-೧-
ಭೂಮಿ ಪಲ್ಲವಿಸುತ್ತಿದೆ
ಅಡಿಮುಡಿಯೂ ಹಾಡು ಹರಿಯುತ್ತಿದೆ
ಬರುವ ಚಳಿಗಾಲಕೆ ಕಾದು ಕುಳಿತಿಹೆ
ಇಬ್ಬನಿ ಕರಗಲು
ಕೈಯುಜ್ಜಿ ಬೆಚ್ಚನೆಯ ಬೆಂಕಿಯ ಶಾಖ
ಪಡೆಯಲು ಹಾತೊರೆಯುತಿಹೆ
ಸದ್ದಿಲ್ಲದೇ ಬರುವ ನಸುಕಿನ ಹಾಗೆ
ಬಂದು ಬಿಡು ಒಲವೆ…………
*****
-೨-
ಯಾಕೋ
ಹಳೆಯ ಜಾಗ
ನೆನಪಾಯಿತು
ಆಕೆ
ಹೇಳಿದಳು ;
ನೀನಿಟ್ಟ
ಹೆಜ್ಜೆಯಲಿ
ಹೆಜ್ಜೆಯಿಟ್ಟು
ನೀರೆರೆದು
ಬರುವೆ
ಎಂದು ??
*****
-೩-
ಮಲ್ಲಿಗೆ ಬಳ್ಳಿಗೆ
ಮುನಿಸು ;
ಸೂರ್ಯ
ಸ್ಪರ್ಶವಿಲ್ಲ
ಅದಕ್ಕೆ
ಯಾಕೋ
ಬಳ್ಳಿಯಲ್ಲಿದ್ದ
ಮೊಗ್ಗಗಳು
ಅರಳಿಲ್ಲ ….
ಪರಿಮಳವೂ
ಎದೆಗೆ
ತಾಕುತ್ತಿಲ್ಲ…
*****
Latest posts by ಹರಪನಹಳ್ಳಿ ನಾಗರಾಜ್ (see all)
- ಮುಗಿಯಲಾರದ ದುಃಖಕೆ - January 7, 2021
- ಮರಳ ಮೇಲೆ ಮೂಡದ ಹೆಜ್ಜೆ - November 15, 2020
- ಸಾಸಿವೆಯಷ್ಟು ಸುಖಕ್ಕೆ….. - August 30, 2020