
ದೀಪದ ಕುಡಿಗಳು ಎಲ್ಲೆಲ್ಲೂ ದೀಪದ ಪಡೆಯೇ ಎಲ್ಲೆಲ್ಲೂ, ಬಾನಲ್ಲೂ ಬುವಿಯಲ್ಲೂ ಮಕ್ಕಳು ಮುದುಕರ ಕಣ್ಣಲ್ಲೂ. ಕರೀ ಮೋಡದಾ ಮರೆಯಲ್ಲಿ ಹಾಸಿದ ಬೆಳಕಿನ ತೆರೆಯಲ್ಲಿ ಮಿಂಚುವ ಭಾಷೆ, ಏನೋ ಆಸೆ ಕಾತರ ತುಂಬಿದ ಬಾನಲ್ಲಿ ಕಲ್ಲು ಮುಳ್ಳಿನಾ ಬದಿಯಲ್ಲೇ ಬಿರುಸು...
ಕೊನೆಯೇ ಇಲ್ಲದ ಕಾಳಗವಾಗಿದೆ ಕತ್ತಲೆ ಬೆಳಕಿನ ರೀತಿ ನುಂಗುವ ರಾತ್ರಿಯ ಭಂಗಿಸಿ ದಿನವೂ ಬೆಳಗುತ್ತಲೆ ಇದೆ ಜ್ಯೋತಿ ಹೆಪ್ಪುಗಟ್ಟಿರುವ ಕಪ್ಪು ಮೋಡಗಳ ಬೇದಿಸಿ ಹೊಳೆದಿವೆ ಚುಕ್ಕಿ ಸತ್ತಲೋಕವನು ದನಿಯ ಬೆಳಕಿಂದ ಎಚ್ಚರಕೆತ್ತಿವೆ ಹಕ್ಕಿ. ಕಾದಿದೆ ಮುಗಿಲ...
ಕತ್ತಲ ಕಡಲಲಿ ಸಾಗುತ್ತಲೆ ಇವೆ ಬೆಳಕಿನ ದೋಣಿಯ ಸಾಲುಗಳು, ನಟ್ಟಿರುಳಲ್ಲಿ ಫಳ ಫಳ ಮಿಂಚಿವೆ ನಕ್ಷತ್ರದ ಮಣಿಮಾಲೆಗಳು. ಹಸಿರಿನ ಅಗಾಧ ಹಸರದ ಮೇಲೆ ಖುಷಿಯಲಿ ಆಡಿವೆ ಹೂವುಗಳು, ಕತ್ತಲ ಕೊನೆಯ ಸಾರುತ ಹಕ್ಕಿಯ ಹಾಡನು ತುಳುಕಿವೆ ಗೂಡುಗಳು. ಬೆಳಕಾಗದ ಗೂ...
ಹಳೆಬಾಳಿಗೆ ಹೊಸ ಅರ್ಥವ ತಾ ಸಂಕ್ರಾಂತಿಯ ಸೂರ್ಯ, ಹೊಸ ಬೆಳಕಲಿ ತೊಳೆ ಈ ಜಗವ ಮೊಳಗಿಸು ನವತೂರ್ಯ. ಕಾಲದ ಬೆಂಕಿಯ ಹಾಯ್ದುಳಿದ ಅಪರಂಜಿಯನುಳಿಸು, ಚಿತ್ತದ ಕತ್ತಲೆಗಳ ಅಳಿಸಿ ಭಾವಶುದ್ಧಿ ಹರಸು. ಅಂತರ್ಮುಖಿ ಆಗಲಿ ಈ ಬಾಳು ತನ್ನ ನಿಜಕೆ ಒಲಿದು, ಹತ್ತಲ...
ಕತ್ತಲೆ ಎನುವುದು ಇಲ್ಲವೆ ಇಲ್ಲ ಇರುವುದು ಬೆಳಕೊಂದೇ, ಅರಿಯದೆ ಜನರೋ ಕೂಗಿ ಹೇಳುವರು ಕತ್ತಲೆ ಇದೆಯೆಂದೇ! ಕತ್ತಲೆ ಎನುವುದು ನಮ್ಮದೆ ಸೃಷ್ಟಿ ಕೇವಲ ನಮ್ಮದೆ ಕಲ್ಪನೆ, ಬೆಳಕಿಗೆ ಬೆನ್ನನು ತಿರುಗಿಸಿದಾಗ ಹುಟ್ಟುವ ಭ್ರಮೆಯನ್ನೇ ಕತ್ತಲೆ ಕತ್ತಲೆ ಎನ್...
ಬೆಳಕಿನಲೆ ದೀಪಾವಳಿ ಹಣತೆ ಹೊಳೆ ದೀಪಾವಳಿ ಇರುಳಿನೆದೆಯನು ಸೀಳಿ ಹಬ್ಬುವ ಹಬ್ಬ ಈ ದೀಪಾವಳಿ. ಕವಿವ ಕತ್ತಲ ತಳ್ಳುತ ಬಲಿಯ ಹೆಡತಲೆ ಮೆಟ್ಟುತ ಜನದ ಮನಕೆ ಮೋದ ಸಂತಸ ಸುರಿಯುವೀ ದೀಪಾವಳಿ. ಸಣ್ಣ ಹಣತೆಯ ಕುಡಿಗಳು ಉರಿವ ಸೂರ್ಯನ ಮರಿಗಳು ಒಟ್ಟು ನಿಂತರೆ...
ಬಂದ ವಸಂತ ಬಂದ ಇದೋ ಸೃಷ್ಟಿಗೆ ಪುಳಕವ ತಂದ ಇದೋ ಮರಮರದಲು ಚಿಗುರಿನ ಗಣಿಯ ಹಕ್ಕಿಯ ಉಲ್ಲಾಸದ ದನಿಯ ತೆರೆಸಿದ, ಮಂದಾನಿಲನನು ಕರೆಸಿದ ಹರಸಿದ ಹೊಲಗದ್ದೆಗೆ ತೆನೆಯ. ತೆಳುಮುಗಿಲನು ನೀಲಿಯ ನಭಕೆ ತಿಳಿಭಾವವ ಜನಮಾನಸಕೆ, ಹೊಳೆಯುವ ಹಸಿರಿನ ಬಣ್ಣದ ಶಾಲನು...
ಬಾಗಿಲ ಬಡಿದಿದೆ ಭಾವೀ ವರ್ಷ ಬಗೆ ಬಗೆ ಭರವಸೆ ನೀಡಿ, ಭ್ರಮೆ ನಮಗಿಲ್ಲ ನೋವೋ ನಲಿವೋ ಬರುವುದ ಕರೆವೆವು ಹಾಡಿ. ಎಲ್ಲ ನಿರೀಕ್ಷೆ ಸಮಯ ಪರೀಕ್ಷೆಗೆ ಕೂರದೆ ವಿಧಿಯೇ ಇಲ್ಲ, ಕೂತದ್ದೆಲ್ಲ ಪಾಸಾದೀತೆ? ಜೊತೆ ಜೊತೆ ಬೇವೂ ಬೆಲ್ಲ ಕಾಲದ ಚೀಲದೊಳೇನೇ ಇರಲಿ ಕ...
ಬಾನು ರೆಪ್ಪೆ ಮುಚ್ಚುತಿದೆ ಇರುಳು ಸೆರಗ ಹೊಚ್ಚುತಿದೆ, ತಾರೆ ಚಂದ್ರ ತೀರದಲ್ಲಿ ನಕ್ಕು ಹರಟೆ ಕೊಚ್ಚುತಿವೆ, ಮಾತಾಡದೆ ಸಂಭ್ರಮದಲಿ ತೇಕಾಡಿದೆ ಮುಗಿಲು, ಹಾಡಲು ಶ್ರುತಿಗೂಡುತ್ತಿದೆ ಬೆಳುದಿಂಗಳ ಕೊರಳು! ದಡವ ಕೊಚ್ಚಿ ಹರಿಯುತಿದೆ ನದಿಗೆ ಮಹಾಪೂರ, ಗ...
ಬಂದೇ ಬರುವುವು ಬಂಗಾರದ ಹೊಂಗಿರಣದ ನಾಳೆಗಳು, ಬಣ್ಣ ಬಣ್ಣದಾ ಬದುಕನು ಬರೆಯಲು ತೆರೆದಿದೆ ಹಾಳೆಗಳು. ಎಲ್ಲೆಲ್ಲೂ ಹೊಗೆಯಾಡಿದೆ ನೋವೇ ಅಳುಕದಿರಲಿ ಮನವು, ಕಲಕದೆ ಬಾಳು ತಿಳಿವುದೆ ಹೇಳು ಜಗದ ದುಃಖ ನೋವು? ನಾಳೆಯ ಬಾಳಿನ ಸವಿಯನು ಕನಸದ ಜೀವವಿಲ್ಲ ಜಗದ...







