ಎಚ್ಚರಿಕೆ

ಹಣೆ ಬರಹದಣೆಕಟ್ಟು ಜಾತಿ ಮತಗಳ ಸುಟ್ಟು ಬಂದೇವು ಬಡವರು ಹೊಸ ಪಂಜು ಹಿಡಿದು. ಭೋರ್ಗರೆವ ನೀರೊಳಗೆ ಬಡವರೊಂದಾದೇವು ಹನಿ ಹನಿಯ ಕಿಡಿಗೊಳಿಸಿ ಅಲೆಯಾಗಿ ಹರಿದೇವು. ಅಪ್ಪಳಿಸಿ ಅಲೆಯಾಗ್ನಿ ಬೆಟ್ಟ ಬೂದಿಯಾದೀತು ಮಂತ್ರ ಹೇಳುವ ಮರ...

ಗೋಡೆಯ ಬರಹ

ಕುಣಿಯುತ ಬಂತೈ ಕೆನೆಯುತ ಬಂತೈ ಐದೂರ್ಷದ ಬಯಕೆ ಅಪರೂಪದ ನೆನಪು ಹಲ್ಗಿಂಜುವ ರೂಪು ಕೈ ಒಡ್ಡಿತು ಜನಕೆ. ಏನಬ್ಬರ ಏನುಬ್ಬರ ಸಿಹಿ ಸ್ವರ್ಗದ ಸಾರ! ಮೈದುಂಬಿದ ಬಾಯ್ದುಂಬಿದ ಬೊಜ್ಜಿನ ಪರಿವಾರ. ‘ಪ್ರಜೆಯೇ ಪ್ರಭುವು ಪ್ರಜೆಯೇ...
ಆತ್ಮಾಭಿಮಾನ ಮತ್ತು ಆತ್ಮಾವಲೋಕನ

ಆತ್ಮಾಭಿಮಾನ ಮತ್ತು ಆತ್ಮಾವಲೋಕನ

(ಸಂವಾದ - ಮಾಸಿಕದ ವಿಶೇಷಾಂಕ ಬಿಡುಗಡೆ-ಭಾಷಣ) ಶ್ರೀ ಮರಿಸ್ವಾಮಿಯವರ ಒತ್ತಾಸೆ ಹಾಗೂ ವ್ಯವಸ್ಥಾಪನೆಯಲ್ಲಿ ಗೆಳೆಯ ಇಂದೂಧರ ಹೊನ್ನಾಪುರ ಅವರು ಸಂಪಾದಕರಾಗಿ ಹೊರತರುತ್ತಿರುವ ‘ಸಂವಾದ’ ಮಾಸಿಕದ ದಶವಾರ್ಷಿಕ ವಿಶೇಷಾಂಕ ಈಗ ಬಿಡುಗಡೆಯಾಗಿದೆ. ಇದೊಂದು ಸಂತೋಷದ ಸಂದರ್ಭ,...

ಬೆಂಕಿ

ಒಡಲಿನಾಗೆ ಸಿಡಿಲು ಕುಂತು ಕೂಗು ಹಾಕಿತು. ನೆತ್ತರಾಗೆ ತತ್ತಿಯಿಟ್ಟು ತೇಲಿಬಿಟ್ಟಿತು. ಕೆಂಡದುಂಡೆಯಂಥ ತತ್ತಿ ಕನಸು ಕಟ್ಟಿತು- ಅದು ಬಿರುಕು ಬಿಟ್ಟಿತು, ನೆತ್ತರಲ್ಲಿ ತತ್ತಿಯೊಡೆದು ಬಂದುಬಿಟ್ಟವು- ಮರಿಗಳು ಬಂದುಬಿಟ್ಟವು. ಮೌನದಾಗೆ ಮೈಯ ತಿಂದು ಮಾತಾಡಿದವು- ಮರಿಗಳು...

ಇತಿಹಾಸ

ಇಲ್ಲಿ ಹರಿಯೋ ನೀರು ನೀರಲ್ಲ ಸ್ವಾಮಿ, ತೀರ್ಥವೆನ್ನುವರು ಇಲ್ಲಿ ನೆಟ್ಟ ಕಲ್ಲು ಕಲ್ಲಲ್ಲ ಸ್ವಾಮಿ, ದೇವರೆನ್ನುವರು ಇಲ್ಲಿ ಬಡಿಯೋ ಸಾವು ಸಾವಲ್ಲ ಸ್ವಾಮಿ, ಮೋಕ್ಷವೆನ್ನುವರು. ಇಲ್ಲಿರುವ ಬಡತನಕೆ ಇಲ್ಲಿ ಕಾರಣವಿಲ್ಲ ಕಳೆದ ಜನ್ಮದ ಪಾಪವಂತೆ...
ದಲಿತರ ಭಾಷೆ : ಹಸಿವಿನ ಭಾಷೆ

ದಲಿತರ ಭಾಷೆ : ಹಸಿವಿನ ಭಾಷೆ

(ಕನ್ನಡ ವಿಶ್ವವಿದ್ಯಾಲಯವು ಏರ್ಪಡಿಸಿದ ದಲಿತ ಸಂಸ್ಕೃತಿ ಕುರಿತ ವಿಚಾರ ಸಂಕಿರಣದ ಸಮಾರೋಪ ಭಾಷಣ) ‘ದಲಿತರು, ಭಾಷೆ ಮತ್ತು ಸಮಾಜ’ ಎನ್ನುವ ಈ ವಿಚಾರಸಂಕಿರಣದ ಸಮಾರೋಪ ಭಾಷಣಕ್ಕೆ ಸಂಬಂಧಪಟ್ಟಂತೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಮುಂಚೆ ಮೊನ್ನೆ...

ಪ್ರೀತಿ

ಮುಖವಿದ್ದರು ಮಾತಿಲ್ಲದ ಮನಸಿದ್ದರು ಕನಸಿಲ್ಲದ ಬರಿ ಮಸಣದ ಬಾಳು ಕಪ್ಪು ಕೂದಲ ಕೆದರಿ ಕೋರೆ ಹಲ್ಲಿನ ಮಾರಿ ಕಗ್ಗತ್ತಲ ಕಾವಲು. ಕಪ್ಪು ಕೋಟೆಯ ಒಳಗೆ ಬಲಿಯಾದ ಪ್ರೀತಿಯ ರಕ್ತ ನಂಟಿನಂಟನು ತೊಳೆದು ಮುಳುಗಿ ತೇಲುವ...

ಬೂದಿಯ ಬೆಳಕು

ರಕುತದ ಕಣದಾಗೆ ಬಡತನದ ಸುಗ್ಗಿ ಮೆದೆ ಮೆದೆಯ ಸದೆಬಡಿದು ಹಿರಿದಾಗಿ ಹಿಗ್ಗಿ ಬೆವರು ಹರಿಸಿದಾ ಕನಸು ಬತ್ತಿಹೋಯ್ತು ಮೂಳೆಮೂಳೆಯ ಮಾತು ಸತ್ತುಹೋಯ್ತು. ಮನೆ, ಮಡಕೆ, ಮಂಚದಲಿ ಮನಮನದ ಮೂಲೇಲಿ ಬುಸುಗುಡುವ ಬರ ಹರಿದು ಹಸಿರು...
ಕೋಮುವಾದದ ಕೆಂಡ ಆರಲಿ

ಕೋಮುವಾದದ ಕೆಂಡ ಆರಲಿ

ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದಲ್ಲಿ ಚಾರಿತ್ರಿಕ ಸಂಗತಿಗಳ ಸತ್ಯಾನ್ವೇಷಣೆ ಮತ್ತು ಸಾಮರಸ್ಯ ಗೌಣವಾಗಿ, ಭಾವೋದ್ರೇಕದ ಬುಲ್ಡೋಜರ್ ತನ್ನೆಲ್ಲ ಅಬ್ಬರದೊಂದಿಗೆ ಬೀದಿಗೆ ಬಂದಿದೆ. ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳು ಔಚಿತ್ಯ ಪ್ರಜ್ಞೆಯ ಮೇಲೆ ಹಲ್ಲೆ ಮಾಡುತ್ತಿರುವ...

ಬಡವನ ಆಸೆ

ಜೀವ ಚಿಮ್ಮಿರುವ ಹೂವೇ ಹಾಡು ಹೊಮ್ಮಿರುವ ಹಗಲೇ ಮಾತಾಡುವಾಸೆ ನನಗೆ ನಿಮ್ಮೊಂದಿಗೆ ಮಿನುಗು ಹೆಜ್ಜೆಯ ತಾರೆಯೇ ಚಂದ್ರ ಚುಂಬಿತ ರಾತ್ರಿಯೇ ಬೆರೆಯುವಾಸೆ ನನಗೆ ನಿಮ್ಮೊಂದಿಗೆ. ಬಿಸಿಲ ಬಂಧನ ಮುರಿದು ಹಸಿರ ಹಾದಿಗೆ ಜಿಗಿದು ನಲಿಯುವಾಸೆ...
cheap jordans|wholesale air max|wholesale jordans|wholesale jewelry|wholesale jerseys