ಚಂದ್ರನ ವಿವರಣೆ

ಸೂರ್ಯ ದಿನ ಇಡೀ ಕಾಯ್ಸಿದ್ದನ್ನೆಲ್ಲ ತಂಪಾಗಿಸೋದು ಎಷ್ಟು ಕಷ್ಟದ ಕೆಲ್ಸ ಯಾರಿಗಾದ್ರೂ ಗೊತ್ತಾ. ಏನೋ ತಿಂಗಳಿಗೊಂದು ಅಮಾವಾಸ್ಯೆ ನಾನು ರಜ ಹಾಕಿದ್ರೆ ಅದಕ್ಯಾಕ್ರಿ ತಕರಾರು ಸೂರ್ಯನಿಗೆ ರಜವೂ ಬೇಕಿಲ್ಲ. ಮಜವೂ ಗೊತ್ತಿಲ್ಲ ಯಾಕೇಂದ್ರೆ ಯಾವಾಗಲೂ...

ತಂಪು

ಮೂಡುವನು ರವಿ ಮೂಡುವನು.  ಕತ್ತಲೊಡನೆ ಜಗಳಾಡುವನು ಮೂಡಣ ರಂಗಸ್ಥಳವನು ನೆತ್ತರು ಮಾಡುವನು. ಅವನು ಬರಬೇಕಾದರೂ ಕೆಂಪು ರಾಣಾರಂಪ ಹೋಗಬೇಕಾದರೂ ಕೆಂಪು ರಾಣಾರಂಪ. ನನಗೆ ಜಗಳವೂ ಇಲ್ಲ, ಕೆಂಪು ರಾಣಾರಂಪ ಯಾವುದೂ ಇಲ್ಲ. ಬರುವಾಗಲೂ ತಂಪು...

ಅವನಿಗಷ್ಟು ಪೊಗರು

ಎಲ್ಲರೂ ಅವನನ್ನು ಸುತ್ತೋದ್ರಿಂದ್ಲೇ ಕಣ್ರೀ ಅವನಿಗಷ್ಟು ಪೊಗರು. ನಾನು ಆ ಕೆಲ್ಸ ಮಾಡ್ದೇ ಇದ್ದದ್ದರಿಂದಲೇ ನೋಡ್ರಿ ಉಳೀದಿರೋದು ನನಗೂ ಅಷ್ಟೋ ಇಷ್ಟೋ ಹೆಸರು. *****

ಸ್ನಾನಕ್ಕೆ ಬಂದ ಚಂದ್ರ

ಸ್ನಾನಕ್ಕೇಂತ ಬಂದ ಚಂದ್ರ ಸಮುದ್ರ ಕನ್ಯೆಯ ಕೋಣೇಲಿ ಅಡಗಿದನೆಂಬ ಗುಮಾನಿ ಕೇಳಿ, ಬೆಳಗಿನ ಜಾವದಲ್ಲಿ ತುರ್ತಾಗಿ ಬಲೆ ಕೊಟ್ಟು ಬೆಸ್ತರನ್ನಟ್ಟಿದ ಭೂಮಿಗೆ ಸಿಕ್ಕದ್ದು ಏನು? ಬರೀ ಒಂದಿಷ್ಟು ಮೀನು. *****

ಎಷ್ಟು ಕಣ್ಣು ಹೊಡೆದರೂ

ಹುಣ್ಣಿಮೆ ಚಂದ್ರನಿಗೆ ತಾರೆಯರು ಎಷ್ಟು ಕಣ್ಣು ಹೊಡೆದರೂ ಅವರು ಅವನ ಕಣ್ಣಿಗೇ ಬೀಳಲಿಲ್ಲ ಬೆಳ್ಳಿ ಬೆಳದಿಂಗಳ ಹಾಲಲ್ಲಿ ಬೆತ್ತಲೆ ಮೀಯುತ್ತಿದ್ದ ಭೂಮಿ ಮೇಲೆ ನೆಟ್ಟ ಅವನ ಕಣ್ಣು ಬೆಳಗಾಗುವವರೆಗೂ ಅತ್ತಿತ್ತ ಹೊರಳಲಿಲ್ಲ. *****

ಚಂದ್ರ ಸ್ಪೀಡಾಗಿ ಒಡ್ತಾ ಇದ್ದ

ಹಗಲಿಡೀ ಹಾಳು ಮನುಷ್ಯರನ್ನು ಸುಧಾರಿಸಿ ಸುಸ್ತಾದ ಭೂಮಿ ರಾತ್ರಿ ಮತ್ತೆ ಚಂದ್ರ ಬಂದು ಕಾಡದಂತೆ ತಡೆಯೋದಕ್ಕೆ ಮೋಡಗಳ ಕಾವಲು ಹಾಕಿ ಹೋಗಿ ಮಲಗಿದ್ದಳು ಮುತ್ತಿಗೆ ಹಾಕಿದ ಮೋಡಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಚಂದ್ರ ಆಕಾಶದ ತುಂಬಾ ಸ್ಪೀಡಾಗಿ...

ಎಲ್ಲಿ ಮಾಯವಾದ

ಹದಿನೈದು ದಿನದಿಂದ ಕೊರಗಿ ಕೊರಗಿ ಬಡವಾದ ಚಂದ್ರ ಇಂದು ಇದ್ದಕ್ಕಿದ್ದಂತೆ ಎಲ್ಲಿ ಮಂಗಮಾಯವಾದ? ತಾರೆಗಳಿಗೆ ದಿಗಿಲು ಪಾಪ ಹೋಗಿ ಹುಡುಕೋಣ ಅಂದರೆ ಅಮವಾಸ್ಯೆ ಕತ್ತಲು. *****

ದಾರಿ ಬಿಡಿ

ಚಂದ್ರಪ್ನೋರೇ ಚಂದ್ರಪ್ನೋರೇ ದಾರಿ ಬಿಡಿ. ಇಂದ್ರಪ್ನೋರು ಹೇಳಿದಾರೆ ಭೂಮಿ ದೇವಿಗೆ ಸ್ನಾನ ಮಾಡ್ಸೋಕೆ ಸ್ನಾನ ಮುಗಿಯೋವರೆಗೂ ಮೋಡದ ಪರದೆ ಸರಿಸಿ ಇಲ್ಲಿ ಹಣಕಿ ನೋಡದೆ ಬೇರೆ ಎಲ್ಲಿಗಾದರೂ ಸ್ವಲ್ಪ ಗಾಡಿ ಬಿಡಿ. *****
cheap jordans|wholesale air max|wholesale jordans|wholesale jewelry|wholesale jerseys