ಮಹಾತ್ಮ ಗಾಂಧೀಜಿಯವರು ಆಡಿನ ಹಾಲನ್ನು ಕುಡಿಯುತ್ತ ಆದರ್ಶವಾಗಿ ಬಾಳಿದ ಚರಿತ್ರೆಯನ್ನು ಓದಲಾಗಿದೆ. ಆಡಿನ ಹಾಲಿನಲ್ಲಿರುವ ಅನೇಕ ಮಹಾತ್ಮೆಗಳು ಆರೋಗ್ಯಕ್ಕೆ ಪುಷ್ಟಿದಾಯಕವೆಂದೇ ಮಹಾತ್ಮರು ಬಳಸಿದ್ದು ಸತ್ಯದ ಸಂಗತಿ. ಈಗ ಪ್ರಸ್ತುತ ಆಡಿನ ಹಾಲಿಗೆ ನೇರವಾಗಿ ಬರುವುದಾದರೆ ಈ ಹಾಲಿನಲ್ಲಿ ಒಂದು ವಿಶೇಷವಾದ ಪ್ರೋಟಿನ್ ಇದೆ. ಇದು ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳನ್ನು ತಡೆಯುತ್ತದೆ. ಆಡಿನ ಹಾಲಿನಲ್ಲಿ ‘ಲ್ಯಕ್ಟೋಪೆರಾಕಿಸಡೇಜ’ ನ್ನೂ ಬ್ಯಾಕ್ಟೀರಿಯಾ ಕಾರಣದಿಂದ ಉಂಟಾಗುವ ರೋಗಗಳಾದ ಹೈಜಾ, ಟೈಪಾಯಿಡಾ, ನಿಮೋನಿಯಾ ಹೈಸ್ಟ್ರೋ, ಅತಿಸಾರ ಮತ್ತು ಪುಡ್ ಪ್ಯಾ ನಿಂಗಿನ ವಿರುದ್ಧ ಹೋರಾಡುವ ಪ್ರಭಾವಶಾಲಿ ಆಸ್ತ್ರವೆಂದು ಸಂಶೋಧಕರು ಹೇಳುತ್ತಾರೆ.

ಕೊಟ್ಟಾಯಂನಲ್ಲಿರುವ ಮಹಾತ್ಮಾಗಾಂಧಿ ವಿಶ್ವವಿದ್ಯಾನಿಲಯದ ಸಂಶೋಧಕರು ಆಡಿನ ಹಾಲಿನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕಂಡು ಹಿಡಿದಿದ್ದಾರೆ. ಯಾವ ದುರ್ಬಲ ರೋಗಿಗಳಿಗೆ ಔಷಧಿಗಳು ಪಚನವಾಗುವದಿಲ್ಲವೋ ಅಂಥವರ ಶರೀರದೊಳಕ್ಕೆ ಔಷಧಿಯನ್ನು ತಲುಪಿಸಲು ವೈದ್ಯರು ಈ ವಿಶೇಷ ಮತ್ತು ಉಪಯುಕ್ತ ಪದ್ಧತಿಯನ್ನು ಕಂಡು ಹಿಡಿದಿದ್ದಆರೆ. ವೈದ್ಯರು ಆಡಿನ ಮೇವಿನಲ್ಲಿ ಕೆಲವು ಗಿಡ ಮೂಲಕೆ ಭಸ್ಮಗಳನ್ನು ಬೆರೆಸಿ ತಿನ್ನಿಸುತ್ತಾರೆ. ಮೂರನೆ ದಿನದಿಂದ ಆಡಿನ ಹಾಲಿನಲ್ಲಿ ಆ ಔಷಧಿಯ ಗುಣಗಳು ಕಂಡು ಬರುತ್ತವೆ. ಔಷಧಿಯ ಗುಪ್ತ ಗಾಮಾನಿಶಕ್ತಿಯು ಆಡಿನ ಜೀವಸತ್ವದೊಂದಿಗೆ ಸಮೀಕರಣಗೊಂಡಿರುತ್ತದೆ. ಕಠಿಣಶಕ್ತಿಯನ್ನು ಸಹಿಸಲು ಸಾಧ್ಯವಾಗುತ್ತದೆ.

ಆಡಿನ ಹಾಲು ಕಂಡರೆ ಸಿಂಡರಿಸಿಕೊಳ್ಳುವ, ವಾಸನೆಯನ್ನೂ ಕಂಡು ದೂರ ಹೋಗುವ ಜನ ವೈಜ್ಞಾನಿಕವಾಗಿ ಈ ಸಂಶೋಧನೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ.
*****