ದೇಶಪ್ರೇಮ –
ಕಾಗದದ ಮೇಲೆ ಚಿತ್ರ
ಕೃತಕ ಧ್ವನಿಯ ಹಾಡು
ಅಂಗಾಂಗ ಅಲುಗಾಡಿಸುವ
ನೃತ್ಯಗಳಾಗದೇ
ಧಮನಿ ಧಮನಿಗಳಲ್ಲಿ
ಹರಿವ ಉಸಿರಾಗಬೇಕಲ್ಲವೆ?
*****