Home / ಕವನ / ಕವಿತೆ / ಸುಳಿಗಾಳಿಯೊಡನೆ

ಸುಳಿಗಾಳಿಯೊಡನೆ

ಹನ್ನೆರಡು ವರುಷಗಳು ಮೇಲೇಸೊ ದಿವಸಗಳು
ಭೂತಕಾಲದ ಗರ್ಭಗೋರಿಯಲ್ಲಿ;
ಉರುಳಿ ಹೋದರು ಕೂಡ ಮರಳಿ ಸುಳಿದಾಡಿಹವು
ನೊಂದ ಜೀವಿಯ ಮನದ ರಂಗದಲ್ಲಿ.
ಕವಿ ಶಿಸುವ ಬೆಳೆಸಿರುವ ಮೊಲೆಹಾಲನುಣಿಸಿರುವ
ವಿಜಯಪುರವೇ ನಿನ್ನ ಮರೆಯಲಾರೆ;
ನೂರಾರು ಮೈಲುಗಳ ಗಡಿಯಾಚೆ ನಿಂತರೂ
ಎದೆಯ ಹಂಬಲವನ್ನು ತೊರೆಯಲಾರೆ.
ಅರೆಬೀಳು ಕೋಟೆಗಳು ಆ ಹಾಳು ಗೋರಿಗಳು
ಕೂಗಿ ಕರೆದಿವೆ ಕವಿಯ, ಬಾರೋ ಎಂದು;
ತಮ್ಮ ಮೇಲೊಂದೊಂದು ಕಾವ್ಯಕೃತಿ ರಚಿಸೆಂದು
ಅಂಗಲಾಚಿವೆ ಕಣ್ಗೆ ನೀರ ತಂದು.
ದುಃಖದಲ್ಲಿ ಬಿಕ್ಕಿರುವ ನಗುನಗುತ ಬಾಳಿರುವ
ನಿಮ್ಮ ನೆರಳೇ ನನಗೆ ತೌರಾಗಿದೆ;
ಮರಣ ಶಯ್ಯೆಯ ಮೇಲೆ ಕೊನೆಯ ಉಸಿರೆಳೆಯದಿರಿ
ಕವಿಯ ಕರುಳೇ ಕರಗಿ ನೀರಾಗಿದೆ.
ನನ್ನ ಹೃದಯವ ನೋಡಿ ಕಾವ್ಯ ಕಲ್ಪನೆ ನೀಡಿ
ನಿಮ್ಮತನ ಸರ್ವಸ್ವದೌದಾರ್ಯಕೆ;
ಕಾವ್ಯ ಕೃತಿಯಲ್ಲೊಂದು ಸ್ಮೃತಿಯ ದೀಪಸ್ತಂಭ
ನಿಲ್ಲಿಸಿದರಾದಿನವೆ ಋಣ ತೀರಿತೆ?
ನಿತ್ಯ ನಿಲ್ದಾಣದಲಿ ಸಿಳ್ಳು ಹೊಡೆಯುವ ಗಾಡಿ
ಹೊತ್ತು ತರದಿಹುದಲ್ಲ ಕವಿಯನೊಮ್ಮೆ
ಎಂದು ಪ್ರತಿ ಉಸುರಿನಲಿ ಅಳಲ ಚೀತ್ಕಾರದಲಿ
ಎದೆಗೆಟ್ಟು ಕೂಗದಿರಿ-ಬರುವೆನೊಮ್ಮ.
ಹಗಲಿರಲಿ ಇರುಳಿರಲ್ಲಿ ಯಾವ ದಿನವೇ ಇರಲಿ
ತೇಲಿ ಬರುವೆನು ಮುಗಿಲ ತೇರನೇರಿ;
ಸುಳಿಗಾಳಿಯೊಡಗೂಡಿ ಸುತ್ತು ಸೌರಭ ಸೂಸಿ
ಬರುವೆ ಬೀದಿಯ ತುಂಬ ಬೆಳಕ ಬೀರಿ!
*****
Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...