ಲಿಂಗದೊಳಗೆ ಮನವಿಡದಿನ್ನಾ ವರದ ಇಂಗಿತ ತಿಳಿಯದವಗೇನು ಫಲ? ಜಂಗಮ ಜಂಗುಕಟ್ಟಿ ಹಿಂಗದೆ ತಿರುಗಲು ಸಂಗನ ಶರಣರಿಗೇನು ಫಲ? ||ಪ|| ಮೂರ ಮನಿಯ ಭಿಕ್ಷ ಬೇಡದಲೇ ಮ- ತ್ತಾರ ಭಕ್ತರೊಡನಾಡದಲೇ ಚಾರು ತರದ ಪಂಚಾಕ್ಷರಿ ಜಪವನು ಬಾರಿ ಬಾರಿಗೆ ಮಾಡದಲೇ ||೧|| ಭಂ...

ಹರಿದಾಡುವ ಮನಸಿಗೆ ಮಚ್ಚಿ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ ||ಪ|| ಕಡು ವಿಷಯದಿ ಸಂಸಾರಕ ಮರಗುತ ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ ಮಚ್ಚಿ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ ||೧|| ಸಿರಿ ಸಂಪತ್ತು ಸೌಭಾಗ್ಯ ತನಗೆ ಬಲು ಪಿರಿದಾಗಲಿ ಬೇಕೆಂಬುವ ಮನಸ...

ಮನಸೇ ಮನಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನಬ್ಯಾರೆಲೋ ಮನಸೇ ||ಪ|| ತನುತ್ರಯದೊಳು ಸುಳಿದಾಡುವ ಜೀವನ ಗುಣವರಿತರೆ ನಿಜಬಾರಲೋ ಮನಸೇ ||೧|| ದಶದಿಕ್ಕಿಗೆ ಹಾರಾಡುವ ಹಕ್ಕಿಯು ಸಿಕ್ಕು ತಪ್ಪಿಸೋಪರಿ ಬ್ಯಾರಲೋ ಮನಸೇ ||೨|| ಗುರುಗೋವಿಂದನ ...

ಹೊತ್ತುಗಳಿಯದಿರೆಲೋ ಮನವೆ          ||ಪ|| ಗೊತ್ತು ಇಲ್ಲದೆ ನೀನು ಬರಿದೆ ಚಿತ್ತಚಂಚಲನಾಗಿ ಚರಿಸ್ಯಾಡುತ್ತ ನಾನಾ ವಿಷಯಗಳನು ಹೊತ್ತು ಶ್ರಮದೊಳಾಡಬೇಡ  ||ಅ.ಪ.|| ವ್ಯರ್ಥಒಂದಿನವಾಗಿ ತೊಲಗಿದಿ ಅತ್ತು ಯಮನ ದೂತರೊಯ್ಯೆ ಚಿತ್ರಗುಪ್ತರು ಲೆಖ್ಖ ತೋರಿ...

ಎಂತು ಮರಿಯಲವ್ವಾ ಇವನಾ ಶಾಂತ ಶರೀಫನಾ ಅಂತರಂಗದಲ್ಲೇ ಬಂದು ಚಿಂತೆ ದೂರ ಮಾಡಿದನವ್ವಾ ||೧|| ಕಾಲ ಕರ್ಮವ ಗೆದ್ದು ಲೀಲೆಯಾಡಿದನೆ ಮೇಲುಗಿರಿಯ ಮೇಲಕ್ಕೆ ಹತ್ತಿ ಅಲಕ್ಕನೆ ಹಾರಿದನೆ ||೨|| ಜನನ ಮರಣವಗೆದ್ದು ತಾನು ಶಿವನಲೋಕ ಕಂಡನೆ ಭುವನದೊಳು ಶಿಶುವಿ...

ಯೋಗಿಯ ಕಂಡೆನು ಹುಚ್ಚೇಂದ್ರ ಯೋಗಿಯ ಕಂಡೆನು ನಾನು ||ಪ|| ಭೋಗವಿಷಯವ ತ್ಯಾಗ ಮಾಡಿದ ಆಗಮವ ತಿಳಿದಂಥ ಮಹಾಗುರು ಲಾಗದಿ ಲಕ್ಷಣವ ಬಿಂದುವಿನೊಳಗೆ ತೋರಿದ ಈಗ ನೋಡಿದೆ ||೧|| ಸ್ಥೂಲದೇಹವ ತಾಳಿದ ಜನರ ಬಿಟ್ಟು ಮೂಲ ಬ್ರಹ್ಮವ ಪೇಳಿದ ಕಾಲ ಕರ್ಮವ ಗೆಲಿದು ...

ಚಿಂತೆಯಾತಕೋ ಯೋಗಿಗೆ ಸದ್ಗುರುವಿನಂತರಂಗದ ಭೋಗಿಗೆ ||ಪ|| ಕಂತುವಿನ ಕುಟ್ಟಿ ಕಾಲಮೆಟ್ಟಿ ನಿಂತು ನಿಜ ಶಾಂತದಲಿ ಮೆರೆಯುವಾತನಿಗೆ ||ಅ.ಪ.|| ಕರಣಗಳ ಕಳಿದಾತಗೆ ಮರಣ ಮಾಯಾದುರಿತಭವವನ್ನು ಅಳಿದಾತಗೆ ಶರಣಸೇವೆಯೊಳಿದ್ದು ಹರಣ ಮತ್ಸರಗೆದ್ದು ಧರಣಿಯೊಳು ...

ಯೋಗಿಪದಕೆ ಅರ್ಥವಿಲ್ಲವೋ ಸದ್ಗುರು ನಿರಾಲ ||ಪ|| ಭೋಗ ವಿಷಯ ನೀಗಿ ಭವದ ಬ್ಯಾಗಿಯಳಿದು ಬ್ರಹ್ಮ ಸುಖದ ||ಅ.ಪ.|| ತನುವಿನಾಶಯರಿದು ಮಾಯಾ- ಗೊನಿಯ ಕೊರಿದು ಕರ್ಮಸಾಗರ ಕನಸಿನಂತೆ ತಿಳಿದು ತಾನೆ ಚಿನುಮಯಾತ್ಮನಾಗಿ ಮೆರೆವ ||೧|| ಶಿಶುನಾಳೇಶ ಈಶನಲ್ಲಿ ...

ಯೋಗಮುದ್ರಿ ಬಲಿದವನೆಂಬೋ ಆಗ ಮೂಲದಿ ನಿನಗೆ ಭೋಗ ವಿಷಯ ಲಂಪಟಂಗಳನರಿಯದೆ ಲಾಗವನರಿಯದೆ ಹೀಗಾಗುವರೆ ||೧|| ವಿಷಯದೊಳಗೆ ಮನಸನಿಟ್ಟು ಹುಸಿಯ ಬೀಳುವರೇನೋ ಮರುಳೆ ಅಸಮ ತೇಜವನು ತನ್ನೊಳು ಕಾಣುತ ಶಶಿಕಿರಣದ ರಸವನರಿಯದೆ ||೨|| ಬಗಿದುನೋಡಿ ಬ್ರಹ್ಮಜ್ಞಾನ ...

ಸಂಸಾರದಿಂದ ಸದ್ಗತಿಹೊಂದಿ ಹವಣವರಿತು ಮಾಯೆಯ ಜಯಸಿ ಮರಣ ಗೆಲಿದವನೇ ಶಿವಯೋಗಿ ||ಪ|| ಭವಭಾರ ಜಾಯ ಕರ್ಮಗಳನು ಬಯಸಿ ಬ್ಯಾರೆ ಬಯಲು ಬ್ರಹ್ಮದಿ ಬೆರೆತು ಬ್ರಹ್ಮಜ್ಞಾನ ದೊರೆವುತನಕ ತ್ರಿನಯನ ಆಶ್ರಯ ಹಿಡಿದು ಆವುದನರಿಯದೆ ಮುನ್ನಾ ಅನುವರಿತು ಸವಿಗರಿದು ...

1...678910...15

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...