ಲಿಂಗಮ್ಮನ ವಚನಗಳು – ೩೪

ನಾಮ ರೂಪು ಕ್ರಿಯೆಗಿಲ್ಲದ ಘನವ ನಾಮರೂಪಿಂಗೆ ತಂದಿರಯ್ಯ. ಅದೇನು ಕಾರಣವೆಂದರೆ, ನನ್ನ ಮನಕ್ಕೆ ಚನ್ನಮಲ್ಲೇಶ್ವರನಾದಿರಿ. ಹೀಗೆಂದು ನಿಮ್ಮ ನಾಮಾಂಕಿತ ಹೀಗಾದರೂ ಕಾಣಲರಿಯರು. ನಡೆ ನುಡಿ ಚೈತನ್ಯವಿಡಿದು, ಕರದಲ್ಲಿ ಲಿಂಗ ಪಿಡಿದು, ಚನ್ನಮಲ್ಲೇಶ್ವರನೆಂಬ ನಾಮಾಂಕಿತವಿಡಿದು ಬರಲಾಗಿ...