ಬಾಳ ಸಂಗಾತಿ…
ಸೌಂದರ್ಯಸಾಗರದಿ
ತೇಲುವ ಪ್ರೀತಿಯ ಒಡತಿ…
ನೀನಾರು… ನಾನರಿಯೆ

ಕಣ್ಣು ತುಂಬಾ…
ಮನವೆಲ್ಲಾ ತುಂಬಿರುವಿ
ಮಿಂಚಿನ ಹಾಗೆ…
ಮುಸಕದಿ ಮಾಯೆಯಾಗಿ
ನಿನ್ನಾ… ಪ್ರತಿಬಿಂಬ
ಬಾ-ಎನ್ನುತಿರುಲು

ತನು-ಮನ ಹಾತೊರೆದು
ನಿನ್ನಾಲಿಂಗನದ ಸಾಮಿಪ್ಯ
ಕಲ್ಪನೆಯ ನೂರೆಂಟು ತಾವರೆಯಾಗಿ
ಅಂತರಾಳದಿ ಬಂದು ಅರಳುವಿ.

***