Home / ಕವನ / ಕವಿತೆ / ಹೊತ್ತು ಮುಳುಗಿದ ನಂತರ….

ಹೊತ್ತು ಮುಳುಗಿದ ನಂತರ….

ಹೊತ್ತು ಮುಳುಗಿತು ಕತ್ತಲಾಯಿತು
ಚಿತ್ತ ಬಾಗಿಲಿಗೋಡಿತು;
ಒಂದೆ ದಿನದಲಿ ಬರುವೆನೆಂದರು
ಮೂರು ದಿನ ಕಳೆದಾಯಿತು.
ಎದೆಯ ಹಂಬಲ ತುಂಬಿ ನಿಂತಿದೆ
ನಿಮಿಷ ನಿಮಿಷವನೆಣಿಸಿದೆ
ಕರುಳು ಕರುಳಿಗು ಶಾಂತಿ ಹೇಳಿದೆ
ಜೀವ ಕಳವಳಗೊಂಡಿದೆ
ಅವರ ಪ್ರೀತಿಯ ಹೂವು ಹೆರಳಲಿ
ಮಧುರ ಸೌರಭ ಸೂಸಿದೆ
ಇಂದು ಬರವಿಗೆ ತಾನು ಕೂಡಾ
ಬಾಡಿ ಹೋಗುವೆನೆಂದಿದೆ.
ಮೊದಲ ಇರುಳಲಿ ಬೆರಳು ಬರಳಲಿ
ಕೊರಳು ಕೊರಳಲಿ ಸೇರಿಸಿ
ಕುರುಳು ಹೊರಳಿಸಿ ತೋಳ ತಳುಕಿಸಿ
ದೇಹ ದೇಹದಿ ಕರಗಿಸಿ
ಜೀವ ಕಣ ಕಣದಲ್ಲಿ ಸ್ವರ್ಗದ
ಸುಖದ ಹೊಳೆಯನು ಹರಿಯಿಸಿ
ಹಾಲು ಹಣ್ಣಿನ ಹೂವು ಜೇನಿನ
ಸಾಮರಸ್ಯದಿ ಬೆರೆಯಿಸಿ
ನನ್ನ ಬಾಳಿನ ಪೂರ್ಣ ಚಂದ್ರಮ
ಬೆಳಗಿ ಬಂದಿಹ ಸಂಭ್ರಮ
ಬೇಡಿ ಬಯಸಿದ ಬಯಕೆ ಕೂಡಿತು
ಹರಿದು ಹೋಯಿತು ವಿಭ್ರಮ.
ಬೆಳಕು ಬೆಳಕಿಗೆ ಮುತ್ತು ನೀಡಿತು
ಜೀವ ಹೊಸ ಹೊಸದಾಯಿತು
ಹೊಳೆವ ಲೀಲಾಲೋಲ ಕಣ್ಣಲಿ
ನನ್ನ ಮುಖವೂ ಅರಳಿತು.
ಮಾತು ಮಾತಿಗೆ ಎನಿತು ಹೊಲಿಕೆ
ಕಡಲ ಒಡಲಿನ ರತ್ನಕೆ
ಸಂಜೆ ಸಮಯದಿ ಇಣಿಕಿ ಮಿಣುಕುವ
ಮುಗಿಲಿನಕ್ಷಿಗೆ-ಚಿಕ್ಕೆಗೆ
ಗಂಗೆ ಗೌರಿಯೊ ತುಂಗ ಭದ್ರೆಯೊ
ಸರ್ವಮಂಗಳೆ ಪೂರ್ಣಿಮಾ;
ಮೂಡಣದ ಉಷೆ ಬಂದು ಕುಣಿವಳೊ
ಕಾವ್ಯ ಕನ್ನಿಕೆ ಕಲ್ಪನಾ.
ಅಂದಿಗೂ ಮೊದಲಾಗಿ ಇಂದಿಗು
ಏಸು ದಿನಗಳ ನೆನೆಯಲಿ
ಕನಸಿನಲಿ ಕಂಡಂತೆ ಆಗಿದೆ
ಬಂದು ರಕ್ಷೆಯ ನೀಡಲಿ
ತಂಗಿ ಇಂದಿರೆ ತಮ್ಮ ಮೋಹನ
ಹೊಸತಿಲದ ಬಳಿ ಬಂದು ನಿಲ್ಲಲೆ
ಮರೆತು ನಿಂದಿರೆ ಮರೆಯಲಿ
ಬರುವ ದಾರಿಯ ಕಾಯಲೆ?
ಇರುಳು ಮರಳಿತು ಮತ್ತೆ ಹೊರಳಿತು
ಆದರೂನೂ ವಿಫಲವೆ!
ಹಗಲು ಬಂದಿತು ಮತ್ತೆ ಸಂದಿತು
ಬಾರದಿರುವರೆ ದೈವವೆ!
ಹತ್ತು ಹೊಡೆಯಿತು ಚಿತ್ತ ಕದಡಿತು
ಯಾವ ಆಶೆಯ ಹಿಡಿಯಲಿ
ಸ್ವರ್ಗವೂ ಹಾಳಾಗಿ ಹೋಗಲಿ
ಬಂದು ಎದುರಿಗೆ ನಿಲ್ಲಲಿ!
*****
Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...