
ಮೆಲ್ಲಮೆಲ್ಲನೆ ಅಂಬುದಗಳ ಬಂಬಲು ಬಂದು ಹುಣ್ಣಿಮೆಯ ಹೊಂಗದಿರನನು ಮುತ್ತಲೆಳಸುವದು ತಾರೆಗಳ ಬಳಗವನು ಚದರಿಸುತ ಬಳಸುವದು,- ಮುಗಿಲ ಮಂಡಲದೀಚೆ ಕಾರ್ಮುಗಿಲೊ ಎನೆ ನಿಂದು, ಮಿಡುಕಿದೆನು ಮನದೊಳಗೆ ಏಕಿದೀ ಬಗೆಯೆಂದು. ಕಾರಣವನರಿಯದಲೆ ಲೋಕ ಕಳವಳಿಸುವುದು...
(೧) ಇದೊ! ನನ್ನ ಸ್ಮತಿಪಧದಿ ಎಸದನೀ ನಾಯಕನ ಹಾಳುಹಂಪೆಯಲಿರುವ ಮೂಲಗುಂಪೆಯನೊಂದ ಶೋಧಿಸುತ ನಡೆದಿರಲು ಹಾಳು ದೇಗುಲವೊಂದ ಕಂಡೆ ಜನರಗಿಯುತಿಹುದನು ಅವರ ಕಾಯಕವ- ನೀಕ್ಷಿಸುತ ನಿಂತಿರಲು ಗುಡಿಯ ಕಲ್ಲಂಬದಡಿ- ಗಿರುವ ಗುಹೆಯೊಂದರಲಿ ಓರ್‍ವ ವ್ಯಕ್ತಿಯ ಕಂಡ...
(ದಿವಂಗತ ಗೆ. ಪೇಜಾವರ ಸದಾಶಿವರಾಯರನ್ನು ಕುರಿತು) ಕಡಲ ದಾಂಟುವದೆ ಕಡು ಪಾಪವೆಂದುಸಿರುತಿಹ ಕುರುಡು ನಂಬಿಗೆಯ ಹಿಂತುಳಿದು ಮುಂದಡಿಯಿಟ್ಟೆ ನಾಡ ನಿಲಿಸುವ ಯಂತ್ರವಿದ್ಯೆಯೆಡೆ ಗುರಿಯಿಟ್ಟೆ. ನಾಡ ಹಿರಿಯರ ನೋಟದಂತೆ ನಡೆದಿರಲಹಹ! ಪಡುವಣದ ವಿದ್ಯೆಯೆದೆ...







