Home / ಲೇಖನ / ಅಣಕ

ಅಣಕ

ಈಗೀಗ ರಾಜಕೀಯದಾಗೆ ವಿಶೇಷ ಏನಿಲ್ಲ ಅನ್ನಂಗೇ ಇಲ್ ಬಿಡ್ರಿ. ಗೋಡ್ರು ನಾಟಕಕ್ಕೆ ಹೊಸ ಹೊಸ ಸೀನರಿಗಳು ಬರೆಸ್ತಾ ಅವ್ರೆ. ರಾಜಿನಾಮೆ ಕೊಟ್ಟರೂ ಅವರೆಯಾ ತಕ್ಕೊಂಡರೂ ಅವರೆಯಾ. ಕೊಟ್ಟಿದ್ದು ಯಾಕೋ ತಕ್ಕೊಂಡಿದ್ದು ಯಾಕೋ ಯಾರು ಕೇಳ್ಳೂ ಇಲ್ಲ ಇವರು ಹೇಳ್ಳ...

‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಿಗಳಿಗೆ ಪರ್ವದಿನ ಅಲ್ದೆ ಹಾಲಿ ಪ್ರೇಮಿಗಳಿಗೆ ಜಾಲಿಡೇ. ಭಾವಿ ಪ್ರೇಮಿಗಳಿಗೆ ಅಪ್ಲಿಕೇಶನ್ ಗುಜರಾಯಿಸಿ ಪ್ರೇಮಿಯ ಫೀಲ್ ಅಪೀಲ್ ಮಾಡಿ ಗೋಲ್ ಹೊಡೆಯಲು ಹೆಲ್ಪ್ ಮಾಡೋ ಗ್ರೇಟ್ ಡೇ. ಮಾಜಿ ಪ್ರೇಮಿಗಳಿಗೆ ಗತಕಾಲ ನೆನಪು...

ಜೆಡಿ(ಎಸ್) ಅಂದ್ರೆ ಜನತಾದಳ ಸನ್ಸ್ ಯಾನೆ ಗೋಡ್ರ ಸನ್ಸ್ ಅಂತ ಸಾಬೀತಾಗೋತು ನೋಡ್ರಿ. ಯಾಕಂತಿರಾ, ಸೆಕ್ಯುಲರ್ ಅಂದ್ರೇನು ಅಂತ್ಲೆ ಪಟ್ಟಾಧಿಕಾರಿ ಕುಮಾರಂಗೆ ಗೊತ್ತಿಲ್ಲಂತೆ ಪಾಪ. ಅಪ್ಪ ಮಕ್ಳು ಸಪರೇಟ್ ಆಗಿ ಕಂಡಕಂಡ ದೇವರಿಗೆಲ್ಲಾ ಕಾಯಿ ಒಡೆಸಿ ‘ಸಿ...

ದೋಸ್ತಿ ಸರ್ಕಾರ ಗೋಡ್ರ ಹಿಕ್‌ಮತ್‌ನಿಂದಾಗಿ ಪಲ್ಟಿ ಹೊಡೆದೋತಲ್ರಿ. ಸರ್ಕಾರದ ಓಲ್ಡ್ ಮ್ಯಾನ್‌ಗಳಾದ ಪ್ರಕಾಸು, ಸಿಂಧ್ಯ, ಮಂಜುನಾಥ, ಮಾದೇವರೆಲ್ಲಾ ಅನಾಥರಾಗಿ ಮೊಲೆಗೆ ಬಿದ್ದಾರೆ. ಎಳೆ ಹುಡುಗರ ಗುಂಪು ಕಟ್ಕೊಂಡು ರಾಜ್ಯ ಆಳೋಕೆ ಹೊಂಟಾನೆ ಗಂಡುಗಲಿ ...

ಗುರು ಬ್ರಮ್ಮ ಗುರು ಇಷ್ಣು ಗುರುದೇವೋ ಮಹೇಸ್ವರ ಅಂತ ಮೊನ್ನೆವರ್ಗೂ ನೆಮ್ಮದಿಯಾಗಿದ್ದ ಮಂದಿ ನಂಬ್ಕಂಡಿತ್ತು. ಆಗ್ದಿ ಭಯಂಕರ ಗೌರವಾನ ಮೇಷ್ಟ್ರ ಪೋಸ್ಟಿಗೆ ಕೊಡೋದು, ಬಡಮೇಷ್ಟ್ರು ಅಂಬೋ ಕನಿಕರವೂ ಇತ್ತು. ಲಂಚಪಂಚ ಹೊಡೆಯಂಗಿಲ್ಲ ಬೇರೆ ಆಮದಾನಿ ಇಲ್ಲ...

‘ಎರಡು ಸಾವಿರದಾ ಆರು ಬಿಜೆಪಿ ಗದ್ದುಗೆಗೆ ಹಾರು’ ಆಂತ ಈಸಲ ಮೈಲಾರ್ದಾಗೆ ಕಾರಣೀಕ ನುಡಿದಾರಂತ ಬಿಜೆಪಿನೋರು ಇದೀಗ ನ್ಯೂಸ್ ಹಬ್ಬಿಸ್ಯಾರೆ. ಮಿಕ್ಸಚರ್ ಸರ್ಕಾರ ನಡೆಸಿದ ಜಿಪಂ, ತಾಪಂ ಚುನಾವಣೆದಾಗ ಕಾಂಗ್ರಸ್ ಮೆಜಾರ್ಟಿ ಬರುತ್ಲು ಧರಂ ಮೋರೆ ಮೊರದಗಲಾ...

ರಾಘವೇಶ್ವರ ಭಾರತೀ ಸ್ವಾಮಿ ಎಂಬ ಆಸಾಮಿಗೆ ದಿಢೀರನೆ ಗೋವುಗಳ ಮ್ಯಾಗೆ ಸೆಂಟ್ ಪರ್ಸೆಂಟ್ ಲವ್ ಹೆಚ್ಚಾಗಿ ಅವುಗಳ ಸಂರಕ್ಷಣೆಗಂತ ಭಾರತದಾದ್ಯಂತ ದಂಡಯಾತ್ರೆ ಹೊಂಟಿರೋದು, ಗೋವಿನ ಬಗ್ಗೆ ವಿಶ್ವ ಕೋಶನೇ ತರ್ತೀನಿ ಅಂತ ಶಂಕರಾಚಾರ್ಯರ ಮ್ಯಾಗೆ ಆಣೆ ಮಾಡಿರ...

ಕಳೆದ ವಾರವೆಲ್ಲಾ ಎಲ್ಲಾ ಟಿವಿ ಚಾನಲ್ಲು ಪತ್ರಿಕೆಗಳ ಕಾಲಂ ತುಂಬಾ ಕಾಶಿನಾಗ್ಳ ಸಂಕಟಮೋಚನ ಹನುಮಾನ್ ಮಂದಿರದಾಗೆ ಬಾಂಬ್ ಸ್ಫೋಟವಾಗಿ ಡೆತ್ತುಗಳಾದ ನ್ಯೂಸೋ ನ್ಯೂಸು. ಮುಸ್ಲಿಮರಿಗೆ ಮೆಕ್ಕಾ ಹೆಂಗೋ ಹಿಂದೂಗಳಿಗೆ ಕಾಶಿ ಹೋಲಿ ಪ್ಲೇಸ್ ಅಂತಾರೆ. ಆದರೆ ...

ಅಡ್ವಾಣಿ ಎಂಬ ಓಲ್ಡ್ ಮಾಡಲ್ ರಾಜಕಾರಣೀಯ ನಲವತ್ತು ವರ್ಷಗಳ ಸುಧೀರ್ಘ ಸೇವೆ ಅಂಬೋದು ಹಾಳು ತೋಟಕ್ಕೆ ನೀರು ಹೊತ್ತು ಬೀಳ್ ರೆಟ್ಟೆ ಕೆಡವಿಕ್ಯಂಡ್ರು ಅಂಬಗಾತೇ ನೋಡ್ರೀ. ಬಿಜೆಪಿ ರಜತಮಹೋತ್ಸವದ ಕೊಡುಗೆಯಾಗಿ ಹಿರಿಯ ತೆಲಿಗಳ ನಿವೃತ್ತಿ ಘೋಷಣೆಯೇ ಪ್ರಮ...

ತಮಿಳುನಾಡಿನ ಮಂದಿ ಭಾಳ ಎಮೋಷನಲ್ರಿ. ಸಿನೆಮಾನೂ ಹಂಗೆ ಇರ್ತಾವೆ. ವಿಲನ್ನು ಒಬಾನೆ ಅಲ್ಲ ಹೀರೋನೂ ಒದರ್ತಾನೆ, ಹೀರೋಯಿನ್ನೂ ಚೀರ್ತಾಳ. ಭಾಷೆನೆ ಹಂಗೈ ಬಿಡ್ರಿ ಗಟ್ಟಿ ಭಾಷೆ ಗಟ್ಟಿಜನ. ಹಂಗಿಲ್ಲದಿದ್ರೆ ಬೆಂಗಳೂರ್‍ನ ತಮ್ಮದೇ ಮಾಡ್ಕೊಂಡು ಕನ್ನಡಿಗರನ...

1...34567

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...