿಗೇ ದುಂಬಿಯ ದನಿಹೊರಳು ಕಾಯಿಯ ನೆತ್ತಿಯ ತಾಯಿಯ ಹಾಗೆ ಕಾಯುವ ಎಲೆನೆರಳು ಕಾಡಿನ ಮಡಿಲಲಿ ಸಾವಿರ ಜೀವ ಎಲ್ಲ...
ಆರದಿರಲಿ ಆಸೆ ಉರಿಗೆ ಬೀಳದಿರಲಿ ಕನಸು, ನೋಯದಿರಲಿ ಭಾರ ಹೊತ್ತ ಬಡವರ ಹೂಮನಸು. ಯಾರ ಅನ್ನ ಎಲ್ಲೋ ಬೆಳೆವ ರೈತನ ಬಲದಾನ ಯಾರ ಭಾರ ಏಕೋ ಹೊರುವ ಕೂಲಿಯವನ ಮಾನ ಬೀದಿ ಗುಡಿಸಿ ಕೊಳೆನೆಲದಲಿ ಮಲಗುವವನ ನೇಮ ಕಾಯುತ್ತಿವೆ ನಮ್ಮ, ಅವರೆ ಈ ನಾಡಿನ ಪ್ರಾಣ ಗು...
ಹರಿಯುವ ಹೊಳೆಗೂ ಸುರಿಯುವ ಮಳೆಗೂ ಏನೇನಿದೆಯೋ ಸಂಬಂಧ! ಬೆಳಕಿನ ಹನಿಗೂ ಹಕ್ಕಿಯ ದನಿಗೂ ಇಲ್ಲವೆ ಹೇಳಿ ಒಳಬಂಧ? ನಾರುವ ಕಸಕೂ, ಹೂ ಪರಿಮಳಕೂ ಇದ್ದೇ ಇದೆ ಬಿಡಿ ಮಾತುಕಥೆ; ಹಣ್ಣಿನ ಒಳಗೇ ಬೀಜವಿಡಲು ಮರ ಉಪಾಯವಲ್ಲದೆ ಇದ್ದೀತೇ? ಕುಡಿಯಲು ಬಾರದ ಕಡಲಿನ ...
ಈ ಆಗಸ ಈ ತಾರೆ – ಜುಳು ಜುಳನೆ ಹರಿವ ಜಲಧಾರೆ ಮುಗಿಲ ಮಲೆಯೆ ಸಾಲೇ-ಆಹಾ ಯಾರದೊ ಈ ಬಗೆ ಲೀಲೆ! ಬೆಳಗ ಕಾಯ್ದ ಹಿಮವೋ – ಹಿಮವ ಮೆಲ್ಲನೆ ನೇಯುವ ತಮವೋ ತಮವ ಕಳೆದು ಹಿಮ ಓಡಿಸುವ ಬೆಚ್ಚನೆ ಬಿಸಿಲಿನ ಕ್ರಮವೋ! ಹೆಣ್ಣಿನ ಕಣ್ಣಿನ ದೀಪ ಉರಿಸ...
ಜೀವವಿಂದು ಏನೋ ಒಂದು ಮೋದಕೆ ವಶವಾಗಿದೆ ಕನಸೋ ಭ್ರಮೆಯೊ ಕಣ್ಣ ನವೆಯೊ ತರ್ಕ ಕಳಚಿ ಉರುಳಿದೆ ಬಾನ ತುಂಬ ಬೆಳಕ ಹೊಳೆ ಸೋರಿ ಭೂಮಿಗಿಳಿದಿದೆ ಧಾರೆ ಧಾರೆ ಸೇರಿ ಹರಿದು ನದಿ ಸಾಗರ ಮೂಡಿವೆ ಅಂಗಳದಲಿ ನಗುವ ಹೂವೆ ಆಗಸದಲು ಹೊಳೆದು ಜಗವನೆಲ್ಲ ಒಡೆದುಕೊಡುವ...
ನೀರ ಮೇಲಿನ ಲೀಲೆ ನಮ್ಮದೀ ಜೀವನ ಗಾಳಿ ನೂಕಿದ ತೀರ ಸೇರಿ ಪಯಣ ಪಾವನ ಯಾರಿಗೂ ತಿಳಿಯದಂಥ ನೂರುಗುಟ್ಟು ನೀರಲಿ ಧೀರರಿಗೆ ಮಾತ್ರ ದೊರೆವ ಮುತ್ತು ರತ್ನ ತಳದಲಿ ದೂರದ ತಾರೆಯೇ ದೀಪ ನಮಗೆ ಇರುಳಲಿ ತೀರವ ಬಿಟ್ಟ ಗಳಿಗೆ ನೀರೇ ನಮ್ಮ ದೇವರು, ದಡ ಸೇರಿದ ಮೇ...
ಬೆಳಕಿನ ಹಾಡಿಗೆ ಕಾಯುತಲಿರುವೆವು ಇರುಳಿನ ಅಂಚಿನಲಿ ಅರುಣನ ಹೊಂಚಿನಲಿ ಸುಮ ಫಲ ಚಿಗುರನು ಮುಡಿದ ಮರಗಳನು ಮೊರೆಯುವ ತೊರೆಗಳನು, ಕಾಳಮೇಘಗಳ ಸೀಳಿ ಹಾಯುವ ಮಿಂಚಿನ ದಾಳಿಯನು, ಯಾವ ತೇಜವದು ತಾಳಿ ನಿಂತಿಹದೊ ಎಲ್ಲ ಲೋಕಗಳನು ಕೀರ್ತಿಸಿ ಬರೆವೆವು ಆ ಹಿರ...
ಸಂಜೆಯ ಮಂಜು ಕವಿಯು ವೇಳಗೆ ಬಂದರು ನಾಲ್ಕು ಜನ ಮುಖವೇ ಕಾಣದ ಹೆಸರೇ ಕೇಳದ ಯಾರೋ ದೀನಜನ ಜಗುಲಿಯ ಮೇಲೆ ಕೂರಿಸಿ ಹಾಕಿದೆ ಉಳಿದ ಕೊಂಚ ಅನ್ನ ಹಾಸಲು ಹೊದೆಯಲು ನಾಚದೆ ನೀಡಿದೆ ತುಂಡು ಹೊದಿಕೆಯನ್ನ ಆತುರದಿಂದಲೆ ತಿಂದರು ಅನ್ನವ ಮುಖ ಅರಳಿತು ಹಿತಕೆ, ಏ...
ಯಾರದು, ಯಾರದು, ಯಾರದು ತಿಳಿಯಲು ಏತಕೆ ಬಾರದು? ಗಂಧದ ಮರದಲಿ ನಂದದ ಪರಿಮಳ ಲೇಪಿಸಿದವರಾರು? ಮಂದಾರದ ಹೂಬಟ್ಟಲ ಬಂಧವ ರೂಪಿಸಿದವರಾರು – ಗಿಡದಲಿ ಛಾಪಿಸಿದವರಾರು? ಬೆಟ್ಟದ ಮೈಯಲ್ಲೆಲ್ಲೋ ಸಂದಿಯ ಇಟ್ಟ ಧೀರ ಯಾರು? ಒಂದೊಂದೇ ಹನಿ ನೀರಿನಲಿ &#...







