ನಾ ಕಂಡ ಕವಿ ಹೃದಯಿ

ನಾ ಕಂಡ ಕವಿ ಹೃದಯಿ

ನಾನಿನ್ನು ಮರೆತ್ತಿಲ್ಲ. ೧೯೯೭ರಲ್ಲಿ ನಾನು ಹುಬ್ಬಳ್ಳಿಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ನರಕ ಅನುಭವಿಸಿದೆ. ಎಲ್ಲೆಲ್ಲೋ ಬರೀ ಲಾಬಿನೇ ನಡೆಸಿರುವಾಗ ನನ್ನಂಥವರ ಪಾಡು ಕೇಳುವವರಾರು?

ಇದೇ ಟೈಮಿನಲ್ಲಿ ನನ್ನ ಸಂಶೋಧನಾ ಪ್ರಬಂಧ “ಬಾಳಾ ಸಂತರು ಬಹಳ ಸಂತರು” ೬೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲು ಆಯ್ಕೆಯಾಯಿತು. ನನಗೆ ಭಲೇ ಖುಷಿಯೆನಿಸಿತು. ಪ್ರತಿಭೆಗೆ ಸಂದ ಗೌರವವೆಂದು ಭಾವಿಸಿದೆ. ಸಾಹಿತ್ಯ ಪರಿಷತ್ತಿನಲ್ಲಿ ಆಗ ಮಾನವಂತರಿದ್ದರು. ನಮ್ಮಂಥವರನ್ನು ಗುರ್ತಿಸುವ ಹೃದಯದವರಿದ್ದರು!

೬೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಗಳೂರಿನಲ್ಲಿ ಅದೂ ಗಡಿನಾಡಿನ ಕನ್ನಡ ಕುವರ ಕವಿ ಹೃದಯ ಸರಳ ಸಜ್ಜನ ಅಪ್ಪಟ ಮಾನವತಾವಾದಿ ಕಯ್ಯಾರ ಕಿಞಣ್ಣರೈ ಅವರು. ಅಯ್ಯಾ! ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು ಎಂದು ಸಂಭ್ರಮಿಸಿದೆ.

ನಾನಾಗ ಮಂಗಳೂರಿನಲ್ಲಿ ಕಯ್ಯಾರ ಕಿಞಣ್ಣ ರೈ ಅವರ ಬಳಿ ಎರಡು ದಿನ ಉಳಿದೆ. ನನ್ನ ಪ್ರಬಂಧವನ್ನು ಬಲು ಮೆಚ್ಚಿಕೊಂಡರು. ನನ್ನ ಮಾರ್ಗದರ್ಶನ ಗುರುಗಳಾದ ಡಾ. ಬಿ.ಕೆ. ಹಿರೇಮಠ ಅವರ ಬಗ್ಗೆ ಕೇಳಿ ತಿಳಿದುಕೊಂಡು ಬಲು ಸಂಭ್ರಮಿಸಿದ್ದರು! ಅಂಥಾ ಹೃದಯವಂತ ಕವಿಯಾಗಿದ್ದರು ಕೋಟಿಕೋಟಿಗೊಬ್ಬರಿದ್ದರು.

ಕಯ್ಯಾರ ಕಿಞಣ್ಣ ರೈವರು- ದಿನಾಂಕ ೦೮-೦೬-೧೯೧೫ರಂದು ಕೇರಳದ ಕಾಸರಗೋಡಿನ ಪೆರಡಾಲದಲ್ಲಿ ಜನಿಸಿದರು.

ತಂದೆ- ದುಗಪ್ಪ ರೈ

ತಾಯಿ- ದಯ್ಯಕೈ

ಎಂ.ಎ ಪದವೀಧರರಾಗಿದ್ದರು. ೩೦ ವರ್ಷಗಳ ಕಾಲ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು. ೧೬ ವರ್ಷಗಳ ಕಾಲ ಬದಿಯಡ್ಕ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿದ್ದರು. ಸಾಹಿತಿ, ಕೃಷಿಕ, ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಕ, ರಾಜಕಾರಣಿ… ಮಾನವತಾವಾದಿ ಹೀಗೆ ಬಹುಮುಖ ವ್ಯಕ್ತಿತ್ವದ ವ್ಯಕ್ತಿ ಶಕ್ತಿಯಾಗಿ ನನಗೆ ಕಂಡು ಬಂದರು. ಕನ್ನಡ, ಇಂಗ್ಲೀಷ್, ಸಂಸ್ಕೃತ, ತುಳು ಭಾಷೆಯಲ್ಲಿ ಪಾಂಡಿತ್ಯವಿತ್ತು.

ಅವರ ಶ್ರೀಮುಖ, ಶತಮಾನದ ಗಾನ, ಎನ್ನೆಪ್ಪೆ ತುಳುವಪ್ಪೆ, ಐಕ್ಯಗಾನ, ಪುನರ್ನವ, ಚೇತನ, ವಿರಾಗಿಣಿ (ನಾಟಕ) ೧೩ ಕವನ ಸಂಕಲನಗಳು, ೧೪ ಗದ್ಯ ಕೃತಿಗಳು. ದುಡಿತವೇ ನನ್ನ ದೇವರು (ಆತ್ಮಕಥೆ), ರಾಷ್ಟ್ರಕವಿ ಗೋವಿಂದ ಪೈ, ರತ್ನರಾಶಿ, ಪರಶುರಾಮ ಜೀವನ ಚರಿತ್ರೆಗಳು, ವ್ಯಾಕರಣ ಮತ್ತು ಪ್ರಬಂಧದ ೪ ಭಾಗಗಳು, ನವೋದಯ ಪಾಠ ಮಾಲೆಯ ೫ ಪುಸ್ತಕಗಳು… ಇವರ ಬಗ್ಗೆ ಪಿ‌ಎಚ್.ಡಿ ಮತ್ತು ಎಂಫಿಲ್ ಅಧ್ಯಯನ ಕೃತಿಗಳು ಅಲ್ಲದೆ ಹತ್ತಾರು ಅಭಿನಂದನ ಕೃತಿಗಳು ಹೊರಬಂದಿರುತ್ತವೆ.

ಶ್ರೀಯುತರಿಗೆ ಆರು ಗಂಡು ಮಕ್ಕಳು. ಎರಡು ಜನ ಹೆಣ್ಣು ಮಕ್ಕಳು.

ಪತ್ನಿ ಉಞಕ್ಕೆ…. ತುಂಬಾ ಕುಟುಂಬ ಅವರದು. ೧೯೪೧ ರಲ್ಲಿ ಮಹಾತ್ಮ ಗಾಂಧೀಜಿಯವರಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮಿಕಿದರು. ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ೧೯೬೯ ರಲ್ಲೇ ಶ್ರೇಷ್ಠ ಶಿಕ್ಷಕ ರಾಷ್ಟ್ರಪ್ರಶಸ್ತಿ ಪಡೆದಿದ್ದರು.
೧೯೭೧ ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ.

ಸ್ವಾತಂತ್ರ್ಯಯೋಧ ಪ್ರಶಸ್ತಿ
ಕನ್ನಡ ಕುಲಭೂಷಣ
ಕನ್ನಡ ಧೀರ
ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ

೧೯೯೭ ರಲ್ಲಿ ಮಂಗಳೂರಿನಲ್ಲಿ ಜರುಗಿದ ೬೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

೨೦೦೫ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್. ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಹೆಮ್ಮೆಯ ನಾಡೋಜ ಪ್ರಶಸ್ತಿ. ೨೦೧೪ರಲ್ಲಿ ಕರ್ನಾಟಕ ಸರ್ಕಾರದಿಂದ ಪಂಪ ಪ್ರಶಸ್ತಿ ಸಂದಿದೆ.
– ಹೀಗೆ ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಇಂಥವರ ಒಡನಾಡಿಯಾಗಿ ಎರಡು ದಿನ ಕಳೆದಿದ್ದು ನನಗೆ ಗೊತ್ತೇ ಆಗಲಿಲ್ಲ. ನಿಜವಾದ ಸಾಹಿತಿಗಳೆಂದರೆ ಹೀಗಿರುತ್ತಾರೆ. ನಮ್ಮಂಥವರು ಅವರಂತೇ ಸಾಧನೆ ಮಾಡಿಬಿಡಬೇಕೆನಿಸಿತು.

ನಿಜಕ್ಕೂ ಇವರು ಕಿರಿಯರಿಗೆ ನಮ್ಮಂಥವರಿಗೆ ಸ್ಪೂರ್ತಿದಾಯಕ ಚೈತನ್ಯದಾಯಕ. ಹಿರಿಯರೆಂದರೆ ಹೀಗಿರಬೇಕು. ನನಗವರು ಮಾದರಿ ಪ್ರತಿಮೆಯಾಗಿ ಕಂಡುಬಂದರು. ಮನಸ್ಸಿನಲ್ಲಿ ಆಳವಾಗಿ ಬೇರೂರಿದರು.

ಶ್ರೀಯುತರು ದಿನಾಂಕ ೦೯.೦೮.೨೦೧೫ರಂದು ಭಾನುವಾರ ಅಪರಾಹ್ನ ಹೊತ್ತು ೩.೩೦ರ ಸುಮಾರು ಬದಿಯಡ್ಕ ಸಮೀಪದ ಪೆರಡಾಲದಲ್ಲಿರುವ ಕವಿತಾ ಕುಟೀರದಲ್ಲಿ ಕೊನೆಯುಸಿರೆಳೆದರು. ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು.

ಶ್ರೀಯುತರ ನಿಧನದಿಂದ ಕನ್ನಡ ಸಾಹಿತ್ಯ ಬಡವಾಯಿತು. ಗಡಿನಾಡ ಸಮಸ್ಯೆ ತಬ್ಬಲಿಯಾಯಿತು. ಕಾಸರಗೋಡು ಕನ್ನಡ ನಾಡಿನೊಳಗೆ ವಿಲೀನವಾಗಬೇಕೆಂಬ ಇವರ ಹಕ್ಕೊತ್ತಾಯವು ಅವರೊಂದಿಗೆ ಸುಮಧುರ ನೆನಪಾಗಿ ನಮ್ಮಲ್ಲಿ ನಿಮ್ಮಲ್ಲಿ ಶಾಶ್ವತವಾಗಿ ಉಳಿದಿದೆ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಣಪತಿಯ ಸ್ತೋತ್ರ
Next post ತಾರನೆ ಶ್ರೀರಾಮ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…