ಸರ್‍ರನೇ ಬರ್‍ರನೇ
ಗಿರಗಿರ ಸುತ್ತುವ
ಕೆಟ್ಟ ಬಿರುಗಾಳಿಗೆ
ಸಿಕ್ಕ ಮನ
ಟಪ್ಪೆಂದು
ಗೋಣು ಮುರಿದಿದೆ
ಸತ್ತ ಮನದ ಹೆಣಭಾರವ
ಹೊತ್ತ ಜೀವ ನಲುಗಿದೆ
ಸತ್ತ ಮನಕೆ
ಸಂಸ್ಕಾರ ಬೇಡವೇ?
ಕೊಳೆತು ನಾರೀತು ಜೋಕೇ!
ಮಣ್ಣಿಗಿಡುವೆಯಾ
ಅಗ್ನಿಗಿಡುವೆಯಾ
ಸಾಗಲಿ ಕಾರ್ಯ
ಆದಷ್ಟು ಬೇಗ
ಕೊಳೆತು ಕ್ರಿಮಿ
ಯಾಡುವ ಮೊದಲೇ
ಗಬ್ಬುನಾತ ವ್ಯಾಪಿಸುವ
ಮುನ್ನ
ಹೂತುಬಿಡು ಮಣ್ಣಿನೊಳಗೆ!
ಮರೆತು ಎಲ್ಲಾ ಕೊನೆಗೆ
ಹುಟ್ಟಲ್ಲೊಂದು ಹೊಸಮನ
ಚಿಗುರಿ ಪಲ್ಲವಿಸಲಿ ಚೈತ್ರವನ
ಸತ್ತಮನದ ಸಮಾಧಿ
ಒಳಗಿನಿಂದ
ಎದ್ದು ಬಾರದಿರಲಿ
ಭೂತಗಳು
*****