ಎಲ್ಲವೆಮಗಪ್ಪಂತಿರಬೇಕೆಂದು ಹೋರಾಡಿದರೆ ಎಲ್ಲಿರ್‍ಪುದಾರೋಗ್ಯ?

ಬಲು ಜಟಿಲವಿಹುದೆಮ್ಮಾಯುರ್ವೇದ ಸೂತ್ರಗಳ ಪಾಲಿ ಸಲೆಂದದನು ಛೀತ್ಕರಿಸಿ ಸುಖವೆಂದೇನೇನೋ ಮಾಡಿ ರಲಾ ದೋಷಗಳೊಂದಾಗಿ ಇಳೆಯ ಕಳೆ ಕಳೆಯುತಿ ರಲೆಮಗಿನ್ನು ಆಯ್ಕೆಯುಳದಿಲ್ಲ, ಬದುಕುಳಯ ಲೆಲ್ಲ ತರ ಪಥ ಪಥ್ಯ ದರ್ಶನವನಿವಾರ್‍ಯ - ವಿಜ್ಞಾನೇಶ್ವರಾ *****

ಸರ್ವರೊಳಿತಿರುವ ಹಳ್ಳಿಪರ ಹೋರಾಡುವನಿವಾರ್‍ಯತೆಗೇನೆನ್ನುವುದು?

ಅರ್ಜುನನ ಪಾಡಿಂದೆನಗೆನ್ನ ಕೃಷಿಯ ಪರ ಬರೆವೀ ಹೊತ್ತಿನಲಿ, ಶಲ್ಯ, ಭೀಷ್ಮ, ದ್ರೋ ಣರಂಥವರೆಷ್ಟೊಂದು ಸಜ್ಜನ ಬಂಧುಗಳೆನ್ನ ವರಿಂದು ಪೇಟೆಯ ಪಕ್ಷದೊಳಿರುತಿಹರು ಪರಿಸರದ ಪರವಿತ್ತ ಕೃಷಿಗೆ ಬರಲೆಡೆ ಕಾಣದವರು - ವಿಜ್ಞಾನೇಶ್ವರಾ *****

ಲೋಕಾಚಾರವನು ಲೆಕ್ಕಚಾರಗೊಳಿಸಲುಂಟೇ ?

ಪಕ್ಕದೊಳು ಕುಳಿತಪ್ಪ ಆತಂಕದೊಳಾಗಾಗ ಚಾ ಲಕ ಮಗನ ವೇಗವತಿಯಾಯ್ತೆಂದು ಬ್ರೇಕೊತ್ತುವಂತೆನ್ನ ಕವನ ಸಾಲುಗಳಿಲ್ಲಿ ಲೋಕ ತಿದ್ದುವೆನೆಂದಲ್ಲ ಕೋಪವಾರಲು ಇಲ್ಲ ಯಾಕದೇನೋ ಅಂತೆ ಕೂಡ್ರಲರಿಯದೊದರಿದಲಾ - ವಿಜ್ಞಾನೇಶ್ವರಾ *****

ಅರಿವು ಕಷ್ಟವೋ ? ಮರೆವು ಕಷ್ಟವೋ ?

ಅರಿತಿದನು ಪೇಳ್ವುದದು ಬಲು ಕಷ್ಟವೋ ಸರಿ ಬೆವರಿ ಕಷ್ಟಪಟ್ಟುಣಬೇಕೆಂಬರಿವು ಕಷ್ಟವೋ ಆರದೋ ಕಷ್ಟವನ್ನು ಕದ್ದುಂಬ ಸುಖವ ಮರೆವುದು ಕಷ್ಟವೋ ಅರಿವಿನಾದರ್ಶವನ್ನು ಆಚರಿಪೆಚ್ಚರವು ಕಷ್ಟವೋ ಆರಿತಾಚರಿಸಿದೊಡದನು ಪೇಳದಾ ಮೌನ ಕಷ್ಟದೊಳು ಕಷ್ಟವೋ - ವಿಜ್ಞಾನೇಶ್ವರಾ *****

ಮಾತು ಕೇಳದಂತೆಲ್ಲ ಮಾತನಾಡಿದೊಡೇನೊಂಟಿಯಾದೊಡೇನು ?

ಆರ್ಥಿಕದಭಿವೃದ್ಧಿ ರಾಜಪಥದಾ ಗೌಜಿಗದ್ದಲವ ಪಥ್ಯವೆನಗಾಗಿರಲಾನಿಂದು ಕಾಲುದಾರಿಯೊಳೊಂಟಿ ಯಾದೊಡಂ ಎನಗಿಲ್ಲವೊಂಟಿತನ ಇರಲೆನಗೆ ನಿತ್ಯನೂತನವಿಳೆಯ ಬಂಟತನ. ಹೆತ್ತಮ್ಮನೊಡನಿರಲು ಎತ್ತಣದೊಂಟಿತನವಾ ಕೂಸಿಂಗೆ ಒಂಟಿ ಹುಟ್ಟಿದರು - ವಿಜ್ಞಾನೇಶ್ವರಾ *****

ಒಂದೆ ತರ್ಕದಳೆಯೊಳಗೆಲ್ಲ ವಿಷಯಗಳಿರುವುದೆಂತು ?

ಒಂದು ಕವನಕಿನ್ನೊಂದು ಕವನಕುಂ ತರ್ಕ ಸಂಬಂಧವಿಲ್ಲದೊಡದೆನ್ನ ದೋಷವಿರಬಹುದಾದೊ ಡಂ ಪ್ರಕೃತಿಯೊಳಿಂಥ ತರ್ಕ ದೋಷಗಳಿರುತಿರಲು ಒಂದೆ ಸೂತ್ರದೊಳೆಲ್ಲ ಮರ, ಗಿಡ, ಬಳ್ಳಿ, ಕಳ್ಳಿ, ಕಳೆ ಕಂಟಿಗಳಿಲ್ಲದಿರುತಿರಲೆನ್ನ ದೋಷವನಿವಾರ್‍ಯ ಸಂಗತಿಯು - ವಿಜ್ಞಾನೇಶ್ವರಾ *****

ಕುಂತು ಸಾಗುವ ವಾಹನವಿರಲೇನು ಕಷ್ಟವೋ ? ಯಾತ್ರೆಗೆ

ಮಂಕುತಿಮ್ಮನಂತೆನಗೂ ಕವನ ಬರೆವಿಷ್ಟ ಅಂದಿಗಿಂತಿಂದಿನ ಜೀವನವೆಷ್ಟೋ ಭ್ರಷ್ಟ ಗೊಂಡಿರಲೆನಗೆ ವಿಷಯದಾಯ್ಕೆಯೊಳಿಲ್ಲವರ ಕಷ್ಟ ಎಂತು ಬರೆದರು ಕವನವೆಂಬಾಧುನಿಕ ಬಗೆ ಬಟ್ಟೆ ಯಂತೂ ಸುಲಭಗೊಳಿಸಿಹುದೆನಗೆ ಕವಿ ಪಟ್ಟ - ವಿಜ್ಞಾನೇಶ್ವರಾ *****

ನೀರ ಭದ್ರತೆಗೆ ಇರಬೇಕಲ್ಲ ಕೊಡಪಾನ ?

ಸರೋವರದಂಥವರು ಸಾಧುಗಳಾದವರು ತ್ವರೆಯೊಳವರ ಬಳಿ ಸಾರಿದೊಡಲ್ಲಿ ಬೊಗಸೆ ನೀರನು ಹೀರಿ ತಣಿಯಲು ಬಹುದಾದೊಡಂ ದೂರ ದಾರಿಯ ದಣಿದ ಮಂದಿಗೆ ವಾರಿ ಸೇವೆಗೆ ಇರಲಿ ಬಿಂದಿಗೆಯೆಂದು ಬರೆದಿಹೆನಿಲ್ಲಿ ಕವನಗಳ - ವಿಜ್ಞಾನೇಶ್ವರಾ *****

ಈ ಜಗದೊಳೆಲ್ಲರೊಪ್ಪುವ ಮಾತನಾಡಿದವರುಂಟೇ ?

ಬೀಜ ವೃಕ್ಷದೊಳಾವುದಿಳೆಗೆ ಮೊದಲೆಂದು ವ್ಯಾಜ್ಯವಿಲ್ಲದಿದುವೆ ಸತ್ಯವೆನುತೊಂದು ರಾಜಿ ಮಾತನೊರೆವುದಾರಿಂಗೆಂದಾದೊಡಂ ಈ ಜಗದೊಳತಿ ಕಠಿಣ ಕಜ್ಜವಿರುತಿರಲೆನ್ನ ನ್ನ ಜ್ಞಾನದ ಮಿತಿಯಿದನು ಸೇರದಿರೆ ಮನ್ನಿಸಿರಿ - ವಿಜ್ಞಾನೇಶ್ವರಾ *****

ಎಲ್ಲರಂತಾನುಂ ಪ್ರಜಾರಾಜನಿರಲೇನು ತಪ್ಪು ? ಗೊಣಗಿದರೆ ?

ಬಲು ಸುಲಭ ಬಲು ಸುಲಭ ಲೋಕದ ತಪ್ಪನೆಣಿಸಿ ಪೇಳುವುದಾದೊಡೆಂತದನು ತಿದ್ದುವುದು ? ಎಲ್ಲ ದೋಷಕು ಮೂಲವಲ್ಲಲ್ಲೇ ವ್ಯಕ್ತಿ ದೋಷ ದೊಳಿರುತಿರಲು ಪ್ರಜಾ ಪ್ರಭುವನಾರು ತಿದ್ದುವುದು ? ಬಲು ಪ್ರಭಲವಿಂದೆಮ್ಮ ಕಾನೂನು ಪ್ರಭುವ ರಕ್ಷಿಸಲು -...
cheap jordans|wholesale air max|wholesale jordans|wholesale jewelry|wholesale jerseys