ಸ್ವಸ್ಥವಾಗು ಮನ

ಸ್ವಸ್ಥವಾಗು ಮನ ಶಾಂತವಾಗು ಮನ ದಿನದಿನವು ನವೋನ್ಮೇಷವಾಗು ಮನ ಸ್ವಚ್ಛವಾಗು ಅಚ್ಛೇದದಂತೆ ಮನ ಸಮಚಿತ್ತವಾಗು ಆಕಾಶದಂತೆ ಮನ ಗಹನವಾಗು ಸಮುದ್ರದಂತೆ ಮನ ಉನ್ನತವಾಗು ಪರ್‍ವತದಂತೆ ಮನ ಹಗುರಾಗು ತಿಳಿ ಮೋಡದಂತೆ ಮನ ಘನವಾಗು ಬ್ರಹ್ಮಾಂಡದಂತೆ...

ತಾಯಿಯ ಮುದ್ದು

ನಿದ್ದೆಯೊಳಿದ್ದೆನೊ ಎಚ್ಚರವಿದ್ದೆನೊ ನನಸೋ ಕನಸೋ ಎಂತರಿವೆ? ವರುಷವೆ ತುಂಬದ ಕೂಸಾಗಿರೆ ನಾ ಎನಗಿದ್ದಿತು ಹಿರಿಯನ ಪರಿವೆ. ಎಳೆಯನ ಮುದ್ದಿಡುತಿದ್ದಳು ತಾಯಿ ತುಟಿಗಿಳಿಯುತ್ತಿರೆ ಕಣ್ಣೀರು. ತುಟಿಜೇನಿನ ಸಿಹಿಗುಪ್ಪಿನ ರುಚಿ ಬರೆ ಆ ರುಚಿಯನು ಬಣ್ಣಿಪರಾರು! ಒಲಿದನುಪೇಕ್ಷೆಯೊ...