ಭೂತಾ ಬಂದಾವು ನೋಡಿರೇ

ಭೂತಾ ಬಂದಾವು ನೋಡಿರೇ ಮನಶಾರ
ಕೂತಾ ತಿಂದಾವು ನೋಡಿರೇ ||ಪಲ್ಲ||

ಏಳು ಕೊಳ್ಳದ ಭೂತ ಗಾಳ ಕಣ್ಣಿಯ ಭೂತ
ರಾಳ ಕಣ್ಣಿನ ಭೂತ ಬಂದಾವೇ
ಕರಿಯ ಕಾರಿನ ಭೂತ ಬಿಳಿಯ ಕಾರಿನ ಭೂತ
ಕಂಠ ಪಟ್ಟಿಯ ಭೂತ ಬಂದಾವೇ ||೧||

ಹುಬ್ಬಳ್ಳಿ ಹೆಬ್ಬಳ್ಳಿ ಕಬ್ಬಳ್ಳಿ ಮುಳಗಳ್ಳಿ
ಡಬಗಳ್ಳಿ ಡೊಂಭೂತ ಬಂದಾವೇ
ಗುಳುಗಿ ಅಂಗಡಿ ಭೂತ ಎಲುಬು ಕೀಲಿನ ಭೂತ
ಸಾಯೋರ ಅರ್ಜಂಟು ತಿಂದಾವೇ ||೨||

ಹೊಟ್ಟಿ ಹೆಚ್ಚುವ ಭೂತ ಕಣ್ಣು ಕೀಳುವ ಭೂತ
ಕುಂಡಿ ಕೊಯ್ಯುವ ಭೂತ ಬಂದಾವೆ
ಹೆಣದಿಂದ ನೊಣದಿಂದ ಸೆಗಣಿಯ ಕುಣಿಯಿಂದ
ರೊಕ್ಕಂತ ನಾಗಿ ಚಾಚಾವೇ ||೩||

ರುಂಡ ಕೊಯ್ಯುವ ಭೂತ ಚಂಡು ಹಾಕುವ ಭೂತ
ಬಾಣಂತಿ ಭ್ರೂಣವಾ ತಿಂದಾವೆ
ಸ್ಪೇಶಲ್ಲು ಲಿಸ್ಟೀನ ಲೇಟೆಸ್ಟು ಈ ಭೂತ
ಸ್ಪೇಶಲ್ಲು ಟೀಪಾರ್ಟಿ ಮಾಡ್ಯಾವೆ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಜೆಯ ಬಯಕೆ
Next post ನೋಡದ ಜಾಗ

ಸಣ್ಣ ಕತೆ