ಕನ್ನಡಿಗೆ ಹಿಡಿದ ಹಸಿವೆಗೆ
ಇಲ್ಲ ಪ್ರತಿಫಲಿಸುವ ಬೆಳಕಿಂಡಿ
ಅದಕಿಲ್ಲ ಕಣ್ಣು.
ರೊಟ್ಟಿಯ ಮೈ ತುಂಬ ಕಣ್ಣು
ಕಣ್ಣಿನ ತುಂಬ ಕನ್ನಡಿ
ಒಂದೊಂದು ಕನ್ನಡಿಗೂ
ಸಾವಿರಾರು ಪ್ರತಿಬಿಂಬ.