ಪಕ್ವತೆ
ಹಣಿಸೆ ಮಾವು ಹುಳಿಯಿಂದಲೆ ಹುಟ್ಟುತ್ತವೆ ಮುದಿಯಾದರು ಹುಣಿಸೆ ಹಾಗೆ ಉಳಿಸಿಕೊಳ್ಳುತ್ತೆ ಹುಳಿಯನ್ನು ಮಾವು ಹಣ್ಣಾಗುತ್ತ ಕಳೆದು ಕೊಳ್ಳುತ್ತೆ ಹುಳಿಯನ್ನು *****
ಒಂದೇ ಒಂದು ಮರದ ನೆರಳನ್ನಾಗಲೀ, ಬೀಜವನ್ನಾಗಲೀ, ಬೇರನ್ನಾಗಲೀ ಕಾಣದೆ ಇಷ್ಟು ಹೊತ್ತು ನಡೆದುಕೊಂಡು ಬಂದ ಮೇಲೆ ನಾಯಿ ಬೊಗಳುವುದು ಕೇಳುತ್ತಿದೆ. ರಸ್ತೆಯಲ್ಲದ ರಸ್ತೆಯಲ್ಲಿ ಅರ್ಧ ದೂರ ನಡೆದ ಮೇಲೆ-ಇದರಾಚೆಗೆ ಇನ್ನೇನೂ ಇಲ್ಲ, ಹಳ್ಳ, ಕೊರಕಲು, ಬತ್ತಿದ ನದಿ ಪಾತ್ರಗಳ ಈ ಬಯಲಾಚೆಗೆ ಇನ್ನೇನೇನೂ ಇಲ್ಲ ಅಂತ ಆಗಾಗ ಅನ್ಕಿಸುತಿತ್ತು. ಆದರೂ ಏನೋ ಇದ್ದ ಹಾಗಿದೆ. ಹಳ್ಳಿ […]