ಕೆಟ್ಟು ಒಳ್ಳೆಯವನು

ಕೆಟ್ಟು ಒಳ್ಳೆಯವನು ಎಂದೆನಿಸಿಕ್ಕೊಳ್ಳುವುದಕಿಂತ ಪೆಟ್ಟುತಿಂದು ಜಾಣನಾಗುವುದಕ್ಕಿಂತ | ಹಾಗೆಯೇ ಎನ್ನ ಒಳ್ಳೆಯವನೆಂದೆನಿಸು ಛೀ...ಥೂ ಎಂದೆನಿಸದೆ ಎನ್ನ ನೀ ಬೆಳೆಸು|| ಕೆಟ್ಟಮೇಲೆ ಬುದ್ಧಿ ಬರುವುದಕ್ಕಿಂತ ಕೈಸುಟ್ಟಮೇಲೆ ಅರಿವುಮೂಡುವುದಕ್ಕಿಂತ| ಕೆಡುವ, ಕೈಸುಡುವ ಮೊದಲೇ ನೀನದನ ತಿಳಿಸೆನ್ನ ದೊರೆಯೇ...

ತಾಯೇ ಈ ಜನ್ಮ ನೀನಿತ್ತ ಭಿಕ್ಷೆ

ತಾಯೇ, ಈ ಜನ್ಮ ನೀನಿತ್ತ ಭಿಕ್ಷೆ ಈ ಬದುಕು ನೀನಿತ್ತ ದೀಕ್ಷೆ|| ನೀ ಆಸೆಪಟ್ಟು ಹಡೆಯದಿದ್ದರೆ ನಾವೆಲ್ಲಿ ಇರುತಿದ್ದೆವು ಈ ಭೂಮಿ ಮೇಲೆ| ನೀ ಬೆಳೆಸಿ ಹರಸಿದ ಮೇಲೆ ನಾವು ನಿನ್ನಾಸೆಯಂತಾಗಿ ಸೇರಿಯೆವು ತರತರದ...

ಬಾ ಎನ್ನೆದೆಯ ಗುಡಿಯಲಿ ಬೆಳಗು

ಬಾ ಎನ್ನೆದೆಯ ಗುಡಿಯಲಿ ಬೆಳಗು ಗುರುವೆ ನೀ ಜ್ಯೋತಿಯಾಗಿ | ಆರದ ಜ್ಞಾನದ ದಿವ್ಯತೇಜವಾಗಿ|| ಕರುಣಿಸು ಸುಜ್ಞಾನವ ಹೊಡೆದೋಡಿಸು ಅಜ್ಞಾನವ| ಆನಂದವ ಕರುಣಿಸು ಅಂಧಕಾರದ ಕಣ್ಣೀರ ವರೆಸು| ಹರೆಸು ಮಗುವಂತೆನ್ನ ಕೈಹಿಡಿದು ನಡೆಸು|| ನನ್ನೆಲ್ಲಾ...

ಅನ್ನ ಬ್ರಹ್ಮ ಅನ್ನ ಬ್ರಹ್ಮ

ಅನ್ನ ಬ್ರಹ್ಮ ಅನ್ನ ಬ್ರಹ್ಮ| ನಿನ್ನಿಂದಲೇ ನಮ್ಮ ಜನ್ಮ| ಒಡಲ ಅಗ್ನಿಯೊಡನೆ ನೀನು ಸುಡಲು ಚೈತನ್ಯ ಜನ್ಯ|| ನಿನ್ನ ಪ್ರಸಾದವೇ ಪರಮ ಶಕ್ತಿ| ನಿನ್ನಿಂದಲೇ ಬೆಳೆಯುವುದು ಯುಕ್ತಿ| ನಿತ್ಯ ನಿನ್ನ ಸ್ಮರಿಸಿ ಸ್ವೀಕರಿಸುವುದೇ ಸೂಕ್ತಿ||...

ಗುರುವೇ ನಿನ್ನ ಪಾದ ಧೂಳಿನ

ಗುರುವೇ ನಿನ್ನ ಪಾದ ಧೂಳಿನ ಕಣದ ಕಣ ನಾನು| ಕರುಣೆ ತೋರುತಿರು ನೀನು ಪರಿಪೂರ್ಣನಾಗುವವರೆಗೂ ನಾನು|| ದೀನ ನಾನು ನಿನ್ನ ಅಧೀನನು ವಿದ್ಯೆ ವಿದ್ವತ್‌ಲಿ ಮೇಧಾವಿ ನೀನು | ನಿನ್ನನೇ ನಂಬಿಹೆನು ನಾನು ಮಹಾ...

ಅನಾಥ ಬಂಧು

ಅನಾಥ ಬಂಧು ನೀನಾಗಿರಲು| ತಬ್ಬಲಿ‌ಎಂದೇಕೆ ಅಂದುಕೊಳ್ಳಲಿ ನಾನು|| ನಿನ್ನೀ ಜಗದಲಿ, ನನ್ನ ಹಿಡಿ ಅನ್ನಕೆ ಕೊರತೆಯೇ| ಒಂದು ಘಳಿಗೆಯ ಪುಟ್ಟನಿದ್ದೆಗೆ ನಿನ್ನೀ ವಿಶಾಲ ಜಗದಲಿ ವಿಶ್ರಾಂತ ಜಾಗಕೆ ಬರವೆ| ನನ್ನ ಸ್ನೇಹ ಸಂಘಕೆ ನಿನ್ನ...

ಅಕ್ಷರದೊಳ್ ಅನ್ನವನಿತ್ತ

ಅಕ್ಷರದೊಳ್ ಅನ್ನವನಿತ್ತ ಗುರುವಿಗೆ ಶರಣು| ಅಜ್ಞಾನದಿಂದ ಸುಜ್ಞಾನದ ಕಡೆಗೆ ನೆಡೆಸಿದ ಗುರುವಿಗೆ ನನ್ನ ಶರಣು|| ಕತ್ತಲೆಯಿಂದ ಬೆಳೆಕಿನೆಡೆಗೆ ಗುರಿತೋರಿದ ಗುರುವಿಗೆ ನನ್ನ ಶರಣು| ಕ್ಲಿಷ್ಟಕರವಾದುದ ಸರಳೀಕರಿಸಿದ ಗುರುವಿಗೆ ನನ್ನ ಶರಣು|| ಗುರು ಬ್ರಹ್ಮನಾಗಿ ಸಕಲ...

ಜೀವನವೆಂದರೆ ಬರೀ

ಜೀವನವೆಂದರೆ ಬರೀ ದುಡ್ಡಿನ ದುಡಿಮೆಯದಲ್ಲಾ| ಜೀವನವೆಂದರೆ ಬರೀ ಸದಾ ಸಮಯದ ಹಿಂದೆ ಓಡುವುದಲ್ಲಾ|| ಜೀವನವೆಂದರೆ ಬರೀ ಇತರರಿಗೆ ನ್ಯಾಯ ಹೇಳುವದಲ್ಲ ಜೀವನವೆಂದರೆ ಬರೀ ಓದು ಬರೆಯುವುದಲ್ಲಾ| ಜೀವನವೆಂದರೆ ಬರೀ ನೀತಿಯ ಪಾಠವ ಬೋದಿಸುವುದಲ್ಲ ಜೀವನವೆಂದರೆ...

ಏಕೆ ಹುಟ್ಟಿಸಿದೆ ನನ್ನನು?

ಏಕೆ ಹುಟ್ಟಿಸಿದೆ ನನ್ನನು? ಎಂದು ಪ್ರಶ್ನೆಯ ಕೇಳದೆ ಇಲ್ಲಿ ಹುಟ್ಟಿಸಿ ನಿನ್ನಯ ಕರ್‍ಮವ ಕಳೆಯೆ ಅವಕಾಶಕಲ್ಪಿಸಿದಕೆ ಕೃತಜ್ಞನಾಗಿರು|| ಏಕೆ ನನಗೆ ಈ ಸ್ಥಿತಿಯ ನೀಡಿದೆ ಎನ್ನುವುದಕಿಂತ ಇದಕಿಂತ ಕೆಳಗಿನ ಪರಿಸ್ಥಿತಿಯ ಅವಲೋಕಿಸಿ, ಇದೇ ನನಗೆ...

ಚಿಂತಿಸದಿರು ಮನವೇ

ಚಿಂತಿಸದಿರು ಮನವೇ ಜನರ ವಿಪರೀತವ ಕಂಡು ಕುಗ್ಗದಿರು ಜೀವವೆ ಈ ಜಗತ್ತು ವೇಗದಲಿ ಬದಲಾಗುವುದಕೆ ನೊಂದು|| ಜಗ ಓಡುತಿಹುದು ನಾಗಾಲೋಟದಲಿ ಹೊಸ ಹೊಸ ತಂತ್ರಜ್ಞಾನದ ಜೊತೆಯಲಿ| ಜನರೋಡುತಿರುವರು ಕಾಲಸಮಯದಿಂದೆ ಹಣಗಳಿಸುವ ಭರಾಟೆಯಲಿ| ಮರೀಚಿಕೆಯ ಕಂಡು...