ಝರಿ

Latest posts by ಜರಗನಹಳ್ಳಿ ಶಿವಶಂಕರ್‍ (see all)

ಕನಸು ಕಾಣುವ ಕಣ್ಣುಗಳ ಮುಂದೆ ಕತ್ತಲು ಬೆಳಕಿಗೆ ಏನು ಕೆಲಸ ಕರಿ ಮೋಡಗಳ ಮಿಲನದ ಒಳಗೆ ಬೆಳಕು ಮಿಂಚಾಗಿ ಪಾಪ ನಾಗಾಲೋಟ *****

Read More
Latest posts by ಜರಗನಹಳ್ಳಿ ಶಿವಶಂಕರ್‍ (see all)

ಕುಂಬಾರರು ಮಾಡಿದ ಹಣತೆಗೆ ಗಾಣಿಗರ ಎಣ್ಣೆಯ ತುಂಬಿ ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು ಬತ್ತಿಯ ಮಾಡಿ ದೀಪವ ಹಚ್ಚಿದರೆ ಹಲವು ಜಾತಿಗಳು ಕೂಡಿ ಕುಲಗೆಟ್ಟ ಬೆಳಕು ನೋಡ!

Read More
Latest posts by ಜರಗನಹಳ್ಳಿ ಶಿವಶಂಕರ್‍ (see all)

ಜ್ವಾಲೆಯಾಗಿ ಉರಿದು ಬೂದಿಯಾಗಿ ಸಾಯುವ ಭಯ ಬೆಂಕಿಗೆ ಕಾಣದ ಕಿಡಿಯಾಗಿ ಬಚ್ಚಿಟ್ಟುಕೊಂಡಿದೆ ಪಾಪ ಕಲ್ಲಿನೊಳಗೆ *****

Read More
Latest posts by ಜರಗನಹಳ್ಳಿ ಶಿವಶಂಕರ್‍ (see all)

ಬತ್ತಿಯಲ್ಲಿರುವ ಪ್ರತಿ ಎಳೆಯಲ್ಲು ಅಡಗಿ ಕುಳಿತಿದೆ ಬೆಳಕಿನ ಕಿರಣ ಎಣ್ಣೆಯಲ್ಲಿರುವ ಪ್ರತಿ ಕಣದಲ್ಲು ತುಡಿಯುತ್ತಿದೆ ಬೆಳಕಿನ ಹೂರಣ ಮಣ್ಣಿನ ಹಣತೆಯ ಹಾಸಿಗೆಯಲ್ಲಿ ಎಣ್ಣೆ ಬತ್ತಿ ಬೆರೆತು ಬಿರಿಯುತ್ತಿದೆ

Read More
Latest posts by ಜರಗನಹಳ್ಳಿ ಶಿವಶಂಕರ್‍ (see all)

ಎಣ್ಣೆ ತುಪ್ಪ ಬತ್ತಿ ಹಣತೆ ಎಲ್ಲವೂ ಇದೆ ದೀಪ ಉರಿಯಲು ಗಾಳಿಯ ಅನುಮತಿ ಖಂಡಿತ ಬೇಕಿದೆ ದೀಪಗಳನ್ನು ಸದಾ ಅಪಹರಿಸುವ ಯಮ ಗಾಳಿ ಯಾರ ಕಣ್ಣಿಗೆ ಬಿದ್ದಿದೆ

Read More
Latest posts by ಜರಗನಹಳ್ಳಿ ಶಿವಶಂಕರ್‍ (see all)

ಬತ್ತಿಯಾದ ಹತ್ತಿ ನೊಂದುಕೊಳ್ಳುತ್ತೆ ತನ್ನ ಒಡಲೊಳಗೆ ಬೆಚ್ಚಗೆ ಅಡಗಿದ್ದ ಬೀಜವೇ ಎಣ್ಣೆಯಾಗಿ ತನ್ನನ್ನೇ ಸುಡುತ್ತಿದೆಯೆಂದು *****

Read More
Latest posts by ಜರಗನಹಳ್ಳಿ ಶಿವಶಂಕರ್‍ (see all)

ತಾಕಿದರು ಸಾಕು ನೇರ ನಾಟಿಕೊಂಡು ಉಳಿದೇ ಬಿಡುತ್ತವೆ ಮುಳ್ಳುಗಳು ಬಚ್ಚಿಟ್ಟು ಕೊಂಡರೂ ಅಳಿದು ಹೋಗುತ್ತವೆ ಹೂಗಳು *****

Read More
Latest posts by ಜರಗನಹಳ್ಳಿ ಶಿವಶಂಕರ್‍ (see all)

ಬಾಡುವ ಹೂವಿನ ಮಧುರ ಮಕರಂದ ಹಳಸುವುದಿಲ್ಲ ಜೇನ ಗೂಡಿನಲ್ಲಿ *****

Read More
Latest posts by ಜರಗನಹಳ್ಳಿ ಶಿವಶಂಕರ್‍ (see all)

ಈ ಭೂಮಿಗು ತಪ್ಪಿಲ್ಲ ಸಂಸಾರದ ಜಂಜಾಟ ಹಾಲುಣಿಸಬೇಕು ತೆನೆಗೆ ನೀರು ಕುಡಿಸಬೇಕು ಗೊನೆಗೆ ಸಂಸ್ಕಾರವ ಮಾಡಬೇಕು ವೃದ್ಧವೃಕ್ಷಕ್ಕೆ ಕೊನೆಗೆ *****

Read More
Latest posts by ಜರಗನಹಳ್ಳಿ ಶಿವಶಂಕರ್‍ (see all)

ಮಣ್ಣ ಸೇರಿ ಮೊಳೆವ ಮೊದಲೆ ಕುಡಿ ಬೀಜವ ಹಿಂಡಿ ಹಿಪ್ಪೆ ಮಾಡಿ ಕೊಂದರು ಗಾಣ ದಾರಿ ದೀಪಗಳಲ್ಲಿ ಎಣ್ಣೆಯಾಗಿ ನೀಡುತ್ತದೆ ಬೆಳಕಿನ ಪ್ರಾಣ *****

Read More