ಹಣದ ವ್ಯಾಖ್ಯೆಗಳು ಮತ್ತು ಕಾರ್ಯಗಳು
ಹಣ ಇಲ್ಲದಿದ್ದರೆ ಇಂದು ಯಾವುದೇ ವ್ಯವಹಾರ ನಡೆಯಲಾರದು. ಸರ್ವೇಗುಣಾಃ ಕಾಂಚನಮಾಶ್ರಯಂತಿ ಎಂಬ ಹೇಳಿಕೆ ಹಣಕ್ಕೆ ಆಧುನಿಕ ಪ್ರಪಂಚದಲ್ಲಿ ಎಷ್ಟು ಮಹತ್ವವಿದೆ ಎನ್ನುವುದನ್ನು ತಿಳಿಸುತ್ತದೆ. ನಾವೆಲ್ಲರೂ ಹಣವನ್ನು ಬಳಸುತ್ತೇವೆ. ಹಣ ಮನುಷ್ಯನ ಮೂಲಭೂತ ಸಂಶೋಧನೆಗಳಲ್ಲಿ ಒಂದು...