ಆದೀತೆ!

ಒಂದು ಹೂವು ಇನ್ನೊಂದು ಹೂವಿನಾಳಗಲಗಳ ಕಂಡೀತೇ? ಅದರಂದ ಮಕರಂದಗಳ ಸವಿದೀತೆ? ಒಂದರ ಮಹತಿ ನಿಯತಿಗಳನರಿತೀತೆ? ಅದರಾಗುಹೋಗುಗಳನಳೆದೀತೇ? ಹಾಗೆ ಮಾಡಲು ಬೆಳಗನೊಳಗೊಂಡ ಅರುಣೋದಯದಂತೆ, ಮರವ ಧ್ಯಾನಿಸುತ್ತ ಕುಳಿತ ಬೀಜದಂತೆ, ಕೂಸು ಹೀಚಾಗಬೇಕೆನಿಸುತ್ತದೆ ಇಲ್ಲವೇ ಹಗಲುಗನಸು ಕಂಡುಂಡು...