ಕವಿ

ಸುಗ್ಗಿ ಬರುತಿರೆ ನಲಿದು ಶುಕಪಿಕಗಳುಲಿಯುವವು ತಮ್ಮರಸುವಾತಿನೊಳು - ತಂಗಾಳಿಯೂದುವವು. ಇಳೆಯನೆಲ್ಲವ ತುಂಬ ಕೊನೆಗೊಮ್ಮೆ ಮೋದವದು ಧ್ವನಿತವಾಗಿರೆ ಜೀವಕೋಟಿಗಳು ನಲಿಯುವವು ಎಳೆವಾತಿನಲಿ ನುಡಿದು ಹಸುಮಗಗಳೊಲಿಯುವವು ಅವರ ತೊದಲ್ನುಡಿಗಳಲಿ ವಳೆವಾತ ಕಾಣುವದು, ಮತ್ತೆ ಪರಮಾರ್‍ಥವನು, ತಾಯಂದಿರ ಪ್ರಾಣವದು!...