ಚಿತ್ತ ಚಂಚಲ
ಆತ್ಮ ಅವಿಚಲ
ಚಿತ್ತ ಆತ್ಮದ ನಡುವೆ ಎಂತಹ ಕೊರಕಲು !
ಚಿತ್ತ ಪಳಗಿಸು
ಆತ್ಮ ಬೆಳಗಿಸು
ಎರಡಬೆರಸುವುದೊಲವುನಲಿವಿನ ಸೇತುವು.
ಅರಿವು ಅರಿದೇ ?
ತಿಳಿವು ಹಿರಿದೇ ?
ಅರಿವು ತಿಳಿವಿನ ಇರವು ಮಾತ್ರವೆ ಅರಿದದು.
ಬಾಳ ಬನದಲಿ
ಒಂದು ಚಣದಲಿ
ಅಮೃತ ಉಂಡೆಯ? ಅದುವೆ ಸಿದ್ದಿಯ ಸೆರಗದು.
*****
ಕನ್ನಡ ನಲ್ಬರಹ ತಾಣ
ಚಿತ್ತ ಚಂಚಲ
ಆತ್ಮ ಅವಿಚಲ
ಚಿತ್ತ ಆತ್ಮದ ನಡುವೆ ಎಂತಹ ಕೊರಕಲು !
ಚಿತ್ತ ಪಳಗಿಸು
ಆತ್ಮ ಬೆಳಗಿಸು
ಎರಡಬೆರಸುವುದೊಲವುನಲಿವಿನ ಸೇತುವು.
ಅರಿವು ಅರಿದೇ ?
ತಿಳಿವು ಹಿರಿದೇ ?
ಅರಿವು ತಿಳಿವಿನ ಇರವು ಮಾತ್ರವೆ ಅರಿದದು.
ಬಾಳ ಬನದಲಿ
ಒಂದು ಚಣದಲಿ
ಅಮೃತ ಉಂಡೆಯ? ಅದುವೆ ಸಿದ್ದಿಯ ಸೆರಗದು.
*****