Home / ಕವನ / ಕವಿತೆ / ಅಮರ ಲೀಲೆ

ಅಮರ ಲೀಲೆ

೧
ಆಕಾಶ ಕುಸುಮವನ್ನಭಿವರ್ಣಿಸುವ ಕಾವ್ಯ
ವಿದ್ದೇನು ಸಾರ್ಥಕ್ಯ? ಕುರುಡಗಣ್ಣು!
ಸಾಕಾರ ದೇವನಿಗೆ ನೈವೇದ್ಯವೇ ಶೂನ್ಯ
ಉದ್ಧಾರ ವೇನಿದಕೆ? ಘೋರ ಹುಣ್ಣು!

೨
ಹಣವಂತ ಮಾನವನ ಹೆಣಗೈದರೂ ತೃಪ್ತಿ
ಇಲ್ಲೆಂದು ಕುದಿಕುದಿದು ಲಾಭಕಾಗಿ;
ಒಣ ರೊಟ್ಟಿ ಸಿಕ್ಕದೊಲು ಗೈದು ರಕ್ತವ ಹೀರಿ
ಕೊಲ್ಲುವನು ಕೂಲಿಯನು ಸ್ವಾರ್ಥಿಯಾಗಿ

೩
ಹೊಟ್ಟೆಯನು ನೆನೆದಾಗ ಬೆಟ್ಟ ನಿಲುವುದು ಮುಂದೆ
ಬಟ್ಟೆಯುಂಟೇ ಬಟ್ಟೆ ಇಲ್ಲದರಿಗೆ?
ಸಿಟ್ಟು ರಟ್ಟೆಯೊಳಿಲ್ಲ; ಮೈ ಮೂಳೆ ಗೂಡಮಮ!
ಎಷ್ಟು ದಿನವೀ ಮೋಸ ಕಾರ್ಮಿಕರಿಗೆ?

೪
ಗಗನ ಮಧ್ಯದ ಗುಹೆಯೊಳಾರುಂಟು ಗೊತ್ತುಂಟೆ?
ನೋಡ ಬಯಸುವರೊಮ್ಮೆ ನೋಡಿ ಜೋಕೆ!
ಮುಗಿದೀತು ಇಹಪರದ ಕತೆಯೆ ಬಲು ಎಚ್ಚರಿಕೆ
ಗುಡುಗು ಮೋಡದ ಸಿಡಿಲು ಕಾಣಬೇಕೆ?

೫
ವಿಷಮತೆಯ ವಿಷವದೋ ಹೊನಲಾಗಿ ಹರಿಯುತಿದೆ
ಜೀವ ಕೋಟಿಯ ಕೊಂದು ಮುಂದೆ ಸಾಗಿ
ಕಸಕೆ ಕಸವರವೆಂದು ಬಾಯ್ಬಿಟ್ಟು ಚೀರುತಿದೆ
ಸಾವು ಕಾದಿದ್ದರತಿಯಾಶೆಯಾಗಿ

೬
ಧನದ ಧರ್ಮವು ಕೂರ ಬಲು ಘೋರವಾಗುತಿದೆ
ಜನವೆಲ್ಲ ಕಾಲ ಹುಡಿ ಉಸಿರಿದ್ದರೂ
ಘನವು ಕಿರಿದಾಗದಿರೆ ಬಾಳು ಬರಡಾಗಲಿದೆ
ಕನಸು ಮನಸಿನ ಮಂತ್ರ ಮಿಡಿದಿದ್ದರೂ

೭
ತೇಜಸ್ಸು ತುಂಬೋಣ ಕಾವ್ಯ ವೀಣೆಯ ಮಿಡಿದು
‘ಲೇಖನಿಯು ಕೂರಸಿ’ ಯಿದೆಂದು ತೋರಿ
ಓಜಸ್ಸು ನಮಗೆಲ್ಲ ಧೀ ಶಕ್ತಿ ನೀಡಲದು
ನಾಕವನೆ ನಿರ್ಮಿಸುವ ಹಾಡಿ ಹಾರಿ

೮
ಜೀವಂತ ಸಾಮ್ರಾಜ್ಯ ಮೈವೆತ್ತು ನಿಂತಿರಲಿ
ಸುಖ ಜೀವ ನಾಡಿಯದು ಶಾಂತಿಕಣ್ಣು!
ಭಾವನೆಯ ಭಾಗ್ಯ ಸುರನಾರಿ ಕೆಲಸಾರಿರಲಿ
ಮುಖವೆ ಸ್ವರ್ಲೋಕವಾಗಿರುವ ಹಣ್ಣು.

೯
ದಿನದ ಮೊಳೆತದ ಮುನ್ನ ಕಾರಿರುಳು ಕೊರೆದಿತ್ತು
ಕಣ್ಸನ್ನೆ ಕೈಸನ್ನೆ ಕಾಣದಂತೆ!
ಮನಕೆ ಮೋಡಿಯ ಮಾಡಿ ತನ್ನ ತಾ ಮರೆಸಿತ್ತು
ಶ್ರಮಜೀವಿ ಬಲೆಯಿದನ್ನರಿಯದಂತೆ-!

೧೦
ಬದುಕುವಾಸೆಯು ಯಾರಿಗಿಲ್ಲವೋ ನಿಜ ಹೇಳಿ
ಎಲ್ಲ ಹೋರಾಟವೂ ಬದುಕಿಗಾಗಿ
ಮುದದಿಂದ ಬಾಳಗೊಡಿ ಬಡವವನು ಬಲ್ಲಿದರೆ
ಇಲ್ಲದಿರೆ ದುಡಿವನವ ಕ್ರಾಂತಿಗಾಗಿ

೧೧
ನೆತ್ತರೋಕುಳಿಯಾಡಿ ತನ್ನಗೋರಿಯ ಕಟ್ಟಿ
ಕೀರ್ತಿ ಗುಡಿ ನಿಲ್ಲಿಸುವನದರ ಮೇಲೆ
ಸುತ್ತಲೂ ಸಾಮ್ರಾಜ್ಯ ಚಾಚುವೊಲು ಮನಮುಟ್ಟಿ
ದುಡಿವ ಜೀವಿಯ ದುಡಿತ “ಅಮರ ಲೀಲೆ”
*****
ಬೆಂಗಳೂರು : ೧೯೪೪

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...