ನೀವು ನೂರು ವರ್‍ಷ ಬಾಳಬೇಕೆನ್ನುವಿರಾ? ಹಾಘಾದರೆ, ನೂರು ವರ್‍ಷ ಬಾಳಬೇಕೆನುವವರಿಗೆ ನೂರು ವರ್‍ಷ ಬಾಳಿದ ಡಾ || ಎಂ ವಿಶ್ವೇಶ್ವರಯ್ಯ (೧೫-೦೯-೧೮೬೦-೧೯೬೦) ರವರ ಕೆಲ ಸಲಹೆಗಳಿವೆ. ಅವು:

೧) ನಿಮ್ಮ ಮನಸಾಕ್ಷಿಯನ್ನು ಪೀಡಿಸಿ ಕ್ಷಯಿಸುವಂಥ ಕೆಲಸಗಳನ್ನು ಮಾಡಬೇಡಿರಿ. ಕೊರೆಯುವ ಮನಸಾಕ್ಷಿಯ ಮೂಲಕವೇ ಬಹಳ ಜನರ ಆರೋಗ್ಯ ಕೆಟ್ಟು ಅವರು ವೃದ್ಧರಾಗುತ್ತಾರೆ.

೨) ಉಲ್ಲಾಸಚಿತ್ತರಾಗಿರುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ. ಉಲ್ಲಾಸವು ಮುದುಕನಲ್ಲಿರುವ ತಾರುಣ್ಯಕ್ಕೆ ಸಾಕ್ಷಿಯಾಗಿರುತ್ತದೆ.

೩) ಅಗತ್ಯವಿರುವಷ್ಟೇ ತಿನ್ನಿರಿ; ಪೌಷ್ಠಿಕ ಅನ್ನವನ್ನಲ್ಲದೆ ವಿಷಯುಕ್ತವಾದ ಮಿಠಾಯಿಗಳನ್ನು ಖಂಡಿತಾ ತಿನ್ನಬೇಡಿರಿ.

೪) ಪ್ರತಿ ೨೪ ತಾಸುಗಳಲ್ಲಿಯೂ ನಿಯಮಿತವಾಗಿ ಒಂದಿಷ್ಟು ತಾಸು ಎಂದು ನಿಶ್ಚಯಿಸಿಕೊಂಡು ನಿದ್ದೆ ಮಾಡಿರಿ. ನಾಳೆ ಮಾಡಿದರಾಯಿತು ಎಂದು ಇಂದಿನ ನಿದ್ದೆಯನ್ನು ಕೆಡಿಸಿಕೊಳ್ಳುವ ಚಟಕ್ಕೆ ತುತಾಗಬೇಡಿರಿ.

೪) ವಿನೋದದಲ್ಲಿ ಕಾಲ ಕಳೆಯಿರಿ. ವಿನೋದ ಎಂದರೆ ಕ್ರಿಕೆಟ್ ಅಥವಾ ಗೋಲ್ಫ್ (ಒಂದು ತರದ ಆಟ)ಗಳಲ್ಲ! ಏಕೆಂದರೆ ಈ ಆಟಗಳೂ ಕೂಡ ಒಂದು ಬಗೆಯ ಕೆಲಸವೇ ಅಗಿವೆ. ಇದಕ್ಕಿಂತಲೂ ಸರಳವಾದ ಮಕ್ಕಳೊಂದಿಗೆ ಚಿನ್ನಾಟವಾಡುವಂಥ ವಿನೋದಗಳಲ್ಲಿ ಕಾಲಕಳೆಯಿರಿ.

೬) ನಿಮ್ಮ ಉತ್ಪನ್ನದ ಮಿತಿಯಲ್ಲಿ ಜೀವನ ಸಾಗಿಸಿರಿ. ನಿಮ್ಮ ಸಂತೋಷ ಪ್ರಾಪ್ತಿಗೆ ಒಂದು ಧ್ಯೇಯ ಇತರರಿಗೆ ಲಾಭದಾಯಕವಾಗುವಂತಿರಲಿ.

೭) ದಿನಂಪ್ರತಿ ಇಂತಿಷ್ಟು ಸಮಯ ಎಂದು ನಿರ್‍ಧರಿಸಿ ತಪ್ಪದೇ ವ್ಯಾಯಾಮ ಮಾಡಿರಿ.

೮) ಬೀಡಿ, ಸಿಗರೇಟು, ಗಾಂಜಾ ಮಧ್ಯ ಇಂಥ ಯಾವ ಆರೋಗ್ಯ ವಿಘಾತಕ ಕೆಟ್ಟ ವ್ಯಸನಗಳನ್ನು ರೂಢಿಸಿಕೊಳ್ಳಬೇಡಿರಿ. ಇವುಗಳಿಂದ ಸಂಪೂರ್‍ಣವಾಘಿ ದೂರವಿರಿ.

ವಿಶ್ವೇಶ್ವರಯ್ಯನವರು ಮೇಲೆ ಹೇಳಿದ ೮ ಸುಸೂತ್ರಗಳನ್ನು ಚೆನ್ನಾಗಿ ನೆನಪಿಟ್ಟು ತಪ್ಪದೇ ಪಾಲಿಸಿರಿ. ಆಗ ನೀವು ದೀರ್ಘಾಯುಷಿಯಾಗಲು ಸಂದೇಹವೇ ಇಲ್ಲ.
*****