ವಾಗ್ದೇವಿ – ೨೦

ವಾಗ್ದೇವಿ – ೨೦

ಇಪ್ಪತ್ತು ಔತಣದ ದಿನವು ಉದಯವಾಯಿತು. ಮಠಕ್ಕೆ ಭೋಜನಕ್ಕೆ ಅಭಿಮಂತ್ರಣ ಪಡೆದವರೆಬ್ಲರೂ ಶೀಘ್ರ ಸ್ನಾನ ಜಪಾನುಷ್ಟಾನವನ್ನು ತೀರಿಸಿ ಬಿಟ್ಟು ಹೆಚ್ಚು ಮೌಲ್ಯದ ಪಟ್ಟೆಮಡಿಗಳನ್ನು ಧರಿಸಿಕೊಂಡು ಕ್ಲಪ್ತ ಸಮ ಯಕ್ಕೆ ಮಠಕ್ಕೆ ತಲ್ಪಿದರು. ಅವರೆಲ್ಲರನ್ನೂ ನೋಡಿ ಚಂಚಲನೇತ್ರರು ಹರ್ಷಿ ತರಾದರು. ಭೀಮಾಚಾರ್ಯನು ವೆಂಕಟವತಿ ಆಚಾರ್ಯನ ಬೆನ್ನು ಬಿಡು ತ್ತಿದ್ದಿಲ್ಲ. ಅವರಿಬ್ಬರೂ ಏನೋ ವಿಶೇಷ ಪ್ರಮೇಯದಭಲ್ಲಿ ಸಂವಾದಿಸಿ ಕೊಂ ಡಿರುವ ಹಾಗೆ ತೋರುತ್ತಿತ್ತು. ಯಾವ ವಿಷಯದಲ್ಲಿ ಅವರಲ್ಲಿ ಅಂತರಂಗ ಸಂಭಾಷಣೆಯಾಗುತ್ತಿತ್ತೆಂಬ ಗುಟ್ಟು ಯಾರಿಗೂ ಗೊತ್ತಾಗಲಿಲ್ಲ. ಭೀಮಾ ಚಾರ್ಯನು ವೇದವ್ಯಾಸ ಉಪಾಧ್ಯನ ಮುಖ್ಯ ಸ್ನೇಹಿತನಾಗಿ ಅವನ ಹಟ ಸಾಧನೆಯು ಜಯವಾಗುವಂತೆ ಪ್ರಯತ್ನಮಾಡುವವನೆಂಬ ವದಂತಿಯು ಕುಮುದಪುರದಲ್ಲಿ ಸಿದ್ಧವಾಗಿರುತ್ತ ಚಂಚಲನೇತ್ರರ ಮಠದ ಮೇಲಣಭಿ ಮಾನಿಯಾಗಿ ತೋರುವ “ಈ ಹೊಸವಪರಿಯೇನಪ್ಪ” ಎಂದು ಕೆಲವರು ತಮ್ಮೊಳಗೆ ಕುಸುಕುಟ್ಟಿದರು. ಆ ಹೊತ್ತು ನರಸಿಂಹಜಯಂತಿಯ ಉತ್ಸವ ನೋಡಲಿಕ್ಕೂ ಮಠದಲ್ಲಿ ಸಿಕ್ಕುವ ರುಚಿಕರವಾದ ಭೋಜನದ ಸುಖವನ್ನನು ಭವಿಸುವದಕ್ಕೂ ನೆರೆ ಊರುಗಳಿಂದಲೂ ಬ್ರಾಹ್ಮಣರನೇಕರು ಮಡದಿ ಮಕ್ಕ ಳೊಡಗೂಡಿ ಬಂದಿದ್ದರು. ತಮ್ಮಣ್ಣ ಭಟ್ಟನೂ ಆಬಾಚಾರ್ಯನೂ ಸೊಂಟ ಕಟ್ಟಿ ತರಾತುರಿಯಿಂದ ಮಠದಲ್ಲಿ ಅತ್ತಿತ್ತ ಹೋಗುತ್ತ ಬರುತ್ತ ಇರುವದ ರಿಂದ ಮಠದ ಕಾರ್ಯಗಳಲ್ಲಿ ಅವರು ಹೆಚ್ಚು ಆಸಕ್ತಿಯುಳ್ಳ ರೆಂಬ ಹಾಗೆ ಬೇರೆಯವರಿಗೆ ತೋರುತಿತ್ತು.

ವಾಗ್ದೇವಿಯು ಚಂಚಲನೇತ್ರರ ವಶವಾದಂದಿನಿಂದ ಅವಳ ಆಭರಣ ಗಳು ದಿನಂಪ್ರತಿ ಅಧಿಕವಾಗುತ್ತಾ ಬಂದವು. ಅವುಗಳೆಲ್ಲವನ್ನು ಅವಳು ಧರಿಸಿಬಿಟ್ಟರೆ ಅವಳ ಸೌಂದರ್ಯಕ್ಕೆ ರತೀ ಜೀವಿಯು ಸ್ವಲ್ಪನಾಚುವಳೆನ್ನ ಬಹುದು. ಸಾಮಾನ್ಯ ಪುರುಷನು ಆ ಶ್ರೀರತ್ನವನ್ತು ಕಣ್ಣೆತ್ತಿ ನೋಡಲಿಕ್ಕೆ ಧೈರ್ಯಪಡುವದು ಅಪರೂಪ. ವಾಗ್ದೇವಿ ಆದಿನ ನಿತ್ಯ ಮನೆಯಲ್ಲಿ ಧರಿಸಿ ಕೊಳ್ಳುವ ಅತಿ ಸಾಮಾನ್ಯ ಅಲಂಕಾರಯುಕ್ತಳಾಗಿ ನಿರ್ಮಲವಾದ ಒಂದು ಸಾಧಾರಣ ಉಡಿಗೆಯಲ್ಲಿ ಗೆಳತಿಯರ ಮೇಳದಲ್ಲಿ ಒತ್ತಟ್ಟು ಕೂತುಕೊಂಡಿ ದ್ದಳು. ಬಾಲಮುಕುಂದಾಚಾರ್ಯನು ಸುಮ್ಮಗೆ ಅತ್ತಿತ್ತ ನೋಡಿಕೊಂಡಿ ರುವ ವೇಳೆಯಲ್ಲಿ ಅವನ ದೃಷ್ಟಿಯು ಈ ರೂಪವತಿಯ ಮೇಲೆ ಬಿತ್ತು. ಅವ ರಿಬ್ಬರಲ್ಲಿ ಪರಸ್ಪರ ಮೋಹಭಾವಗಳ ಐಕ್ಯತೆ ಒಡನೆ ಉಂಟಾಯಿತು. ಅವಳಷ್ಟು ಉತ್ಕೃಷ್ಟವಾದ ಭಾಸುರಾಂಗನೆಯು ಅಂದು ಅಲ್ಲಿ ನೆರೆದ ಹೆಂಗಸರ ಸಮೂಹದಲ್ಲಿ ಇನ್ನೊಬ್ಬಳು ಅವನ ಕಣ್ಣಿಗೆ ಬೀಳಲಿಲ್ಲವಾದುದರಿಂದ ವಾಗ್ದೇವಿ ಇವಳೇ ಎಂದು ಅವನ ಮನಸ್ಸಿಗೆ ಮಂದಟ್ಟಾಯಿತು. ವಿಶೇಷ ಆಭರಣ ವೇನೂ ಅವಳು ಧರಿಸಿಕೊಳ್ಳದೆ ಇದ್ದುದು ತಾನೊಬ್ಬಳು ಸಾಮಾನ್ಯ ಸ್ತ್ರೀ ಯೆಂಬ ಗ್ರಹಿಕೆ ಪರಊರ ಜನರಲ್ಲಿ ಜನಿಸುವ ಉದ್ದಿ ಶ್ಯವಾಗಿರಬೇಕೆಂದು ಅವನ ಮನಸ್ಸಿಗೆ ತೋಚಿತು. ತನ್ನನ್ನು ವರಿಸಿಕೊಂಡ ಯತಿಯಮೇಲೆ ವೇದವ್ಯಾಸ ಉಪಾಧ್ಯನು ಮಾಡಿದ ಮನವಿಯನ್ನು ಕುರಿತು ವಿಚಾರಣೆ ನಡಿಸುವುದಕ್ಕೋಸ್ಟರ ನಾಲ್ಕು ಮಠಾಧಿಪತಿಗಳು ಕಳುಹಿಸಿಕೊಟ್ಟ ಪ್ರತಿನಿಧಿ ಗಳಲ್ಲಿ ಇವನೊಬ್ಬನೆಂಬುದು, ಅವಳಿಗೆ ಗೊತ್ತಿತ್ತು. ಈ ವಿಟನನ್ನ ತಾನು ಪ್ರೇಮಪಾರದಿಂದ ಬಂಧಿಸದೆ ಹೋದರೆ ಸ್ವಾಮಿಕಾರ್ಯವು ಕೆಟ್ಟುಹೋಗು ವುದು, ತನ್ನ ಬಾಳ್ವೆಯು ವ್ಯರ್ಥವಾಗುವುದು. ದೈವವಶಾತ್‌ ಈ ದಿನ ತಮ್ಮಿಬ್ಬರ ಪರಸ್ಸರ ದೃಷ್ಟಿಸಂದರ್ಶನದಿಂದ ಮನಸ್ಸಿಗೆ ಉಂಟಾದ ಆನಂದ ವನ್ನು ಸಹಜವಾದ ರೀತಿಯಲ್ಲಿ ಅನುಭವಿಸುವುದೇ ಲೇಸು. ಆ ಬಳಿಕ ವೇದ ವ್ಯಾಸ ಉಪಾಧ್ಯನು ಘಟ್ಟಹತ್ತಲಂದು ವಾಗ್ದೇವಿಯು ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತ ಹಸನ್ಮುಖಿಯಾದಳು. ಬಾಲಮುಕುಂದನೂ ವಾಗ್ದೇ ವಿಯೂ ನೋಡುವವರಿಗೆ ಸಂಶಯ ಉಂಟಾಗದಂತೆ ಕಣ್ಗಳ ಭಾಷೆಯಿಂದ ತಮ್ಮ ಮನಸ್ಸಿನ ಅಂತಸ್ಥ ಒಬ್ಬರಿಗೊಬ್ಬರು ಅವಗತಮಾಡಿದರು. ಒಂದೆರಡು ಸಲ ಮಾತ್ರ ಭೀಮಾಚಾರ್ಯನು ಇವರಿಬ್ಬರ ನೇತ್ರ ಸಂಧಾನ ವನ್ನು ಹೌದೋ ಅಲ್ಲವೋ ಕಂಡನೆನ್ನಬೇಕು. ಕೆಪ್ಪಮಾಣಿಗೆ ಮಾತ್ರ ಈ ಗುಟ್ಟು ಪೂರ್ಣವಾಗಿ ಸಿಕ್ಕಿತು ಬೇರೆ ಯಾರ ಕಣ್ಣಿಗೂ ಈ ಮಾಟ ಗೋಚರ ವಾಗಲಿಲ್ಲ.

ಸ್ವಾಮಿಗಳು ಪೂಜೆಗೆ ಪ್ರಾರಂಭಮಾಡಿದರು. ಜನರೆಲ್ಲ ದೇವರ ಮುಂ ಭಾಗದಲ್ಲಿ ಸಾಲಾಗಿ ನಿಂತುಕೊಂಡು ಮಂಗಳಾರತಿಯನ್ನು ನೋಡುವದ ರಲ್ಲಿ ಇದ್ದರು. ಪೂಜೆ ಅಂತ್ಯವಾದ ಮೇಲೆ ಊಟಕ್ಕೆ ಎಲೆಹಾಕಿತು. ಪಂಚ ಮಠದ ಪಾರುಪತ್ಯಗಾರರಿಗೂ ಭೀಮಾಚಾರ್ಯರಿಗೂ ಶ್ರೀಪಾದಂಗಳವರ ಪಕ್ಕದಲ್ಲಿ ಮರ್ಯಾದೆಯ ಎಲೆ ಕೊಡೋಣಾಯಿತು. ಮೃಷ್ಠಾನ್ನಭೋಜನ ವಾದ ತರುವಾಯ ನಾಲ್ಕು ಮಂದಿ ಪಾರುಪತ್ಯಗಾರರಿಗೂ ಸಂತುಷ್ಟಿಯಾ ಗುವ ಹಾಗೆ ಉಡುಗೊರೆ ಆಯಿತು. ತಾಂಬೂಲಾದಿಗಳಿಂದ ಅವರನ್ನು ತೃಪ್ತಿಸಿ ಆದ ಮೇಲೆ– “ವೇದವ್ಯಾಸ ಉಪಾಧ್ಯನ ಮನವಿಯ ಕುರಿತು ವಿಮೋಚನೆ ನಡಿಯುವದಕ್ಕೆ ದಿನ ನೇಮಕವಾಯಿತೇ?’ ಎಂದು ಚಂಚಲನೇತ್ರರು ಪ್ರಶ್ನ ಮಾಡಿದರು. ಶ್ರೀಪಾದಂಗಳವರ ನಿರೂಪ ಪಡಕೊಂಡು ದಿನ ನೇಮಿಸ ಬೇಕಾಗಿರುವದರಿಂದ ಇದುವರಿಗೂ ಛಾನಸವಾಯಿತಂದು ಬಾಲಮುಕುಂ ದಾಚಾರ್ಯನು ಉತ್ತರಕೊಟ್ಟನು. ತನ್ನ ಆಜ್ಞೆಯ ಅಗತ್ಯವೇನದೆ? ಇಷ್ಟ ವಿದ್ಧ ರೀತಿಯಲ್ಲಿ ವಿಚಾರಣೆ ಮಾಡೋಣವೇ ಕರ್ತವ್ಯವೆಂದು ಚಂಚಲನೇತ್ರ ಕೆಂದರು ವಿಚಾರಣೆ ತೊಡಗುವ ದಿನ ತನ್ನ ಕಡೆಯಿಂದ ಯಾರಾದರೂ ಕಾದು ಇರುವ ಅಗತ್ಯವದೆ ಎಂದು ಯತಿಗಳು ಹೇಳಿದರು. ಅಗತ್ಯವಾಗಿ ಇರಬೇಕೆಂದು ಬಾಲಮುಕುಂದಾಚಾರ್ಯನು ಅರಿಕೆ ಮಾಡಿಕೊಂಡನು ಅಂದಿನಿಂದ ನಾಲ್ಕನೇ ದಿನ ಸೋಮವಾರ ಸಭೆಯ ಊಳಿಗ ಉಪಕ್ರಮಿಸು ವದಕ್ಕೆ ನಿರ್ಣಯಮಾಡಿ ಪಾರುಪತ್ಯಗಾರರು ಯತಿಗಳ ಅಪ್ಪಣೆಯನ್ನು ಪಡ ಕೊಂದು ಬಿಡಾರಕ್ಕೆ ನಡೆದರು. ,

ಭೀಮಾಚಾರ್ಯನು ಬೇಕೆಂತ ಪಾರುಪತ್ಯಗಾರರ ಕೂಟದಿಂದ ತಪ್ಪಿಸಿ ಕೊಂಡು ವಾಗ್ದೇವಿಯ ಬಿಡಾರದ ಕಡೆಗೆ ಅಕಸ್ಮಾತ್ತಾಗಿ ಬರುವಾಗ ಸ್ವಲ್ಪ ದೂರದಿಂದ ಅವನನ್ನು ನೋಡಿ ಭಾಗೀರಥಿಯು— “ಆಚಾರ್ಯರೇ! ಇಲ್ಲಿ ವರೆಗೆ ದಯಮಾಡಿ ಬಡವರಾದ ನನ್ಮು ಮೇಲೆ ಕನಿಕರವಿಟ್ಟು ಸಣ್ಣದೊಂದು ತಾಂಬೂಲ ಸೇವೆಯನ್ನು ಸ್ವೀಕರಿಸಿರಿ” ಎಂದು ಅಪೇಕ್ಷಿಸಿದಳು. ಇದೊಂದು ಶುಭಕಾಲವೆಂಬ ಗ್ರಹಿಕೆಯಿಂದ ವಾಗ್ದೇವಿಯು ಭೀಮಾಚಾರ್ಯನ ಪಾದ ಗಳಿಗೆ ಬಿದ್ದು ಕೈ ಜೋಡಿಸಿ ನಿಂತು ಕೊಂಡಳು. ಭೀಮಾಚಾರ್ಯಗೆ ಸಂಹ ರ್ಷನಾಯಿತು ಬಾರೆಂದು ಅವಳಿಗೆ ಸಮ್ಮುಖದಲ್ಲಿ ಕೂಡ್ರಿಸಿಕೊಂಡನು. ತರು ವಾಯ ಸ್ವತೇವ ಸಂಭಾಷಣೆಗೆ ಆರಂಭವಾಯಿತು. ಅದನ್ನು ಮುಂದೆ ವಿವರ ಸಿಯದೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೂಪಾಂತರ
Next post ಅದು ಸಮಯ

ಸಣ್ಣ ಕತೆ

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

 • ಬೆಟ್ಟಿ

  ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…