
ಸತ್ತಂಗ ನೀ ಮಾಡ ಅತ್ತಂಗ ನಾ ಮಾಡ ಪೂಜಾರಿ ನಾನಽ ಪರಮೇಶಿ ||ಪಲ್ಲ|| ಕಲ್ಲಾಗಿ ನೀ ಕೂಡ ಬೆಲ್ಲಾ ನಾ ಕೊಡತೇನ ಬಕುತರು ಬರಲೇ ನಿನಗುಡಿಗೆ ಗಂಟಿ ಗುಗ್ಗುಳ ನಿನಗ ಹುಗ್ಗಿ ಹೋಳಿಗಿ ನನಗ ಬಂಗಾರ ಕಳಸಾ ನಿನಮುಡಿಗೆ ||೧|| ನೀ ಕಲ್ಲು ಆದರ ಕಲ್ಲೆಲ್ಲ ಕೈವಲ್...
ರಸದ ರುಚಿಯಿಂ ರೂಪ ಶುಚಿಯಿಂ ಏರು ಎತ್ತರ ಬಿತ್ತರ ಗಾನ ಮಾನಸ ಗಗನ ಹಂಸೆಯ ಆಗು ಅರುಹಿಗೆ ಹತ್ತರ ||೧|| ಗಗನ ಬಾಗಿಲ ಮುಗಿಲ ಬೀಗವ ಮಿಂಚು ಫಳಫಳ ತೆರೆಯಲಿ ಬಿಸಿಲ ಭೀತಿಯ ಹಕ್ಕಿ ಕಂಠವ ಮಳೆಯು ಗುಳುಗುಳು ನಗಿಸಲಿ ||೨|| ಬಿಲ್ವ ಬಳುವಲ ಮಲೆಯು ಬೆಳವಳ ಹ...
ಊದ್ಸೊರು ಬಂದಾರ ಬಾರ್‍ಸೋರು ಬಂದಾರ ಬೆಂಗ್ಳೂರ ಹುಡಿಗಿ ಬರಲಿಲ್ಲೋ ಹುಬ್ಬಳ್ಳಿ ಹುಡುಗಾ ಕಂಚೀನ ಕಡಗಾ ತಲವಾರ ಬೆಡಗಾ ಸಜ್ಜಾದೋ ||೧|| ಸೋಗ್ಲಾಡಿ ಮೂಲಂಗಿ ಹುಳಕ್ಲಾಡಿ ಹುಚಗಿಂಡಿ ಹಿಂಗ್ಯಾಕ ಮಾಡ್ತಾಳ ಸುಸ್ತಸುಸ್ತಾ ದೀಡ್ ಪೈಯಿ ಧೀಮಾಕಿ ಥೈಯ್‍ಥೈಯಿ ...
ನೀನೆ ತುಪ್ಪ ನಾನೆ ದೀಪ ದೀಪ ಗೊಳಿಪೆ ಅಂಗಳಾ ||ಪಲ್ಲ|| ಬ್ರಹ್ಮ ತತ್ವ ಭೂಮಿ ಯುಕ್ತ ಮಧ್ಯ ಸುಮಮ ಸಂಪದಂ ಸಟೆಯ ಲೋಕ ಅವುಟು ಶೋಕ ಬಿಟ್ಟ ಬೀಕು ಬೆಂತರಂ ||೧|| ಇತ್ತ ಯಾತ್ರಿ ಸುತ್ತ ಧಾತ್ರಿ ರಕ್ತ ರಾತ್ರಿ ನರ್ತನಂ ಅತ್ತ ಅಮಮ ಶಾಂತಿ ಘಮಮ ಅಮರ ಸುಮಮ ...
ಯಸ್ ಯಸ್ ಯಲ್ಲವ್ವಾ ಡಿಸ್ ಮಿಸ್ ಕಲ್ಲವ್ವಾ ಕಾಳವ್ವಾ ಧೂಳಪ್ಪಾ ಕೇಳವ್ವಾ ||ಪಲ್ಲ|| ಮಜಕಟ ಕಟಕಟ ಕಿವಿತುಂಬ ವಟವಟ ಉಸ್ಸ್ ಉಸ್ಸ್ ಉಸ್ಸಾರ್‍ಗೋ ಕಿಸ್ಸ್ ಮಿಸ್ಸ್ ಹುಸಾರ್‍ಗೊ ಹಾಳಕೆರಿ ಹಳೆದವ್ವಾ ಬಡಿತೋ ಬಡಿತೋ ದೆವ್ವನ್ ಹೇಂತಿ ಹಳೆದವ್ವಾ ಹಡಿತೋ ಹಡ...
ಕರಿಯ ಕಾಮಿ ಟಾಮಿ ಬೆಕ್ಕು ಹಾಲು ಕುಡಿದು ಓಡಿತು ಪರಚಿ ಹೋದ ಚಿರತೆ ನಂಜು ಕಣ್ಣು ಮಂಜು ಮಾಡಿತು ||೧|| ಹಗಲಿನೆದೆಯ ರಾತ್ರಿ ಹುಣ್ಣು ಹೆಚ್ಚಿ ಕೊಚ್ಚಿ ಹಾಕಿದೆ ಸಾವು ಸಂತೆ ಹಾವು ಚಿಂತೆ ಚಿಂದಿ ಚೂರು ಮಾಡಿದ ||೨|| ಸಾಕು ಶಿವನ ಹೋತು ಹರನೆ ಹಗೆಯ ದೆ...
ನಾಚಿಗಿ ಬರತೈತೆ ನನಗಂಡಾ ನಿನಕೂಡ ನಾಚಿಗಿ ಬರತೈತೆ ||ಪಲ್ಲ|| ಬಾಯಾಗ ಹಲ್ಲಿಲ್ಲ ಕಣ್ಣಾಗ ಎಣ್ಣಿಲ್ಲ ಸಗತಿಲ್ಲ ನಡಿಗೀ ಸುಗತಿಲ್ಲ ಜೋತಾಡಿ ಹೋಗ್ತೀದಿ ಮಾತಾಡಿ ಬೀಳ್ತೀದಿ ಮೈಮ್ಯಾಲ ವೈನಾ ನಿನಗಿಲ್ಲ ||೧|| ಗೆಳತೇರು ಗರತೇರು ಗ್ವಾಡಂಬಿ ಚಲುವೇರು ತೇರ...
ಇನ್ನು ಸಾಕು ನಿಲ್ಲು ಹೋಗು ಕಲಹ ಕಲಿಯ ಕಾಲನೆ ಇನ್ನು ತಡೆದ ರಾಣೆ ಹರನೆ ಬರಲಿ ರಾಮ ದೇವನ ||೧|| ಕಥೆಯ ಮೇಲೆ ಕಥೆಯು ಹತ್ತಿ ವ್ಯಥೆಯ ಬಣವೆ ಉರಿದಿದೆ ಉರಿಯ ಮೇಲೆ ಉರಿಯು ಹತ್ತಿ ಕಡೆಯ ತೇರು ಸರಿದಿದೆ ||೨|| ಸಕ್ರಿಗಿಂತ ರುಚಿಯು ರಕ್ತ ರಕ್ತದಾಹ ಕೂಗ...
ತೂತೂರೆ ಫೂಫೂರೆ ಚೀಚೀರೆ ಚಿಂಪಂಜಿ ಟೊಂಟೊಂಗಿ ಹಾರ್‍ಯಾವೆ ಕೋಡಂಗಿ ಹೊಳೆಹಳ್ಳ ಹರಿದಾವೆ ಸುಳಿಗೂದ್ಲ ಕರದಾವೆ ಕಚ್ಯಾವೆ ಗಲ್ಲಾವ ಬೋರಂಗಿ ||೧|| ಕುಡದಾಳ ಕುಣದಾಳ ಮಣವಾಳ ಗಿಣಿನಾರಿ ಉಟಸೀರಿ ಗೂಟಕ್ಕ ಹಾಕ್ಯಾಳ ಸಿಂಬಿ ತುರುಬಾ ಬಿಚ್ಚಿ ಕೊಂಬಿರೆಂಬಿಯ ...
ಕಾಳ ರಾತ್ರಿ ಚೋಳ ರಾತ್ರಿ ಹಾಳ ಗೂಗಿ ಹಾಡಿದೆ ಗಗನದಲ್ಲಿ ಚಿಕ್ಕಿ ಮೂಡಿ ಮೂಡಿ ಮುಳುಗಿ ಸತ್ತಿದೆ ||೧|| ತೇಲಿ ತೇಲಿ ಚಳಿಯ ಗಾಳಿ ಹುಳ್ಳ ಹುಳಿಯ ಮಾಡಿದೆ ಮಳೆಯ ಗೂಗಿ ಹಳೆಯ ಕಾಗಿ ಸವುಳು ಸುಣ್ಣಾ ಆಗಿದೆ ||೨|| ಬೆಟ್ಟದಲ್ಲಿ ಕಾಡು ಕೋಳಿ ಗಟ್ಟಿಯಾಗಿ ...







