ಓ ಏಳಿ ಮಕ್ಕಳಿರಾ ಚಲುವಾತ್ಮ ಕಂದರಿರಾ
ಅಮೃತದ ವರಗಳಿಗಿ ಬಂತು ಏಳಿ
ಶುಕ್ರತಾರೆಯ ತುಂಬಿ ಅಮೃತವ ತಂದಿರುವೆ
ಓ ರಾಜಹಂಸರಿರ ಏಳಿ ಏಳಿ

ರಾಜಹಂಸರು ನೀವು ರಾಜವಂಸರು ನೀವು
ಜ್ಞಾನಮುರಳಿಯ ಕೊಳಲು ಕೇಳಬನ್ನಿ
ಬಿಳಿಯಾನೆ ಬಿಳಿಹುಲಿಯು ಬಿಳಿಸಿಂಹ ನೀವಯ್ಯ
ನವಯುಗದ ರಂಗೋಲಿ ಬರೆಯಬನ್ನಿ

ಶಾಂತಿಧಾಮವ ಬಿಟ್ಟು ನಿಮ್ಮ ಧಾಮಕೆ ಬಂದೆ
ನಿಮ್ಮಾತ್ಮ ಬಾಗಿಲವ ತೆರೆಯ ಬಂದ
ಜ್ಯೋತಿ ಸಾಗರ ತಂದೆ ಪ್ರೀತಿ ಸಾಗರ ತಂದೆ
ಜ್ಞಾನಸಾಗರ ನಿಮಗೆ ಸುರಿಯು ಬಂದೆ

ಕಣ್ಣು ಮುಚ್ಚಲು ನರಕ ಕಣ್ಣು ಬಿಚ್ಚಲು ಸ್ವರ್ಗ
ನವಯುಗದ ಕಹಳೆಯನು ಊದಲೇಳಿ
ಕಲಿಯುಗದ ಕಲ್ಲುಗಳ ಕಲಹದಾ ಮುಳ್ಳುಗಳ
ಮಲ್ಲಿಗೆಯ ಹೂಗೊಳಿಸಿ ನಗಿಸಲೇಳಿ.
*****